‘ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾರೆ’; ಬಾಯಿ ತಪ್ಪಿ ತಮ್ಮದೇ ಪಕ್ಷದ ಸಂಸದನ ವಿರುದ್ಧ ಹರಿಹಾಯ್ದರೇ ಕಂಗನಾ?

| Updated By: ಡಾ. ಭಾಸ್ಕರ ಹೆಗಡೆ

Updated on: May 06, 2024 | 11:25 AM

ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದಾರೆ. ಈಗ ಅವರಿಂದ ದೊಡ್ಡ ಅಚಾತುರ್ಯ ನಡೆದು ಹೋಗಿದೆ. ತೇಜಸ್ವಿ ಯಾವದ್​ಗೆ ಬಯ್ಯುವ ಬದಲು ಬಿಜೆಪಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾರೆ’; ಬಾಯಿ ತಪ್ಪಿ ತಮ್ಮದೇ ಪಕ್ಷದ ಸಂಸದನ ವಿರುದ್ಧ ಹರಿಹಾಯ್ದರೇ ಕಂಗನಾ?
ಕಂಗನಾ-ತೇಜಸ್ವಿ
Follow us on

ನಟಿ ಕಂಗನಾ ರಣಾವತ್ (Kangana Ranaut) ಅವರು ಸಿನಿಮಾ ರಂಗದಲ್ಲಿದ್ದಾಗ ಎಲ್ಲರ ವಿರುದ್ಧ ಕೂಗಾಡುತ್ತಿದ್ದರು. ಅವರ ವಿರೋಧಿಗಳ ಪಟ್ಟಿ ದೊಡ್ಡದಿತ್ತು. ಈಗ ನಟಿ ಕಂಗನಾ ರಣಾವತ್ ರಾಜಕೀಯ ಸೇರಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿ ಮಾಡಿದ್ದಾರೆ. ಈಗ ಅವರಿಂದ ದೊಡ್ಡ ಅಚಾತುರ್ಯ ನಡೆದು ಹೋಗಿದೆ. ತಮ್ಮದೇ ಪಕ್ಷದ ಸಂಸದ (ಬೆಂಗಳೂರು ದಕ್ಷಿಣ) ತೇಜಸ್ವಿ ಸೂರ್ಯ ವಿರುದ್ಧ ಕಂಗನಾ ರಣಾವತ್ ಕೂಗಾಡಿದ್ದಾರೆ. ಇದು ಬಾಯ್ತಪ್ಪಿನಿಂದ ಆದ ಪ್ರಮಾದ. ಅಸಲಿಗೆ ಅವರು ತೆಗೆದುಕೊಳ್ಳಬೇಕಿದ್ದಿದ್ದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರು.

ಮಂಡಿ ಕ್ಷೇತ್ರದಲ್ಲಿ ಕಂಗನಾ ಅವರು ಪ್ರಚಾರ ರ‍್ಯಾಲಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಮಾತನಾಡಿದ್ದಾರೆ. ‘ಒಂದು ಪಕ್ಷ ಇದೆ. ಅಲ್ಲಿದ್ದವರಿಗೆ ತಮಗೆ ಎಲ್ಲಿ ಹೋಗಬೇಕು ಎನ್ನುವುದೇ ಗೊತ್ತಿಲ್ಲ. ರಾಹುಲ್ ಗಾಂಧಿ ಅವರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಸಲು ಬಯಸಿದ್ದಾರೆ. ತೇಜಸ್ವಿ ಸೂರ್ಯ, ರೌಡಿಸಂ ಮಾಡುತ್ತಾರೆ ಮತ್ತು ಮೀನು ತಿನ್ನುತ್ತಾರೆ’ ಎಂದು ಕಂಗನಾ ಬಾಯ್ತಪ್ಪಿ ಹೇಳಿದ್ದಾರೆ.

ಇದಕ್ಕೆ ತೇಜಸ್ವಿ ಯಾದವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ಪಕ್ಷದವರನ್ನೇ ತೆಗಳಿದ್ದಕ್ಕೆ ಕಂಗನಾ ಅವರನ್ನು ಟೀಕೆ ಮಾಡಿದ್ದಾರೆ. ‘ಯಾರು ಈ ಮೇಡಂ’ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಕಂಗನಾ ಮಾತನಾಡಿದ ವಿಡಿಯೋ


‘ಜವಾಹಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರು ಅಂದಿನ ಅಂಬಾನಿ ಆಗಿದ್ದರು. ಅಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು ಅನ್ನೋದು ಯಾರಿಗೂ ಗೊತ್ತಿರಲಿಲ್ಲ’ ಎಂದು ಕಂಗನಾ ಹೇಳಿದ್ದರು. ಇದರಿಂದಲೂ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು.

ಇದನ್ನೂ ಓದಿ: ಲಾಭಿ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದ್ರಾ ಆಲಿಯಾ? ಮನಬಂದಂತೆ ಟೀಕಿಸಿದ ಕಂಗನಾ ರಣಾವತ್

ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಹೆಸರಿನ ಸಿನಿಮಾ ಕೂಡ ನಿರ್ದೇಶನ ಮಾಡಿದ್ದಾರೆ. ಇದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಇದೆ. ಸ್ವತಃ ಕಂಗನಾ ಅವರು ಇಂದಿರಾ ಗಾಂಧಿ ಪಾತ್ರ ಮಾಡಿದ್ದಾರೆ. 1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Mon, 6 May 24