- Kannada News Photo gallery Siddhant Chaturvedi Break Silence over Romored girlfriend Navya naveli Nanda
ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ಜತೆ ಬಾಲಿವುಡ್ ಹೀರೋ ಸುತ್ತಾಟ?
ಸಿದ್ಧಾಂತ್ ಚತುರ್ವೇದಿ ಅವರು ಸದ್ಯ ‘ಫೋನ್ ಭೂತ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಮುಖ್ಯಭೂಮಿಕೆಯಲ್ಲಿದ್ದಾರೆ. ನವೆಂಬರ್ 4ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
Updated on:Nov 03, 2022 | 1:51 PM

ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಹೀರೋ ಜತೆ ನವ್ಯಾ ನವೇಲಿ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸಿದ್ಧಾಂತ್ ಚತುರ್ವೇದಿ ಅವರು ಸದ್ಯ ‘ಫೋನ್ ಭೂತ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಮುಖ್ಯಭೂಮಿಕೆಯಲ್ಲಿದ್ದಾರೆ. ನವೆಂಬರ್ 4ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

ಈ ಸಿನಿಮಾ ಪ್ರಚಾರದ ವೇಳೆ ಸಿದ್ದಾಂತ್ಗೆ ನವ್ಯಾ ನವೇಲಿ ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ನಗುತ್ತಲೇ ಅವರು ಉತ್ತರ ನೀಡಿದ್ದಾರೆ.

‘ನಾನು ಯಾರಾದರೂ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ವದಂತಿ ಕೇಳಿದಾಗ ಅದು ನಿಜವಾಗಲಿ ಎಂದು ಬಯಸುತ್ತೇನೆ’ ಎಂದಿದ್ದಾರೆ ಸಿದ್ದಾಂತ್. ಈ ಮೂಲಕ ಡೇಟಿಂಗ್ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ನವ್ಯಾ ನವೇಲಿ ಹಾಗೂ ಸಿದ್ಧಾಂತ್ ಚತುರ್ವೇದಿ ಅವರು ಡೇಟಿಂಗ್ ವಿಚಾರವನ್ನು ಅಧಿಕೃತ ಮಾಡಿಲ್ಲ. ನವ್ಯಾ ನವೇಲಿ ನಂದ ಅವರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸಿದ್ದಾಂತ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.
Published On - 1:08 pm, Thu, 3 November 22



















