‘ಜೈಲರ್’ ಹಿಟ್ ಆದ್ಮೇಲೆ ಪರಭಾಷೆಯಿಂದ ಶಿವಣ್ಣ ಪಡೆದ ಸಿನಿಮಾ ಆಫರ್ ಒಂದಲ್ಲ ಎರಡಲ್ಲ
‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮಾಡಿದ್ದು ಅತಿಥಿ ಪಾತ್ರವಾದರೂ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಬಹಳ ದೊಡ್ಡದು. ಆ ಯಶಸ್ಸಿನ ಬಳಿಕ ಅವರಿಗೆ ಪರಭಾಷೆಯಿಂದ ಹಲವು ಆಫರ್ಗಳು ಬರುತ್ತಿವೆ. ಪರಭಾಷೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವಂತೆ ದೊಡ್ಡ ದೊಡ್ಡ ನಿರ್ದೇಶಕರು ಬಂದು ಕೇಳಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
2023ರ ವರ್ಷ ಶಿವರಾಜ್ಕುಮಾರ್ ಅವರ ಪಾಲಿಗೆ ತುಂಬ ವಿಶೇಷವಾಗಿದೆ. ರಜನಿಕಾಂತ್ ಜೊತೆ ಶಿವಣ್ಣ ನಟಿಸಿದ ‘ಜೈಲರ್’ ಸಿನಿಮಾ (Jailer Movie) ಸೂಪರ್ ಹಿಟ್ ಆಯಿತು. ಆ ಚಿತ್ರದಲ್ಲಿ ಶಿವರಾಜ್ಕುಮಾರ್ (Shivarajkumar) ಮಾಡಿದ್ದು ಅತಿಥಿ ಪಾತ್ರವಾದರೂ ಅದಕ್ಕೆ ಸಿಕ್ಕ ರೆಸ್ಪಾನ್ಸ್ ಬಹಳ ದೊಡ್ಡದು. ‘ಜೈಲರ್’ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಪರಭಾಷೆಯಿಂದ ಹಲವು ಆಫರ್ಗಳು ಬರುತ್ತಿವೆ. ಪರಭಾಷೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವಂತೆ ದೊಡ್ಡ ದೊಡ್ಡ ನಿರ್ದೇಶಕರು ಬಂದು ಕೇಳಿಕೊಳ್ಳುತ್ತಿದ್ದಾರೆ. ಆ ಎಲ್ಲ ವಿಷಯದ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಈಗ ಅವರ ‘ಘೋಸ್ಟ್’ ಸಿನಿಮಾ (Ghost Movie) ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆ ಪ್ರಯುಕ್ತ ‘ಟಿವಿ 9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಶಿವಣ್ಣ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

