ಮೊದಲ ಮಗುವಿನ ನಿರೀಕ್ಷೆಯಲ್ಲಿ ಕವಿತಾ ಗೌಡ-ಚಂದನ್; ಸಿಹಿ ಸುದ್ದಿ ನೀಡಿದ ಜೋಡಿ
ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿಯ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವುದಾಗಿ ಈ ದಂಪತಿ ತಿಳಿಸಿದ್ದಾರೆ. ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಜನಪ್ರಿಯತೆ ಹೊಂದಿದ್ದಾರೆ.

ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ (Kavitha Gowda) ಅವರು ಇಂದು (ಮೇ 5) ಸಿಹಿ ಸುದ್ದಿ ನೀಡಿದ್ದಾರೆ. ಪತಿ ಚಂದನ್ ಕುಮಾರ್ ಜೊತೆ ಇರುವ ಹೊಸ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ತಾವು ಪ್ರಗ್ನೆಂಟ್ (Kavitha Gowda Pregnant) ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ (Chandan Kumar) ದಂಪತಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಜನಪ್ರಿಯತೆ ಪಡೆದಿದ್ದಾರೆ.
ಕವಿತಾ ಗೌಡ ಅವರು 2013ರಿಂದಲೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಸೀರಿಯಲ್ಗಳಲ್ಲೂ ಅವರು ನಟಿಸಿದ್ದಾರೆ. ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಿಂದ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿತು. ‘ಬಿಗ್ ಬಾಸ್ ಕನ್ನಡ ಸೀಸನ್ 6’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಮೂಲಕ ಇನ್ನಷ್ಟು ಫೇಮಸ್ ಆದರು. 2021ರಲ್ಲಿ ಅವರು ಚಂದನ್ ಕುಮಾರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ: ಪ್ರೆಗ್ನೆಂಟ್ ಎಂದು ಗಾಸಿಪ್ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ
ಚಂದನ್ ಕುಮಾರ್ ಕೂಡ ಹಲವು ಸೀರಿಯಲ್ಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಕವಿತಾ ಗೌಡ ಮತ್ತು ಚಂದನ್ ಕುಮಾರ್ ಪರಸ್ಪರ ಪ್ರೀತಿಸಿ ಮದುವೆ ಆದರು. ನಟನೆ ಮಾತ್ರವಲ್ಲದೇ ಹೋಟೆಲ್ ಬಿಸ್ನೆಸ್ನಲ್ಲೂ ಈ ದಂಪತಿ ತೊಡಗಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಮಗುವಿನ ಆಗಮನವನ್ನು ಈ ದಂಪತಿ ಎದುರು ನೋಡುತ್ತಿದ್ದಾರೆ.
View this post on Instagram
ವಿಶೇಷ ಏನೆಂದರೆ, ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಶೇರ್ ಮಾಡಿಕೊಂಡಿರುವ ಫೋಟೋವನ್ನು ಜೂಮ್ ಮಾಡಿ ನೋಡಿದರೆ ಅದರಲ್ಲಿ ಪ್ರೆಗ್ನೆನ್ಸಿ ಸ್ಕ್ಯಾನ್ ಕಾಪಿ ಕಾಣಿಸುತ್ತಿದೆ. ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್ಗೆ ಕಮೆಂಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ನೇಹಾ ಗೌಡ, ಗೀತಾ ಭಾರತಿ ಭಟ್, ವಿನಯ್ ಗೌಡ, ಶ್ವೇತಾ ಚಂಗಪ್ಪ ಮುಂತಾದವರು ವಿಶ್ ಮಾಡಿದ್ದಾರೆ. ಪ್ರಗ್ನೆಂಟ್ ಆಗಿರುವುದರಿಂದ ಕವಿತಾ ಕೌಡ ಅವರು ಒಂದಷ್ಟು ಸಮಯ ಬಣ್ಣದ ಲೋಕದಿಂದ ಬ್ರೇಕ್ ಪಡೆಯಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




