‘ಲಿಯೋ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ? ಟೈಟಲ್ ವಿಚಾರದಲ್ಲಿ ಎದ್ದಿದೆ ಗಲಾಟೆ
‘ಸಿತಾರಾ ಎಂಟರ್ಟೇನ್ಮೆಂಟ್’ನ ಮಾಲೀಕ ನಾಗ ವಂಶಿ ಅವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ‘ಲಿಯೋ’ ಸಿನಿಮಾದ ಟೈಟಲ್ ಹಕ್ಕು ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ದಾಖಲೆಗಳನ್ನು ಕೂಡ ನೀಡಿದ್ದಾರೆ. ಹೀಗಾಗಿ ಕೋರ್ಟ್ ಈ ಆದೇಶ ನೀಡಿದೆ ಎನ್ನಲಾಗುತ್ತಿದೆ. ಈ ವಿಚಾರ ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ದಳಪತಿ ವಿಜಯ್ ನಟನೆಯ ‘ಲಿಯೋ’ (Leo Movie) ಸಿನಿಮಾಗೆ ಉಂಟಾಗಿರುವ ಅಡೆತಡೆಗಳು ಒಂದೆರಡಲ್ಲ. ಈ ಚಿತ್ರಕ್ಕೆ ಸಾಕಷ್ಟು ವಿಚಾರದಲ್ಲಿ ಹಿನ್ನಡೆ ಆಗುತ್ತಿದೆ. ಈಗ ಚಿತ್ರದ ಟೈಟಲ್ ವಿಚಾರದಲ್ಲಿ ಗಲಾಟೆ ಎದ್ದಿದೆ. ಈ ಪ್ರಕರಣ ಕೋರ್ಟ್ ಅಂಗಳಕ್ಕೆ ಹೋಗಿದೆ. ಈ ಚಿತ್ರದ ರಿಲೀಸ್ಗೆ ಕೋರ್ಟ್ ತಡೆ ನೀಡಿದೆ ಎಂದು ವರದಿ ಆಗಿದೆ. ಈ ಎಲ್ಲಾ ಕಾರಣದಿಂದ ದಳಪತಿ ವಿಜಯ್ (Thalapathy Vijay) ಅಭಿಮಾನಿಗಳಿಗೆ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಸಿನಿಮಾ ರಿಲೀಸ್ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ ಮೊದಲಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ದೊಡ್ಡ ಬಜೆಟ್ನ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಕೊನೆಯ ಕ್ಷಣದಲ್ಲಿ ಒಂದಷ್ಟು ಮಂದಿ ತೊಂದರೆ ಕೊಡಲೆಂದೇ ಕಾಯುತ್ತಾ ಇರುತ್ತಾರೆ. ‘ಕೆಜಿಎಫ್’ ರಿಲೀಸ್ ಸಂದರ್ಭದಲ್ಲಿ ಇದೇ ರೀತಿ ಆಗಿತ್ತು. ಆದರೆ, ಸಮಸ್ಯೆ ಪರಿಹರಿಸಿಕೊಂಡು ಚಿತ್ರ ರಿಲೀಸ್ ಆಯಿತು. ಈಗ ‘ಲಿಯೋ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಆಗಿದೆ. ಹೈದರಾಬಾದ್ನ ಸಿವಿಲ್ ಕೋರ್ಟ್ ಅಕ್ಟೋಬರ್ 20ರವರೆಗೆ ಸಿನಿಮಾ ರಿಲೀಸ್ ಮಾಡದಂತೆ ಆದೇಶ ನೀಡಿದೆ ಎಂದು ಕೆಲವು ಇಂಗ್ಲಿಷ್ ವೆಬ್ಸೈಟ್ಗಳು ವರದಿ ಮಾಡಿವೆ.
ಇದನ್ನೂ ಓದಿ: ಲಿಯೋಗೆ ಶಾಕ್ ಕೊಟ್ಟ ತಮಿಳುನಾಡು ಸರ್ಕಾರ, ಅಭಿಮಾನಿಗಳಿಗೆ ಭಾರಿ ನಿರಾಸೆ
ಸಿತಾರಾ ಎಂಟರ್ಟೇನ್ಮೆಂಟ್ನ ಮಾಲೀಕ ನಾಗ ವಂಶಿ ಅವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ‘ಲಿಯೋ’ ಸಿನಿಮಾದ ಟೈಟಲ್ ಹಕ್ಕು ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಅವರು ದಾಖಲೆಗಳನ್ನು ಕೂಡ ನೀಡಿದ್ದಾರೆ. ಹೀಗಾಗಿ ಕೋರ್ಟ್ ಈ ಆದೇಶ ನೀಡಿದೆ ಎನ್ನಲಾಗುತ್ತಿದೆ. ಈ ವಿಚಾರ ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ‘ಲಿಯೋ’ ಸಿನಿಮಾಗೆ ಮುಂಜಾನೆ ನಾಲ್ಕು ಗಂಟೆಗೆ ಫ್ಯಾನ್ ಶೋ ಇಡಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಇದಕ್ಕೆ ಸರ್ಕಾರ ಅನುಮತಿ ನೀಡಲೇ ಇಲ್ಲ. ಈ ವಿಚಾರದಲ್ಲಿ ಸಿನಿಮಾ ತಂಡ ಕೋರ್ಟ್ ಮೆಟ್ಟಿಲು ಏರಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಗೃಹಕಾರ್ಯದರ್ಶಿಯನ್ನು ಸಿನಿಮಾ ತಂಡದವರು ಭೇಟಿ ಮಾಡಿದ್ದರು. ಮರಳಿ ಬರುವಾಗ ಕಾರು ಅಪಘಾತ ಕೂಡ ಸಂಭವಿಸಿತು.
ಇದನ್ನೂ ಓದಿ: ‘ಲಿಯೋ’ ತಂಡಕ್ಕೆ ಮತ್ತೊಂದು ಆಘಾತ; ತಂಡದವರ ಕಾರಿಗೆ ಅಪಘಾತ
ಮುಂಜಾನೆ 7 ಗಂಟೆಗೆ ಸಿನಿಮಾ ಪ್ರದರ್ಶನ ಮಾಡಲೂ ಸರ್ಕಾರ ಅಡ್ಡಗಾಲು ಹಾಕಿದೆ. ಹೀಗಾಗಿ, ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಶೋ ಆರಂಭ ಆಗಲಿದೆ. ರಾತ್ರಿ 1:30ರವರೆಗೆ ಶೋ ನಡೆಸಬಹುದು ಎಂದು ಸರ್ಕಾರ ಆದೇಶ ನೀಡಿದೆ. ಕರ್ನಾಟಕ ಹಾಗೂ ಕೇರಳ ಮೊದಲಾದ ಕಡೆಗಳಲ್ಲೂ ‘ಲಿಯೋ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಭಾಗದಲ್ಲಿ ಮುಂಜಾನೆಯಿಂದಲೇ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರು ಸೇರಿ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕಾವೇರಿ ವಿವಾದ ಚರ್ಚೆಯಲ್ಲಿರುವುದರಿಂದ ಈ ಸಿನಿಮಾಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.