AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amitabh Bachchan: ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​ ಆದ್ರಾ? ಫೋಟೋ ಹಂಚಿಕೊಂಡು ಸ್ವತಃ ಮಾಹಿತಿ ನೀಡಿದ ಬಿಗ್​-ಬಿ

ಅಮಿತಾಭ್​ ಬಚ್ಚನ್​ ಅವರ ಅಭಿಮಾನಿಗಳಿಗೆ ಒಮ್ಮೆಲೇ ಶಾಕ್​ ಆಗುವಂತಹ ಫೋಟೋ ಅದು. ಮುಂಬೈ ಪೊಲೀಸ್ ವ್ಯಾನ್​ ಬಳಿಯಲ್ಲಿ ಬಿಗ್​-ಬಿ ನಿಂತಿದ್ದಾರೆ. ಅವರ ಮುಖದಲ್ಲಿ ಆತಂಕದ ಛಾಯೆ ಇದೆ.

Amitabh Bachchan: ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​ ಆದ್ರಾ? ಫೋಟೋ ಹಂಚಿಕೊಂಡು ಸ್ವತಃ ಮಾಹಿತಿ ನೀಡಿದ ಬಿಗ್​-ಬಿ
ಅಮಿತಾಭ್ ಬಚ್ಚನ್
ಮದನ್​ ಕುಮಾರ್​
|

Updated on: May 19, 2023 | 4:00 PM

Share

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರ ಅಭಿಮಾನಿಗಳಿಗೆ ಒಮ್ಮೆಲೇ ಶಾಕ್​ ಆಗುವಂತಹ ಫೋಟೋ ಅದು. ಮುಂಬೈ ಪೊಲೀಸ್ (Mumbai Police) ವ್ಯಾನ್​ ಬಳಿಯಲ್ಲಿ ಬಿಗ್​-ಬಿ ನಿಂತಿದ್ದಾರೆ. ಅವರ ಮುಖದಲ್ಲಿ ಆತಂಕದ ಛಾಯೆ ಇದೆ. ಇಂಥ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಅಮಿತಾಭ್​ ಬಚ್ಚನ್​ ಅವರು, ‘ಅರೆಸ್ಟೆಡ್​’ (Arrested) ಎಂಬ ಕ್ಯಾಪ್ಷನ್​ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ ಮಾಡಿದ್ದಾರೆ ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿತ್ತು. ಅದರಲ್ಲಿ ತಮ್ಮದು ಏನೂ ತಪ್ಪಿಲ್ಲ ಎಂದು ಬಿಗ್​-ಬಿ ವಾದಿಸಿದ್ದರು. ಅದರ ಬೆನ್ನಲ್ಲೇ ಅವರು ಈ ರೀತಿ ಫೋಟೋ ಹಂಚಿಕೊಂಡು ‘ಅರೆಸ್ಟ್​ ಆದೆ’ ಎಂಬಂರ್ಥ ಬರುವ ರೀತಿಯಲ್ಲಿ ಕ್ಯಾಪ್ಷನ್​ ಹಾಕಿರುವುದು ಎಲ್ಲರಿಗೂ ಗೊಂದಲ ಉಂಟು ಮಾಡಿದೆ.

ಸೆಲೆಬ್ರಿಟಿಗಳು ಈ ರೀತಿ ಸೋಶಿಯಲ್​ ಮೀಡಿಯಾದಲ್ಲಿ ಗಿಮಿಕ್​ ಮಾಡುವ ಟ್ರೆಂಡ್​ ಇತ್ತೀಚೆಗೆ ಹೆಚ್ಚಾಗಿದೆ. ಯಾವುದಾದರೂ ಬ್ರ್ಯಾಂಡ್​ ಪ್ರಮೋಷನ್​ ಇದ್ದಾಗ ಇಂಥ ತಂತ್ರ ಉಪಯೋಗಿಸಲಾಗುತ್ತದೆ. ಅಮಿತಾಭ್​ ಬಚ್ಚನ್​ ಕೂಡ ಇದೇ ಮಾರ್ಗ ಅನುಸರಿಸಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಅಮಿತಾಭ್ ಬಚ್ಚನ್​ ಅವರು ಬ್ಲಾಗ್​ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ತಮ್ಮ ಹೆಲ್ಮೆಟ್​ ವಿವಾದದ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್​ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್​ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್​ ಸಿನಿಮಾದ ಕಾಸ್ಟ್ಯೂಮ್​. ಬೈಕ್​ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದರು.

ಇದನ್ನೂ ಓದಿ: Amitabh Bachchan: ‘ನನ್ನ ದುಡ್ಡು ಹೋಯ್ತು, ಈಗೇನು ಮಾಡ್ಲಿ?’; ಟ್ವಿಟರ್ ವಿರುದ್ಧ ಅಮಿತಾಭ್ ಬಚ್ಚನ್ ಅಸಮಾಧಾನ

‘ಸಮಯ ಪಾಲನೆಯ ಮಾಡಬೇಕು ಎಂದಾದರೆ ನಾನು ಹೀಗೆ ಮಾಡುತ್ತೇನೆ ಎಂಬುದು ನಿಜ. ಆದರೆ ಹೆಲ್ಮೆಟ್​ ಧರಿಸಿ ಟ್ರಾಫಿಕ್​ ನಿಯಮಗಳನ್ನು ಪಾಲಿಸುತ್ತೇನೆ. ನಾನೊಬ್ಬನೇ ಈ ರೀತಿ ಮಾಡಿದ್ದಲ್ಲ. ಅಕ್ಷಯ್​ ಕುಮಾರ್​ ಕೂಡ ಶೂಟಿಂ​ಗ್​ ಸೆಟ್​ಗೆ ಸರಿಯಾದ ಸಮಯಕ್ಕೆ ಬರಲು ಹೆಲ್ಮೆಟ್​ ಧರಿಸಿ ತಮ್ಮ ಸೆಕ್ಯೂರಿಟಿ ಸಿಬ್ಬಂದಿಯ ಬೈಕ್​ ಏರಿದ್ದರು’ ಎಂದಿದ್ದರು ಬಿಗ್​-ಬಿ.

ಹಲವು ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಪ್ರಭಾಸ್​ ಅಭಿನಯದ ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ