‘4 ಗಂಟೆ ಶೋಗೆ ಅವಕಾಶ ನೀಡಿ’; ಕೋರ್ಟ್ ಮೆಟ್ಟಿಲೇರಿದ ‘ಲಿಯೋ’ ತಂಡ  

‘ಲಿಯೋ’ ಚಿತ್ರವನ್ನು ‘ಸೆವೆನ್ ಸ್ಕ್ರೀನ್​ ಸ್ಟುಡಿಯೋಸ್’ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಮುಂಜಾನೆ 4 ಗಂಟೆಯಿಂದ ಶೋ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅಭಿಮಾನಿಗಳ ದೃಷ್ಟಿಯಿಂದ ಮುಂಜಾನೆ ಶೋ ತುಂಬಾನೇ ಮುಖ್ಯ ಎಂದು ಅವರು ಹೇಳಿದ್ದಾರೆ.

‘4 ಗಂಟೆ ಶೋಗೆ ಅವಕಾಶ ನೀಡಿ’; ಕೋರ್ಟ್ ಮೆಟ್ಟಿಲೇರಿದ ‘ಲಿಯೋ’ ತಂಡ   
ಲಿಯೋ-ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on: Oct 17, 2023 | 1:35 PM

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ (Leo Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಹೊಸ ಹೊಸ ಅಪ್​ಡೇಟ್​ಗಳು ಸಿಗುತ್ತಿವೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಅಭಿಮಾನಿಗಳು ಹಬ್ಬ ಮಾಡೋಕೆ ರೆಡಿ ಆಗಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಗುತ್ತವೆ ಎಂದರೆ ಮುಂಜಾನೆ ಶೋ ಇದ್ದರೆ ಅಭಿಮಾನಿಗಳ ಖುಷಿ ಹೆಚ್ಚುತ್ತದೆ. ಇದೇ ವಿಚಾರ ಇಟ್ಟುಕೊಂಡು ‘ಲಿಯೋ’ ತಂಡ ಕೋರ್ಟ್ ಮೆಟ್ಟಿಲು ಏರಿದೆ.

‘ಲಿಯೋ’ ಚಿತ್ರವನ್ನು ‘ಸೆವೆನ್ ಸ್ಕ್ರೀನ್​ ಸ್ಟುಡಿಯೋಸ್’ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಮುಂಜಾನೆ 4 ಗಂಟೆಯಿಂದ ಶೋ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅಭಿಮಾನಿಗಳ ದೃಷ್ಟಿಯಿಂದ ಮುಂಜಾನೆ ಶೋ ತುಂಬಾನೇ ಮುಖ್ಯ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 20ರಿಂದ ಅಕ್ಟೋಬರ್ 24ರವರೆಗೆ ದಿನಕ್ಕೆ ಐದು ಶೋ ಪ್ರದರ್ಶನ ಮಾಡಲು ಅವಕಾಶ ನೀಡಬೇಕು. ‘ಲಿಯೋ’ ರಿಲೀಸ್ ದಿನದಂದು (ಅಕ್ಟೋಬರ್ 19) 4 ಗಂಟೆ ಶೋಗೆ ಅವಕಾಶ ನೀಡಬೇಕು ಎಂದು ಕೋರಲಾಗಿದೆ. ಶೀಘ್ರದಲ್ಲೇ ಈ ಅರ್ಜಿ ವಿಚಾರಣೆಗೆ ಬರಲಿದೆ ಎನ್ನಲಾಗುತ್ತಿದೆ.

ಈ ಮೊದಲು ತಮಿಳುನಾಡು ಸರ್ಕಾರದವರು ‘ಲಿಯೋ’ ಸಿನಿಮಾ ಪ್ರದರ್ಶನಕ್ಕೆ ಕೆಲವು ನಿಯಮಗಳನ್ನು ಜಾರಿಗೆ ತಂದಿತ್ತು. ಮುಂಜಾನೆ ಶೋಗಳನ್ನು ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಶೋ ಆರಂಭ ಮಾಡಬಹುದು ಎಂದು ಸುತ್ತೋಲೆಯಲ್ಲಿ ಹೇಳಿತ್ತು. ಇದನ್ನು ‘ಲಿಯೋ’ ತಂಡ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ಲಿಯೋ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕ ಶೋಗಳ ಸಂಖ್ಯೆ ಎಷ್ಟು? ತಮಿಳಿಗೆ ಎಷ್ಟು ಶೋ?

‘ಲಿಯೋ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮುಂಜಾನೆ ಶೋ ಸಿಕ್ಕರೆ ಸಿನಿಮಾದ ಗಳಿಕೆ ಹೆಚ್ಚಲಿದೆ. ತಮಿಳುನಾಡು ಸರ್ಕಾರದ ಆದೇಶದಿಂದ ಚಿತ್ರದ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ದಳಪತಿ ವಿಜಯ್, ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಪ್ರಿಯಾ ಆನಂದ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್