ಧಾರಾವಾಹಿಗಳ ಟಿಆರ್ಪಿಯಲ್ಲಿ ಏರಿಳಿತ ಕಾಮನ್. ಪ್ರತಿ ವಾರ ಧಾರಾವಾಹಿಗಳ ಕಥೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಕಲರ್ಸ್ ಕನ್ನಡ, ಜೀ ಕನ್ನಡ ಮೊದಲಾದ ವಾಹಿನಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಇದೆ. ಸದ್ಯ ಜೀ ಕನ್ನಡ (Zee Kannada) ಟಿಆರ್ಪಿಯಲ್ಲಿ ಮುಂದಿದೆ. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅನೇಕ ಧಾರಾವಾಹಿಗಳು ಮೊದಲ ಸ್ಥಾನದಲ್ಲಿ ಇವೆ. ಅದೇ ರೀತಿ ಕಲರ್ಸ್ ಕನ್ನಡದ ಧಾರಾವಾಹಿಗಳು ಕೂಡ ರೇಸ್ಗೆ ಇಳಿದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
13ನೇ ವಾರದ ಟಿಆರ್ಪಿ ಪ್ರಕಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇತ್ತೀಚೆಗೆ ಆರಂಭ ಆದ ಈ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಲಕ್ಷ್ಮಿ ದೇವಮ್ಮ, ಅಶೋಕ್ ಜಂಬೆ, ಶ್ವೇತಾ, ಲಕ್ಷ್ಮಿ ಹೆಗಡೆ, ದಿಶಾ ಮದನ್, ಚಂದನಾ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕನ್ನ ಮಕ್ಕಳು’ ಧಾರಾವಾಹಿ ಇದೆ. ಹಲವು ಸಮಯದಿಂದ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಈ ಇತ್ತೀಚೆಗೆ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಗುತ್ತಿದೆ.
ಮೂರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮನ ಮಧ್ಯೆ ಪ್ರೀತಿ ಮೊಳೆದಿದೆ. ಇವರ ಲವ್ ಸ್ಟೋರಿ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನ ಕಾಪಾಡಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ‘ರಾಮಾಚಾರಿ’ ಧಾರಾವಾಹಿ ಇದೆ. ಈ ಧಾರಾವಾಹಿ ಗಮನ ಸೆಳೆಯುತ್ತಿದೆ. ಟಾಪ್ ಐದರಲ್ಲಿರುವ ಏಕೈಕ ಕಲರ್ಸ್ ಕನ್ನಡದ ಧಾರಾವಾಹಿ ಇದಾಗಿದೆ.
ಇದನ್ನೂ ಓದಿ: ಟಿಆರ್ಪಿಯಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಹಿಂದಿಕ್ಕಿದ ‘ಪುಟ್ಟಕ್ಕ’; ‘ರಾಮಾಚಾರಿ’ಗೂ ಇದೆ ಸ್ಥಾನ
ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಸಾರಾ ಅಣ್ಣಯ್ಯ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ