‘ಇದರ ಅವಶ್ಯಕತೆ ಇರಲಿಲ್ಲ’; ಯುವತಿಯರ ವೈಯಕ್ತಿಕ ವಿಡಿಯೋ ಶೇರ್ ಮಾಡಿಕೊಂಡ ನಟಿಗೆ ಕ್ಲಾಸ್

|

Updated on: Jul 15, 2023 | 10:05 AM

ಇಬ್ಬರು ಹುಡುಗಿಯರು ಮದ್ಯದಂಗಡಿಗೆ ತೆರಳಿ ಮದ್ಯ ಖರೀದಿಸುತ್ತಿರುವ ವಿಡಿಯೋವನ್ನು ಕಸ್ತೂರಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಹುಡುಗಿಯರೇ ಚೆನ್ನಾಗಿ ಕುಡಿಯಿರಿ’ ಎಂದು ಕ್ಯಾಪ್ಶನ್​ ನೀಡಿ ಅವರನ್ನು ಪ್ರೋತ್ಸಾಹಿಸಿದ್ದಾರೆ.

‘ಇದರ ಅವಶ್ಯಕತೆ ಇರಲಿಲ್ಲ’; ಯುವತಿಯರ ವೈಯಕ್ತಿಕ ವಿಡಿಯೋ ಶೇರ್ ಮಾಡಿಕೊಂಡ ನಟಿಗೆ ಕ್ಲಾಸ್
ಕಸ್ತೂರಿ ಶಂಕರ್
Follow us on

ನಟಿ ಕಸ್ತೂರಿ ಶಂಕರ್ (Kasthuri Shankar) ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು. ಅವರು ಮೂಲತಃ ತಮಿಳಿನವರು. ಈಗ ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಭಾಗಿ ಆಗಿದ್ದಾರೆ. ಸಿನಿಮಾ, ಧಾರಾವಾಹಿಗಳ ಜೊತೆಗೆ ಇತರ ವಿಷಯಗಳಿಂದಲೂ ಕಸ್ತೂರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್ (Prabhas) ಅಭಿನಯದ ‘ಆದಿಪುರುಷ್’ ಚಿತ್ರವನ್ನು ಅವರು ಟೀಕೆ ಮಾಡಿ ಪ್ರಭಾಸ್ ಅಭಿಮಾನಿಗಳಿಂದ ವಿರೋಧ ಎದುರಿಸಿದ್ದರು. ಈಗ ಅವರು ಹಂಚಿಕೊಂಡಿರುವ ವಿಡಿಯೋ ಚರ್ಚೆ ಹುಟ್ಟುಹಾಕಿದೆ.

ಕಸ್ತೂರಿ ಶಂಕರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1991ರಲ್ಲಿ. ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರು ಕನ್ನಡಕ್ಕೂ ಕಾಲಿಟ್ಟರು. ‘ಜಾಣ’ ಅವರ ನಟನೆಯ ಮೊದಲ ಕನ್ನಡ ಸಿನಿಮಾ. ‘ತುತ್ತಾ ಮುತ್ತಾ’, ‘ಹಬ್ಬ’, ‘ಪ್ರೇಮಕ್ಕೆ ಸೈ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಈಗ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಇಬ್ಬರು ಹುಡುಗಿಯರ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಇಬ್ಬರು ಹುಡುಗಿಯರು ಮದ್ಯದಂಗಡಿಗೆ ತೆರಳಿ ಮದ್ಯ ಖರೀದಿಸುತ್ತಿರುವ ವಿಡಿಯೋವನ್ನು ಕಸ್ತೂರಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಹುಡುಗಿಯರೇ ಚೆನ್ನಾಗಿ ಕುಡಿಯಿರಿ’ ಎಂದು ಕ್ಯಾಪ್ಶನ್​ ನೀಡಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಇದು ವಾಟ್ಸಾಪ್ ಫಾರ್ವಡ್​​ನಲ್ಲಿ ಬಂದಿರುವ ವಿಡಿಯೋ ಎಂಬುದನ್ನು ಉಲ್ಲೇಖಿಸಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅನೇಕರು ನಟಿಯನ್ನು ಟೀಕಿಸಿದ್ದಾರೆ. ‘ಇದು ಯುವತಿಯರ ವೈಯಕ್ತಿಕ ವಿಚಾರ. ಇದನ್ನು ಶೇರ್ ಮಾಡಿಕೊಂಡಿದ್ದೇಕೆ’ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾಯಕಿ ಚಿನ್ಮಯಿ, ‘ಪ್ರಾಮಾಣಿಕವಾಗಿ ಹೇಳುವುದಾದರೆ, ಇಂತಹ ವಿಡಿಯೋ ಶೇರ್ ಮಾಡುವ ಅವಶ್ಯಕತೆ ಇಲ್ಲ’ ಎಂದು ಕಸ್ತೂರಿ ವಿರುದ್ಧ ಕೋಪ ಹೊರಹಾಕಿದ್ದಾರೆ. ನೆಟ್ಟಿಗರು ಕೂಡ ಚಿನ್ಮಯಿ ಅವರನ್ನು ಬೆಂಬಲಿಸಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನೂ ಅನೇಕರು, ‘ನಿಮ್ಮ ಪೋಸ್ಟ್​​ ಅನೇಕರ ದಾರಿ ತಪ್ಪಿಸುವಂತಿದೆ’ ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ಕಮೆಂಟ್​ಗಳಿಗೆ ಸಮರ್ಥನೆ ನೀಡುವ ಕೆಲಸವನ್ನು ಕಸ್ತೂರಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Sat, 15 July 23