AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ದಿನದಲ್ಲಿ 51 ಕೋಟಿ ರೂಪಾಯಿ ಬಾಚಿಕೊಂಡ ‘ಖುಷಿ’; ವಿಜಯ್​ ದೇವರಕೊಂಡ ಮುಖದಲ್ಲಿ ಗೆಲುವಿನ ನಗು

ನಿರೀಕ್ಷೆಯಂತೆಯೇ ‘ಖುಷಿ’ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎರಡು ದಿನ ಉತ್ತಮವಾಗಿ ಪ್ರದರ್ಶನ ಕಂಡಿರುವ ಈ ಸಿನಿಮಾ ವಿಶ್ವಾದ್ಯಂತ 51 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕು. ಸೆ. 4ರಂದು ಸಂಜೆ 6 ಗಂಟೆಗೆ ಈ ಸಿನಿಮಾದ ಸಕ್ಸಸ್​ ಮೀಟ್​ ನಡೆಯಲಿದೆ.

2 ದಿನದಲ್ಲಿ 51 ಕೋಟಿ ರೂಪಾಯಿ ಬಾಚಿಕೊಂಡ ‘ಖುಷಿ’; ವಿಜಯ್​ ದೇವರಕೊಂಡ ಮುಖದಲ್ಲಿ ಗೆಲುವಿನ ನಗು
ವಿಜಯ್​ ದೇವರಕೊಂಡ, ಸಮಂತಾ ರುತ್​ ಪ್ರಭು
ಮದನ್​ ಕುಮಾರ್​
|

Updated on: Sep 03, 2023 | 2:07 PM

Share

ನಟ ವಿಜಯ್​ ದೇವರಕೊಂಡ (Vijay Devarakonda) ಅವರು ‘ಖುಷಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಸೆಪ್ಟೆಂಬರ್​ 1ರಂದು ಅದ್ದೂರಿಯಾಗಿ ಈ ಚಿತ್ರ ರಿಲೀಸ್​ ಆಯಿತು. ತೆಲುಗಿನ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಅನೇಕ ಕಡೆಗಳಲ್ಲಿ ‘ಖುಷಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. 2 ದಿನಕ್ಕೆ ಈ ಸಿನಿಮಾ ಎಷ್ಟು ಕಲೆಕ್ಷನ್​ (Kushi Box Office Collection) ಮಾಡಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಬರೋಬ್ಬರಿ 51 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ ಎಂದು ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್​’ (Mythri Movie Makers) ಹೇಳಿಕೊಂಡಿದೆ. ಈ ಸುದ್ದಿ ಕೇಳಿ ವಿಜಯ್​ ದೇವರಕೊಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.

‘ಲೈಗರ್​’ ಸಿನಿಮಾ ಕಳೆದ ವರ್ಷ ಆಗಸ್ಟ್​ನಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಮೇಲೆ ವಿಜಯ್​ ದೇವರಕೊಂಡ ಅವರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ನಿಜವಾಗಲಿಲ್ಲ. ಆದ್ದರಿಂದ ಈ ವರ್ಷ ‘ಖುಷಿ’ ಸಿನಿಮಾದ ಮೂಲಕ ಗೆಲ್ಲುವುದು ವಿಜಯ್​ ದೇವರಕೊಂಡ ಅವರಿಗೆ ಅನಿವಾರ್ಯ ಆಗಿತ್ತು. ನಿರೀಕ್ಷೆಯಂತೆಯೇ ‘ಖುಷಿ’ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎರಡು ದಿನ ಉತ್ತಮವಾಗಿ ಪ್ರದರ್ಶನ ಕಂಡಿರುವ ಈ ಸಿನಿಮಾ ವಿಶ್ವಾದ್ಯಂತ 51 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕು.

‘ಮೈತ್ರಿ ಮೂವೀ ಮೇಕರ್ಸ್​’ ಟ್ವೀಟ್​:

‘ಖುಷಿ’ ಸಿನಿಮಾಗೆ ಶಿವ ನಿರ್ವಾಣ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಸಮಂತಾ ರುತ್​ ಪ್ರಭು ನಟಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಒಂದು ಹೊಸ ಪ್ರೇಮಕಥೆಯನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ‘ಖುಷಿ’ ಸಿನಿಮಾ ಹೆಚ್ಚು ಇಷ್ಟವಾಗಿದೆ. ಹಾಗಾಗಿ ಇದನ್ನು ‘ಬ್ಲಾಕ್​ ಬಸ್ಟರ್​ ಫ್ಯಾಮಿಲಿ ಎಂಟರ್​ಟೇನರ್​’ ಎಂದು ನಿರ್ಮಾಪಕರು ಹೇಳಿದ್ದಾರೆ. ಹಾಡುಗಳು ಕೂಡ ಸಿನಿಮಾದ ಗೆಲುವಿಗೆ ಕಾರಣ ಆಗಿವೆ.

ಇದನ್ನೂ ಓದಿ: ‘ಖುಷಿ’ ಚಿತ್ರಕ್ಕೆ ವಿಜಯ್​ ದೇವರಕೊಂಡ-ಸಮಂತಾ ಪಡೆದ ಸಂಭಾವನೆ ಎಷ್ಟು? ಇಬ್ಬರ ಸಂಬಳದ ನಡುವೆ ಇದೆ ದೊಡ್ಡ ಅಂತರ

ಸಮಂತಾ ರುತ್​ ಪ್ರಭು ಅವರು ಈಗ ಅಮೆರಿಕದಲ್ಲಿದ್ದಾರೆ. ಭಾರತದಲ್ಲಿ ಅವರು ‘ಖುಷಿ’ ಸಿನಿಮಾದ ಪ್ರಚಾರವನ್ನು ಅಷ್ಟಾಗಿ ಮಾಡಿಲ್ಲ. ಆದ್ದರಿಂದ ವಿಜಯ್​ ದೇವರಕೊಂಡ ಅವರೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿರುವುದರಿಂದ ಅವರ ಮುಖದಲ್ಲಿ ನಗು ಮೂಡಿದೆ.

ಇದನ್ನೂ ಓದಿ: ‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?

ಸೋಮವಾರ (ಸೆಪ್ಟೆಂಬರ್​ 4) ಸಂಜೆ 6 ಗಂಟೆಗೆ ವಿಶಾಖಪಟ್ಟಣದಲ್ಲಿ ‘ಖುಷಿ’ ಸಿನಿಮಾದ ಸಕ್ಸಸ್​ ಮೀಟ್​ ನಡೆಯಲಿದೆ. ಸಿನಿಮಾ ಹಿಟ್​ ಆಗಿರುವ ಸಂತಸದಲ್ಲಿ ವಿಜಯ್​ ದೇವರಕೊಂಡ ಅವರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!