ಡ್ರಗ್ಸ್​ ಕೇಸ್​ನಲ್ಲಿ ರಾಗಿಣಿ ನಿರಪರಾಧಿ; ನಟಿಯ ವಿರುದ್ಧದ ಕೇಸ್ ಖುಲಾಸೆ

| Updated By: ರಾಜೇಶ್ ದುಗ್ಗುಮನೆ

Updated on: Jan 14, 2025 | 8:58 AM

ರಾಗಿಣಿ ದ್ವಿವೇದಿ ಅವರ ವಿರುದ್ಧ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಹೈಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ. ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ರದ್ದಾಗಿದೆ. ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಈ ತೀರ್ಪು ರಾಗಿಣಿಗೆ ದೊಡ್ಡ ನೆಮ್ಮದಿ ನೀಡಿದೆ. ಅವರ ವೃತ್ತಿ ಜೀವನದ ಮೇಲೆ ಈ ಪ್ರಕರಣ ಸಾಕಷ್ಟು ಪರಿಣಾಮ ಬೀರಿತ್ತು.

ಡ್ರಗ್ಸ್​ ಕೇಸ್​ನಲ್ಲಿ ರಾಗಿಣಿ ನಿರಪರಾಧಿ; ನಟಿಯ ವಿರುದ್ಧದ ಕೇಸ್ ಖುಲಾಸೆ
ರಾಗಿಣಿ
Follow us on

ನಟಿ ರಾಗಿಣಿ ದ್ವಿವೇದಿ ಹೆಸರು ಡ್ರಗ್ಸ್ ಕೇಸ್​ನಲ್ಲಿ ತಳುಕು ಹಾಕಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2020ರ ಸೆಪ್ಟೆಂಬರ್​ನಲ್ಲಿ ರಾಗಿಣಿ ಅವರನ್ನು ಬಂಧಿಸಲಾಗಿತ್ತು. ಅವರು ಹಲವು ದಿನ ಜೈಲಿನಲ್ಲೂ ಕೂಡ ಇದ್ದರು. ನಾಲ್ಕು ವರ್ಷಗಳ ಬಳಿಕ ಡ್ರಗ್ಸ್​ ಕೇಸ್​ನಲ್ಲಿ ರಾಗಿಣಿ ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್​ ಆದೇಶ ನೀಡಿದೆ. ಇದರಿಂದ ರಾಗಿಣಿ ಅವರು ರಿಲೀಫ್ ಆಗಿದ್ದಾರೆ.

ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಈ ಕಾರಣಕ್ಕೆ ಎನ್​ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎನ್ನಲಾಗಿದೆ.

ಕೇವಲ ಸಹ ಆರೋಪಿಗಳ ಹೇಳಿಕೆ ಆಧರಿಸಿ ರಾಗಿಣಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ರಾಗಿಣಿ ಪರ ವಕೀಲ ಎ. ಮೊಹಮ್ಮದ್ ತಾಹಿರ್ ವಾದ ಮಾಡಿದ್ದರು. ಈ ವಾದವನ್ನು ಪರಿಣಿಸಿದ ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಎ 4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣ ಕೂಡ ರದ್ದಾಗಿದೆ.

ರಾಗಿಣಿ ದ್ವಿವೇದಿ ಅವರು ‘ಕೆಂಪೇಗೌಡ’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದವರು. ‘ತುಪ್ಪ ಬೇಕಾ ತುಪ್ಪ..’ ಹಾಡಿಗೆ ಡ್ಯಾನ್ಸ್ ಮಾಡಿ ತುಪ್ಪದ ಹುಡುಗಿ ಎಂದೇ ಫೇಮಸ್ ಆದರು. ಡ್ರಗ್ಸ್ ಕೇಸ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಕಪ್ಪು ಚುಕ್ಕಿ ಆಗಿತ್ತು. ಆದರೆ, ಈಗ ಅವರು ಆರೋಪ ಮುಕ್ತರಾಗಿದ್ದಾರೆ.

ಇದನ್ನೂ ಓದಿ:
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.