Kangana Ranaut: ಕಂಗನಾ ರಣಾವತ್​ ಟ್ವಿಟರ್​ ಖಾತೆ ಸಸ್ಪೆಂಡ್​; ವಿಡಿಯೋ ಮೂಲಕ ಕಣ್ಣೀರು ಹಾಕಿದ ನಟಿ

|

Updated on: May 04, 2021 | 1:39 PM

Kangana Ranaut Twitter suspended: ನರೇಂದ್ರ ಮೋದಿ ಪರವಾಗಿ ಅಭಿಪ್ರಾಯ ಮಂಡಿಸುವ ಭರದಲ್ಲಿ ಕಂಗನಾ ರಣಾವತ್​ ಅವರು ಹಿಂಸೆಗೆ ಪ್ರಚೋದನೆ ನೀಡುವಂತಹ ಟ್ವೀಟ್​ಗಳನ್ನು ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರ ಟ್ವಿಟರ್​ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿದೆ.

Kangana Ranaut: ಕಂಗನಾ ರಣಾವತ್​ ಟ್ವಿಟರ್​ ಖಾತೆ ಸಸ್ಪೆಂಡ್​; ವಿಡಿಯೋ ಮೂಲಕ ಕಣ್ಣೀರು ಹಾಕಿದ ನಟಿ
ಕಂಗನಾ ರಣಾವತ್
Follow us on

ಸಿನಿಮಾಗಿಂತಲೂ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿ ಮಾಡುವ ಬಾಲಿವುಡ್ ನಟಿ ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುವ ಕಂಗನಾ ಅವರು ದೇಶದ ರಾಜಕೀಯ ಪರಿಸ್ಥಿತಿಯ ಕುರಿತು ಸರಣಿ ಟ್ವೀಟ್​ ಮಾಡುತ್ತಿದ್ದರು. ಪ್ರಚೋದನಕಾರಿಯಾಗಿ ಟ್ವೀಟ್​ ಮಾಡಿದ್ದಕ್ಕಾಗಿ ಈಗ ಅವರ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಕೂಡಲೇ ಅವರು ಇನ್​ಸ್ಟಾಗ್ರಾಮ್​ಗೆ ಬಂದು ಕಣ್ಣೀರು ಹಾಕಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಹಿಂಸಾಚಾರ ಆಗಿರುವ ಬಗ್ಗೆ ವರದಿ ಆಗಿದೆ. ಆ ಕುರಿತು ಟ್ವೀಟ್​ ಮಾಡಿರುವ ಕಂಗನಾ ಅವರು ಜನರನ್ನು ಕೆರಳಿಸುವಂತೆ ಬರೆದುಕೊಂಡಿದ್ದರು. ಅದಕ್ಕೆ ಅನೇಕರ ವಿರೋದ ವ್ಯಕ್ತವಾಗಿದೆ. ನರೇಂದ್ರ ಮೋದಿ ಪರವಾಗಿ ಅಭಿಪ್ರಾಯ ಮಂಡಿಸುವ ಭರದಲ್ಲಿ ಅವರು ಹಿಂಸೆಗೆ ಪ್ರಚೋದನೆ ನೀಡುವಂತಹ ಟ್ವೀಟ್​ಗಳನ್ನು ಮಾಡಿದ್ದಾರೆ ಎಂದು ಅವರ ಟ್ವಿಟರ್​ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿದೆ.

ಬಳಿಕ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಕಣ್ಣೀರು ಹಾಕಿದ್ದಾರೆ. ‘ಬಂಗಾಳದಿಂದ ತುಂಬ ಕೆಟ್ಟ ಸುದ್ದಿ ಕೇಳಿಬರುತ್ತಿದೆ. ಜನರ ಹತ್ಯೆ ಆಗುತ್ತಿದೆ. ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ. ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರ ಬಗ್ಗೆ ಜಾಗತಿಕ ಮಾಧ್ಯಮಗಳು ಮೌನ ವಹಿಸಿವೆ. ದೇಶದ್ರೋಹಿಗಳೇ ದೇಶ ನಡೆಸುತ್ತಾರಾ? ಅವರಿಗೆ ನಾವು ಯಾಕೆ ಹೆದರಿದ್ದೇವೆ? ರಾಷ್ಟ್ರಪತಿ ಆಳ್ವಿಕೆ ಬರಬೇಕಿದೆ’ ಎಂದು ಕಂಗನಾ ಕಣ್ಣೀರು ಸುರಿಸಿದ್ದಾರೆ.

(ಸಸ್ಪೆಂಡ್​ ಆಗಿರುವ ಕಂಗನಾ ರಣಾವತ್​ ಟ್ವಿಟರ್​ ಖಾತೆ)

ಈ ವಿಡಿಯೋ ಜೊತೆ ‘ಪದಗಳಲ್ಲಿ ಹೇಳಲಾಗದಷ್ಟು ನೋವಾಗುತ್ತಿದೆ. ಇದು ಪ್ರಜಾಪ್ರಭುತ್ವದ ಸಾವು. ಸರ್ಕಾರಕ್ಕೆ ಇದು ಮುಖ್ಯ ಸಂದೇಶ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

#BengalBurning #bengalviolence ಹ್ಯಾಷ್​ಟ್ಯಾಗ್​ಗಳನ್ನು ಕೂಡ ಕಂಗನಾ ಬಳಸಿದ್ದಾರೆ. ಸದ್ಯ ಈ ವಿಚಾರ ಭಾರಿ ಚರ್ಚೆಗೆ ಒಳಗಾಗುತ್ತಿದೆ.

ಇದನ್ನೂ ಓದಿ:

Kangana Ranaut: ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

Narendra Modi: ಮೋದಿಯಿಂದಾಗಿ ಜಪಾನ್​ನಲ್ಲಿ ಕೊರೊನಾ 2ನೇ ಅಲೆ ಶುರು ಆಗಿದ್ಯಾ? ಕಂಗನಾ ಖಡಕ್​ ಪ್ರಶ್ನೆ