ಟಿಆರ್ಪಿಯಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಹಿಂದಿಕ್ಕಿದ ‘ಪುಟ್ಟಕ್ಕ’; ‘ರಾಮಾಚಾರಿ’ಗೂ ಇದೆ ಸ್ಥಾನ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಪಕ್ಕಾ ಹಳ್ಳಿ ಸೊಗಡಿನಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಸಂಜನಾ ಬುರ್ಲಿ, ಉಮಾಶ್ರೀ, ಮಂಜು ಭಾಷಿಣಿ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಪ್ರತಿ ವಾರವೂ ಧಾರಾವಾಹಿಗಳ ಟಿಆರ್ಪಿಯಲ್ಲಿ ಸಾಕಷ್ಟು ಏರಿಳಿತ ಸಾಮಾನ್ಯ. ಇಂದು ಟಾಪ್ನಲ್ಲಿದ್ದ ಧಾರಾವಾಹಿ ಮುಂದಿನ ವಾರಕ್ಕೆ ಎರಡನೇ ಸ್ಥಾನಕ್ಕೆ ಇಳಿಯಬಹುದು. ಈ ವರ್ಷದ 11ನೇ ವಾರದ ಟಿಆರ್ಪಿಯಲ್ಲಿ ಹಾಗೆಯೇ ಆಗಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ಹೊಸ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಈಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) ಕರ್ನಾಟಕ ಟಿಆರ್ಪಿಯಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿಯನ್ನು ಹಿಂದಿಕ್ಕಿದೆ. ‘ಶ್ರೀಗೌರಿ’, ರಾಮಾಚಾರಿ’ ಟಿಆರ್ಪಿಯಲ್ಲೂ ಏರಿಕೆ ಕಂಡಿದೆ.
‘ಪುಟ್ಟಕ್ಕನ ಮಕ್ಕಳು’
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಪಕ್ಕಾ ಹಳ್ಳಿ ಸೊಗಡಿನಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಸಂಜನಾ ಬುರ್ಲಿ, ಉಮಾಶ್ರೀ, ಮಂಜು ಭಾಷಿಣಿ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಲಕ್ಷ್ಮೀ ನಿವಾಸ
ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆರಂಭಿಸಿದೆ. ಅಶೋಕ್ ಜಂಬೆ, ದಿಶಾ ಮದನ್, ಚಂದನಾ, ಲಕ್ಷ್ಮಿ ದೇವಮ್ಮ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಗಮನ ಸೆಳೆಯುತ್ತಿದೆ.
ರಾಮಾಚಾರಿ
ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ಗೂ ಈ ಬಾರಿ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಈ ಬಾರಿ ಮೂರನೇ ಸ್ಥಾನ ಪಡೆದಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಶ್ರೀರಸ್ತು ಶುಭಮಸ್ತು
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದುಕೊಂಡು ಮುನ್ನುಗ್ಗುತ್ತಿದೆ. ಒಂದು ಪ್ರಬುದ್ಧ ಪ್ರೇಮಕಥೆಯನ್ನು ಈ ಧಾರಾವಾಹಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ಅಮೃತಧಾರೆ’ ಟಿಆರ್ಪಿ ಏರಿಕೆ; ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ? ಇಲ್ಲಿದೆ ವಿವರ
ಅಮೃತಧಾರೆ
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ’ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. ನಂತರದ ಸ್ಥಾನಗಳಲ್ಲಿ ‘ಸೀತಾ ರಾಮ’, ‘ಸತ್ಯ’, ಶ್ರೀಗೌರಿ’ ಧಾರಾವಾಹಿಗಳು ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Thu, 21 March 24