KH233: ಕಮಲ್​ ಹಾಸನ್​ ನಟನೆಯ 233ನೇ ಚಿತ್ರದ ಬಗ್ಗೆ ಸಿಕ್ತು ಬ್ರೇಕಿಂಗ್​ ನ್ಯೂಸ್​; ಕಥೆಗೆ ಇದೆ ರಾಜಕೀಯದ ನಂಟು?

|

Updated on: Jul 05, 2023 | 12:11 PM

Kamal Haasan: ಕಮಲ್​ ಹಾಸನ್​ ಅವರು 233ನೇ ಸಿನಿಮಾದ ಪೋಸ್ಟರ್​ನಲ್ಲಿ ‘Rise to rule’ ಎಂಬ ಟ್ಯಾಗ್​ ಲೈನ್​ ಇದೆ. ಜನನಾಯಕನ ರೀತಿ ಕಮಲ್​ ಹಾಸನ್​ ಪೋಸ್​ ನೀಡಿದ್ದಾರೆ.

KH233: ಕಮಲ್​ ಹಾಸನ್​ ನಟನೆಯ 233ನೇ ಚಿತ್ರದ ಬಗ್ಗೆ ಸಿಕ್ತು ಬ್ರೇಕಿಂಗ್​ ನ್ಯೂಸ್​; ಕಥೆಗೆ ಇದೆ ರಾಜಕೀಯದ ನಂಟು?
ಕಮಲ್​ ಹಾಸನ್
Follow us on

ನಟ ಕಮಲ್​ ಹಾಸನ್​ (Kamal Haasan) ಅವರು ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರ 233ನೇ ಸಿನಿಮಾ ಅನೌನ್ಸ್​ ಆಗಿದೆ. ಈ ಚಿತ್ರದ ಬಗ್ಗೆ ಒಂದಷ್ಟು ದಿನಗಳಿಂದ ಗಾಸಿಪ್​ ಕೇಳಿಬರುತ್ತಿತ್ತು. ಅದೀಗ ನಿಜವಾಗಿದೆ. ಖ್ಯಾತ ನಿರ್ದೇಶಕ ಎಚ್​. ವಿನೋದ್​ (H Vinoth) ಜೊತೆ ಕಮಲ್​ ಹಾಸನ್​ ಅವರು ಕೈ ಜೋಡಿಸಿದ್ದಾರೆ. ಈ ಬ್ರೇಕಿಂಗ್​ ನ್ಯೂಸ್​ ನೀಡುವ ಸಲುವಾಗಿ ಒಂದು ಪ್ರೋಮೋ (KH233 Teaser) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಮಲ್​ ಹಾಸನ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಅಂದಹಾಗೆ, ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣವೂ ಇವೆ.

ಕಮಲ್​ ಹಾಸನ್​ ಅವರು ಸದ್ಯ ನಿರ್ದೇಶಕ ಶಂಕರ್​ ಜೊತೆ ‘ಇಂಡಿಯನ್​ 2’ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಪೂರ್ಣಗೊಂಡ ಬಳಿಕ ಅವರು ಸಂಪೂರ್ಣವಾಗಿ ರಾಜಕೀಯದ ಮೇಲೆ ಗಮನ ಹರಿಸಬಹುದು ಎಂದು ಹೇಳಲಾಗಿತ್ತು. ಆದರೆ ಅದು ನಿಜವಾಗುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ, ‘ಇಂಡಿಯನ್​ 2’ ಬಳಿಕ ಎಚ್​. ವಿನೋದ್​ ಜೊತೆಗಿನ ಸಿನಿಮಾದಲ್ಲಿ ಕಮಲ್​ ಹಾಸನ್​ ನಟಿಸುವುದು ಖಚಿತವಾಗಿದೆ. ಈ ಸಿನಿಮಾದ ಪೋಸ್ಟರ್​ನಲ್ಲಿ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ.

ಕಮಲ್​ ಹಾಸನ್​ ಅವರು 233ನೇ ಸಿನಿಮಾದ ಪೋಸ್ಟರ್​ನಲ್ಲಿ ‘Rise to rule’ ಎಂಬ ಬರಹ ಇದೆ. ಜನನಾಯಕನ ರೀತಿ ಕಮಲ್​ ಹಾಸನ್​ ಪೋಸ್​ ನೀಡಿದ್ದಾರೆ. ಇದರಲ್ಲಿ ಸಂಪೂರ್ಣ ರಾಜಕೀಯದ ಕುರಿತ ಕಹಾನಿ ಇರಲಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಬಹಿರಂಗ ಆಗಬೇಕಿದೆ. ಈ ಸಿನಿಮಾದ ಬಳಿಕ ಕಮಲ್​ ಹಾಸನ್​ ಅವರು ಮಣಿರತ್ನಂ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ: Kamal Haasan: ‘ದಿ ಕೇರಳ ಸ್ಟೋರಿ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ’: ಕಮಲ್​ ಹಾಸನ್​ ನೇರ ಟೀಕೆ

ನಿರ್ಮಾಪಕನಾಗಿಯೂ ಕಮಲ್​ ಹಾಸನ್​ ಅವರು ಸಕ್ರಿಯರಾಗಿದ್ದಾರೆ. ಅವರ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಬ್ಯಾನರ್​ ಮೂಲಕ ‘KH233’ ಸಿನಿಮಾ ನಿರ್ಮಾಣ ಆಗಲಿದೆ. ಅವರ ಜೊತೆ ‘ಟರ್ಮರಿಕ್​ ಮೀಡಿಯಾ’ ಸಂಸ್ಥೆ ಕೂಡ ಕೈ ಜೋಡಿಸಿದೆ. 2022ರಲ್ಲಿ ಕಮಲ್​ ಹಾಸನ್​ ಅವರು ‘ವಿಕ್ರಮ್​’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದರು. ಆ ಚಿತ್ರದ ಯಶಸ್ಸಿನಿಂದ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.