ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್ ಕೆ’ (Project Movie) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆ ಸೃಷ್ಟಿ ಆಗಿದೆ. ನಿರ್ದೇಶಕ ನಾಗ್ ಅಶ್ವಿನ್ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಿದೆ. ಇದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone), ಹಿರಿಯ ನಟ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಒಂದು ಹೊರ ಬಿದ್ದಿದೆ. ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದು ವರದಿ ಆಗಿದೆ.
ಕಮಲ್ ಹಾಸನ್ ಅವರು ಹಲವು ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ವಿಕ್ರಮ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈಗ ಅವರು ‘ಪ್ರಾಜೆಕ್ಟ್ ಕೆ’ ಸಿನಿಮಾ ತಂಡ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಕಮಲ್ ಹಾಸನ್ ಅವರು ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಾರೆ ಎನ್ನುವುದು ಕೆಲ ಮೂಲಗಳ ಮಾಹಿತಿ. ಅವರು ಈ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಇದನ್ನೂ ಓದಿ: ನೂತನ ಸಂಸತ್ತಿನ ಉದ್ಘಾಟನೆಗೆ ರಾಷ್ಟ್ರಪತಿ ಯಾಕೆ ಹಾಜರಾಗುತ್ತಿಲ್ಲ?: ಪ್ರಧಾನಿ ಮೋದಿಗೆ ಕಮಲ್ ಹಾಸನ್ ಪ್ರಶ್ನೆ
ಈ ಸಿನಿಮಾದಲ್ಲಿ ಕಮಲ್ ಹಾಸನ್ ಪಾತ್ರ ಪವರ್ಫುಲ್ ಆಗಿರಲಿದೆಯಂತೆ. ಆದರೆ, ಅವರು ವಿಲನ್ ಪಾತ್ರ ಮಾಡುತ್ತಿರುವುದು ಅನುಮಾನ ಎಂಬುದು ಕೆಲ ಸಿನಿಪಂಡಿತರ ವಾದ. ಈಗಾಗಲೇ ‘ಪ್ರಾಜೆಕ್ಟ್ ಕೆ’ ತಂಡ ಶೇ. 70ರಷ್ಟು ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ. ಇಷ್ಟು ವಿಳಂಬವಾಗಿ ಸೆಟ್ಗೆ ವಿಲನ್ ಎಂಟ್ರಿ ಆಗೋಕೆ ಹೇಗೆ ಸಾಧ್ಯ ಅನ್ನೋದು ಅನೇಕರ ಪ್ರಶ್ನೆ. ಈ ಚಿತ್ರಕ್ಕಾಗಿ ಅವರು ಕೇವಲ 20 ದಿನಗಳ ಕಾಲ್ಶೀಟ್ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಣೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 am, Wed, 31 May 23