‘ಲಿಯೋ’ ಗೆ ಶಾಕ್ ಕೊಟ್ಟ ತಮಿಳುನಾಡು ಸರ್ಕಾರ, ಅಭಿಮಾನಿಗಳಿಗೆ ಭಾರಿ ನಿರಾಸೆ

Leo: 'ಲಿಯೋ' ಸಿನಿಮಾಕ್ಕೆ ತಮಿಳುನಾಡು ಸರ್ಕಾರ ಶಾಕ್ ನೀಡಿದೆ. ಬೆಳ್ಳಂಬೆಳಿಗ್ಗೆ ಎರಡು ಶೋ ಪ್ರದರ್ಶಿಸಿ ಭರ್ಜರಿ ಹಣ ಮಾಡುವ ನಿರ್ಮಾಣ ಸಂಸ್ಥೆಯ ಯೋಜನೆಗೆ ಹಿನ್ನಡೆ ಆಗಿದೆ.

'ಲಿಯೋ' ಗೆ ಶಾಕ್ ಕೊಟ್ಟ ತಮಿಳುನಾಡು ಸರ್ಕಾರ, ಅಭಿಮಾನಿಗಳಿಗೆ ಭಾರಿ ನಿರಾಸೆ
ವಿಜಯ್-ಲಿಯೋ
Follow us
ಮಂಜುನಾಥ ಸಿ.
|

Updated on:Oct 18, 2023 | 5:00 PM

ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಜೋರಿದ್ದು, ಬಿಡುಗಡೆ ದಿನ ಹಲವು ದಾಖಲೆಗಳನ್ನು ಈ ಸಿನಿಮಾ ಮುರಿದು ಹಾಕುವುದು ಖಾತ್ರಿ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ‘ಲಿಯೋ’ ಸಿನಿಮಾಕ್ಕೆ ತಮಿಳುನಾಡಿನಲ್ಲಿಯೇ ಅಲ್ಪ ಹಿನ್ನೆಡೆ ಆಗಿದೆ. ಅದಕ್ಕೆ ಕಾರಣ ತಮಿಳುನಾಡು ಸರ್ಕಾರ. ಹೆಚ್ಚುವರಿ ಶೋಗೆ ‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಮಾಡಿದ್ದ ಮನವಿಯನ್ನು ಸರ್ಕಾರ ಪುರಸ್ಕರಿಸಿಲ್ಲ.

‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಅವರು ‘ಲಿಯೋ’ ಸಿನಿಮಾಕ್ಕೆ ಬೆಳಿಗ್ಗೆ 4 ಗಂಟೆ ಹಾಗೂ 7 ಗಂಟೆ ಶೋ ಹಾಕಲು ಅನುಮತಿಯನ್ನು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಈ ಮನವಿಯನ್ನು ಪುರಸ್ಕರಿಸಿದೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು, ಆದರೆ ಸರ್ಕಾರವು 4 ಹಾಗೂ 7 ಗಂಟೆ ಶೋಗೆ ಅನುಮತಿ ನೀಡಿಲ್ಲ ಬದಲಿಗೆ ಬೆಳಿಗ್ಗೆ 9 ಗಂಟೆಗೆ ಮೊದಲ ಶೋ ಪ್ರದರ್ಶಿಸುವಂತೆಯೂ ಹಾಗೂ ರಾತ್ರಿ 1:30 ಕೊನೆಯ ಶೋ ಅಂತ್ಯವಾಗುವಂತೆಯೂ ಸಿನಿಮಾವನ್ನು ಪ್ರದರ್ಶಿಸಲು ಸೂಚಿಸಿದೆ. ಇದು ಚಿತ್ರತಂಡಕ್ಕೆ ಹಿನ್ನೆಡೆ ಉಂಟು ಮಾಡಿದೆ.

ಮದ್ರಾಸ್ ಹೈಕೋರ್ಟ್​ನಲ್ಲಿ ಸಹ ಅನುಮತಿಗಾಗಿ ನಿರ್ಮಾಣ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಅನುಮತಿ ಇಲ್ಲದ ಕಾರಣ 4 ಗಂಟೆ ಶೋ ಸಾಧ್ಯವಿಲ್ಲ ಎಂದಿದೆ ಹಾಗೂ 7 ಗಂಟೆ ಶೋಗೆ ಅನುಮತಿ ನೀಡಲು ಸಾಧ್ಯವೇ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆದರೆ ಸರ್ಕಾರವು 4 ಮತ್ತು 7 ಗಂಟೆ ಶೋಗೆ ಅನುಮತಿ ನೀಡಲು ಒಪ್ಪಿಲ್ಲ. ಭದ್ರತೆ ಕಾರಣ ನೀಡಿ ಬೆಳಿಗ್ಗಿನ ಶೋಗಳನ್ನು ಪ್ರದರ್ಶಿಸದಂತೆ ಹೇಳಿದೆ.

ಇದನ್ನೂ ಓದಿ:‘4 ಗಂಟೆ ಶೋಗೆ ಅವಕಾಶ ನೀಡಿ’; ಕೋರ್ಟ್ ಮೆಟ್ಟಿಲೇರಿದ ‘ಲಿಯೋ’ ತಂಡ  

‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಟುಡಿಯೋಸ್ ಎರಡು ವಿಶೇಷ ಶೋಗಳಿಗಾಗಿ ಮನವಿ ಮಾಡಿತ್ತು. ಅಕ್ಟೋಬರ್ 19 ರಂದು ಬೆಳಿಗ್ಗೆ 4 ಗಂಟೆ ಹಾಗೂ 7 ಗಂಟೆಗೆ ಎರಡು ಶೋಗಳನ್ನು ಪ್ರದರ್ಶಿಸಲು ಹಾಗೂ ಅಕ್ಟೋಬರ್ 20 ರಿಂದ ಅಕ್ಟೋಬರ್ 24ರ ವರೆಗೆ ಬೆಳಿಗ್ಗೆ 7 ಗಂಟೆ ಶೋ ಪ್ರದರ್ಶಿಸಲು ಅನುಮತಿ ಕೋರಿತ್ತು. ಆದರೆ ನಿರ್ಮಾಣ ಸಂಸ್ಥೆಯ ಮನವಿಯನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ.

ಆದರೆ ‘ಲಿಯೋ’ ಸಿನಿಮಾ ತಂಡ 4 ಗಂಟೆ ಹಾಗೂ ಏಳು ಗಂಟೆ ಶೋಗೆ ಅನುಮತಿ ಪಡೆಯಲು ಶತಪ್ರಯತ್ನ ನಡೆಸುತ್ತಿದ್ದು, ಇಂದೂ ಸಹ ನಿರ್ಮಾಣ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಭೇಟಿ ಮಾಡಿ ಮಾತು-ಕತೆ ನಡೆಸುತ್ತಲೇ ಇದೆ. ಆದರೆ ಮಾತುಕತೆ ಫಲಪ್ರದವಾಗಿಲ್ಲ. ಬುಕ್​ಮೈ ಶೋ ಮಾಹಿತಿ ಪ್ರಕಾರ ಚೆನ್ನೈನಲ್ಲಿ ಬೆಳಿಗ್ಗೆ 9 ಗಂಟೆಗೆ ‘ಲಿಯೋ’ ಸಿನಿಮಾದ ಮೊದಲ ಶೋಗಳು ಆರಂಭವಾಗುತ್ತಿವೆ. ಯಾವುದೇ ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್​ಗಳು 9 ಗಂಟೆಗೆ ಮುಂಚೆ ಶೋ ಪ್ರದರ್ಶಿಸುತ್ತಿಲ್ಲ.

‘ಲಿಯೋ’ ಸಿನಿಮಾವು ಅಕ್ಟೋಬರ್ 19ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಈ ಆಕ್ಷನ್ ಥ್ರಿಲ್ಲರ್ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾದಲ್ಲಿ ವಿಜಯ್ ಎದುರು ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಿದ್ದಾರೆ. ದಶಕಕ್ಕೂ ಹೆಚ್ಚು ಕಾಲದ ಬಳಿಕ ಈ ಜೋಡಿ ತೆರೆ ಹಂಚಿಕೊಳ್ಳುತ್ತಿದೆ. ವಿಲನ್ ಆಗಿ ಬಾಲಿವುಡ್​ನ ಸಂಜಯ್ ದತ್ ನಟಿಸಿದ್ದಾರೆ. ಅರ್ಜುನ್ ಸರ್ಜಾ ಸಹ ಇದ್ದಾರೆ. ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Wed, 18 October 23

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!