AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Deverakonda: ವಿಜಯ್​ ದೇವರಕೊಂಡ ಈಗ ‘ಫ್ಯಾಮಿಲಿ ಸ್ಟಾರ್​’: ಅಕ್ಟೋಬರ್ 16ಕ್ಕೆ ಸಿಗಲಿದೆ ಸರ್ಪ್ರೈಸ್​

ವಿಜಯ್​ ದೇವರಕೊಂಡ ಅವರಿಗೆ ಇರುವ ಇಮೇಜ್​ ಬೇರೆ ರೀತಿಯದ್ದು. ರಗಡ್​ ಆದಂತಹ ಪಾತ್ರಗಳಿಗೆ ಅವರು ಹೆಚ್ಚು ಹೊಂದಿಕೆ ಆಗುತ್ತಾರೆ. ಹಾಗಿದ್ದರೂ ಕೂಡ ಅವರು ‘ಫ್ಯಾಮಿಲಿ ಸ್ಟಾರ್​’ ಚಿತ್ರದಲ್ಲಿ ತುಂಬ ಭಿನ್ನವಾದಂತಹ ಒಂದು ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅ.16ಕ್ಕೆ ಟೀಸರ್​ ಬಿಡುಗಡೆ ಆಗುವ ನಿರೀಕ್ಷೆ ಇದೆ.

Vijay Deverakonda: ವಿಜಯ್​ ದೇವರಕೊಂಡ ಈಗ ‘ಫ್ಯಾಮಿಲಿ ಸ್ಟಾರ್​’: ಅಕ್ಟೋಬರ್ 16ಕ್ಕೆ ಸಿಗಲಿದೆ ಸರ್ಪ್ರೈಸ್​
ವಿಜಯ್​ ದೇವರಕೊಂಡ
ಮದನ್​ ಕುಮಾರ್​
|

Updated on: Oct 13, 2023 | 11:51 AM

Share

ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಮಾಡಿದ ಎಲ್ಲ ಪ್ರಯತ್ನಗಳು ಕೈ ಕೊಡುತ್ತಿವೆ. ಈ ಹಿಂದೆ ಅವರು ‘ಲೈಗರ್​’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಚಿತ್ರ ಗೆಲ್ಲಲಿಲ್ಲ. ಈ ವರ್ಷ ‘ಖುಷಿ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾ ಕೂಡ ಹೇಳಿಕೊಳ್ಳುವ ಮಟ್ಟಕ್ಕೆ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಬೇರೆ ಬೇರೆ ರೀತಿಯ ಸ್ಕ್ರಿಪ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿಜಯ್​ ದೇವರಕೊಂಡ ಅವರಿಗೆ ಅನಿವಾರ್ಯ ಆಗಿದೆ. ಈಗ ಅವರು ಹೊಸ ಸಿನಿಮಾದ (Vijay Deverakonda New Movie) ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ತಾತ್ಕಾಲಿಕವಾಗಿ ‘ಫ್ಯಾಮಿಲಿ ಸ್ಟಾರ್​’ (Family Star) ಎಂದು ಕರೆಯಲಾಗುತ್ತಿದೆ. ಚಿತ್ರದ ಶೀರ್ಷಿಕೆ ಇನ್ನೂ ಫೈನಲ್​ ಆಗಿಲ್ಲ.

ವಿಜಯ್​ ದೇವರಕೊಂಡ ಅವರಿಗೆ ಇರುವ ಇಮೇಜ್​ ಬೇರೆ ರೀತಿಯದ್ದು. ರಗಡ್​ ಆದಂತಹ ಪಾತ್ರಗಳಿಗೆ ಅವರು ಹೆಚ್ಚು ಹೊಂದಿಕೆ ಆಗುತ್ತಾರೆ. ಕೌಟುಂಬಿಕ ಕಥಾಹಂದರದ ಸಿನಿಮಾಗಳಿಗಿಂತಲೂ ರಫ್​ ಆ್ಯಂಡ್​ ಟಫ್​ ಪಾತ್ರದಲ್ಲಿ ಅವರನ್ನು ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಹಾಗಿದ್ದರೂ ಕೂಡ ಅವರು ‘ಫ್ಯಾಮಿಲಿ ಸ್ಟಾರ್​’ ಸಿನಿಮಾದಲ್ಲಿ ತುಂಬ ಭಿನ್ನವಾದಂತಹ ಒಂದು ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತಡವಾಗಿ ಫೋಟೋ ಪೋಸ್ಟ್​ ಮಾಡಿದರೂ ಸಿಕ್ಕಿಬಿದ್ದ ರಶ್ಮಿಕಾ; ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಟ?

2018ರಲ್ಲಿ ಬಿಡುಗಡೆಯಾದ ‘ಗೀತ ಗೋವಿಂದಂ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ವಿಜಯ್​ ದೇವರಕೊಂಡ ಅಭಿನಯದ ಆ ಸಿನಿಮಾಗೆ ಪರಶುರಾಮ್​ ನಿರ್ದೇಶನ ಮಾಡಿದ್ದರು. ಈಗ ‘ಫ್ಯಾಮಿಲಿ ಸ್ಟಾರ್​’ ಚಿತ್ರಕ್ಕೂ ಪರಶುರಾಮ್​ ಅವರೇ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ದಿಲ್​ ರಾಜು ಅವರು ಬಂಡವಾಳ ಹೂಡುತ್ತಿದ್ದಾರೆ. ‘ಫ್ಯಾಮಿಲಿ ಸ್ಟಾರ್​’ ಸಿನಿಮಾ ಕೂಡ ‘ಗೀತ ಗೋವಿಂದಂ’ ರೀತಿ ಹಿಟ್​ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಮೂರನೇ ಬಾರಿಗೆ ಒಂದಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ; ಅಭಿಮಾನಿಗಳಲ್ಲಿ ಮೂಡಿದೆ ನಿರೀಕ್ಷೆ

ಆದಷ್ಟು ಬೇಗ ‘ಫ್ಯಾಮಿಲಿ ಸ್ಟಾರ್​’ ಸಿನಿಮಾದ ಶೂಟಿಂಗ್​ ಮುಗಿಸಲು ಪ್ಲ್ಯಾನ್​ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಸಂಕ್ರಾಂತಿ ಹಬ್ಬದ ವೇಳೆಗೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಸಂಕ್ರಾಂತಿಗೆ ರಿಲೀಸ್​ ಆಗಲು ಹಲವು ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಆ ಚಿತ್ರಗಳ ಜೊತೆ ‘ಫ್ಯಾಮಿಲಿ ಸ್ಟಾರ್​’ ಪೈಪೋಟಿ ನೀಡಬೇಕಿದೆ. ಇನ್ನು, ಅಕ್ಟೋಬರ್​ 16ರಂದು ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ವಿಜಯ್​ ದೇವರಕೊಂಡ ಅಭಿಮಾನಿಗಳಿಗೆ ಸರ್ಪೈಸ್​ ಸಿಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್