Keerthy Suresh: ಉದ್ಯಮಿ ಜೊತೆ ಕೀರ್ತಿ ಸುರೇಶ್ ಸುತ್ತಾಟ​; ಮದುವೆ ಬಗ್ಗೆ ಮಾಹಿತಿ ನೀಡಿದ ನಟಿಯ ತಂದೆ

ಇತ್ತೀಚೆಗೆ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಫರ್ಹಾನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದ ಕೀರ್ತಿ ಸುರೇಶ್ ಅವರು, ಹುಟ್ಟುಹಬ್ಬದ ಶುಭಾಶಯ ಎಂದಿದ್ದರು. ಇದರಿಂದ ವದಂತಿ ಹುಟ್ಟಿತ್ತು.

Keerthy Suresh: ಉದ್ಯಮಿ ಜೊತೆ ಕೀರ್ತಿ ಸುರೇಶ್ ಸುತ್ತಾಟ​; ಮದುವೆ ಬಗ್ಗೆ ಮಾಹಿತಿ ನೀಡಿದ ನಟಿಯ ತಂದೆ
ಸುರೇಶ್​-ಕೀರ್ತಿ-ಫರ್ಹಾನ್

Updated on: May 29, 2023 | 10:11 AM

ನಟ-ನಟಿಯರು ಯಾರದ್ದಾದರೂ ಜೊತೆ ಸುತ್ತಾಟ ನಡೆಸಿದರೆ ಸಾಕು, ಡೇಟಿಂಗ್ ವಿಚಾರ ಹುಟ್ಟಿಕೊಳ್ಳುತ್ತದೆ. ಪ್ರೀತಿ-ಪ್ರೇಮದ ರೆಕ್ಕೆ ಪಡೆದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಈ ಪೈಕಿ ಕೆಲವು ನಿಜವಾದರೆ ಇನ್ನೂ ಕೆಲವು ಸುಳ್ಳಾಗಿದೆ. ನಟಿ ಕೀರ್ತಿ ಸುರೇಶ್ (Keerthy Suresh) ಅವರ ಬಗ್ಗೆಯೂ ಒಂದಷ್ಟು ವರದಿ ಹುಟ್ಟಿಕೊಂಡಿದೆ. ದುಬೈನಲ್ಲಿರುವ ಭಾರತೀಯ ಉದ್ಯಮಿ ಫರ್ಹಾನ್ (Farhan) ಜೊತೆ ಕೀರ್ತಿ ಸುರೇಶ್ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಸ್ವತಃ ಕೀರ್ತಿ ತಂದೆ ಸುರೇಶ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಇದೆಲ್ಲವೂ ವದಂತಿ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಫೋಟೋ ಪೋಸ್ಟ್ ಮಾಡಿದ್ದ ಕೀರ್ತಿ ಸುರೇಶ್ ಅವರು, ‘ಹುಟ್ಟುಹಬ್ಬದ ಶುಭಾಶಯ ಫರ್ಹಾನೀ.. ಒಳ್ಳೆಯದಾಗಲಿ ಡಾ’ ಎಂದು ಅವರು ಬರೆದುಕೊಂಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕೆಲ ತಮಿಳು ಮಾಧ್ಯಮಗಳು ಇವರ ಮಧ್ಯೆ ಸಂಬಂಧ ಕಟ್ಟಿದ್ದವು. ಇದನ್ನು ಸುರೇಶ್​ ಕುಮಾರ್ ಅಲ್ಲಗಳೆದಿದ್ದಾರೆ.

‘ಕೀರ್ತಿ ಹಾಗೂ ಫರ್ಹಾನ್ ಗೆಳೆಯರಷ್ಟೇ. ಕೀರ್ತಿ ಹಾಕಿದ ಪೋಟೋನ ಕೆಲ ಮಾಧ್ಯಮಗಳು ವೈಭವೀಕರಿಸಿವೆ. ಅದರಲ್ಲಿ ನಿಜವಿಲ್ಲ. ಇಂತಹ ಕಥೆಗಳನ್ನು ನಂಬಬೇಡಿ. ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡಿ. ನನ್ನ ಮಗಳ ಮದುವೆ ನಿಶ್ಚಯ ಆದರೆ ನಾನು ಮೊದಲು ಮಾಹಿತಿ ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ವರದಿ ಅಥವಾ ವದಂತಿಗಳಿಗೆ ಲಕ್ಷ್ಯ ಕೊಡಬೇಡಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: Keerty Suresh: ನಟಿ ಕೀರ್ತಿ ಸುರೇಶ್ ಹೊಸ ಚಿತ್ರಗಳು, ಯಾಕೋ ಮುಖಚಹರೆ ಬದಲಾದಂತಿದೆ

ಇತ್ತೀಚೆಗೆ ರಿಲೀಸ್ ಆದ ‘ದಸರಾ’ ಸಿನಿಮಾ ಮೂಲಕ ಕೀರ್ತಿ ಸುರೇಶ್ ಅವರು ಯಶಸ್ಸು ಕಂಡಿದ್ದಾರೆ. ನಾನಿಗೆ ಜೊತೆಯಾಗಿ ಅವರು ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ಬಿಸ್ನೆಸ್ ಮಾಡಿದೆ. ಸದ್ಯ ಅವರು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆಯೂ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಕೆಲವು ವರ್ಷಗಳಿಂದ ಕೀರ್ತಿ ಸುರೇಶ್ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಳಿಕ ಅವರು ಗೆಲುವಿನ ಟ್ರ್ಯಾಕ್​​ಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:10 am, Mon, 29 May 23