AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

16ನೇ ವಯಸ್ಸಲ್ಲಿ ಸ್ಟಾರ್, 18ನೇ ವಯಸ್ಸಿಗೆ ಮದುವೆ, 19ನೇ ವಯಸ್ಸಿಗೆ ಸಾವು; ಈ ನಟಿಯದ್ದು ದುರಂತ ಅಂತ್ಯ

ತಮ್ಮ ಸೌಂದರ್ಯ ಮತ್ತು ನಟನೆಯಿಂದ ಬೆಳ್ಳಿತೆರೆಯಲ್ಲಿ ಜಾದೂ ಮಾಡಿದರು. ಆದರೆ ಪ್ರೀತಿ ಮತ್ತು ಮದುವೆ ಅವರ ಜೀವನವನ್ನೆ ತಿರುಗಿಸಿತು. ಕೇವಲ 19ನೇ ವಯಸ್ಸಿಗೆ ಅವರು ಮೃತಪಟ್ಟರು.

16ನೇ ವಯಸ್ಸಲ್ಲಿ ಸ್ಟಾರ್, 18ನೇ ವಯಸ್ಸಿಗೆ ಮದುವೆ, 19ನೇ ವಯಸ್ಸಿಗೆ ಸಾವು; ಈ ನಟಿಯದ್ದು ದುರಂತ ಅಂತ್ಯ
16ನೇ ವಯಸ್ಸಿಗೆ ಖ್ಯಾತಿ ಪಡೆದ ನಟಿ
ರಾಜೇಶ್ ದುಗ್ಗುಮನೆ
|

Updated on: May 29, 2023 | 7:43 AM

Share

ಮೇಲಿನ ಫೋಟೋದಲ್ಲಿರೋದು ಸ್ಟಾರ್ ನಟಿ. 16ನೇ ವಯಸ್ಸಿಗೆ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದರು. ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಮಿಂಚಿದರು. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆಗಿ ವಿಶೇಷ ಮನ್ನಣೆ ಗಳಿಸಿದರು. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಬೆಳ್ಳಿತೆರೆಯಲ್ಲಿ ಜಾದೂ ಮಾಡಿದರು. ಆದರೆ ಪ್ರೀತಿ ಮತ್ತು ಮದುವೆ (Marriage) ಅವರ ಜೀವನವನ್ನೆ ತಿರುಗಿಸಿತು. ಕೇವಲ 19ನೇ ವಯಸ್ಸಿಗೆ ಅವರು ಮೃತಪಟ್ಟರು. ಅವರ ಸಾವಿಗೆ ನಿಜವಾದ ಕಾರಣ ಇನ್ನೂ ಸಿಕ್ಕಿಲ್ಲ. ಇವರು ಬೇರಾರು ಅಲ್ಲ ಟಾಲಿವುಡ್​ ನಟಿ ದಿವ್ಯಾ ಭಾರತಿ (Divya Bharati).

ದಿವ್ಯಾ ಭಾರತಿ ಫೆಬ್ರವರಿ 24, 1974ರಂದು ಮುಂಬೈನಲ್ಲಿ ಜನಿಸಿದರು. ಅವರು ಎಂದಿಗೂ ನಾಯಕಿ ಆಗಬೇಕೆಂದು ಬಯಸಿರಲಿಲ್ಲ. ಆದರೂ 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. 1990ರಲ್ಲಿ ಬಂದ ತಮಿಳಿನ ‘ನೀಲ ಪೆಣ್ಣೆ’ ಅವರ ಮೊದಲ ಸಿನಿಮಾ. ತೆಲುಗಿನ ‘ಬೊಬ್ಬಿಲಿ ರಾಜ’ ಸಿನಿಮಾ ಮೂಲಕ ಅವರು ದೊಡ್ಡ ಮಟ್ಟದ ಯಶಸ್ಸು ಕಂಡರು. ಮುಂಬೈನವರಾದ ಅವರು ದಕ್ಷಿಣದಲ್ಲಿ ಸಾಲು ಸಾಲು ಆಫರ್‌ ಪಡೆದರು. ಕಡಿಮೆ ಸಮಯದಲ್ಲಿ ಟಾಪ್ ಹೀರೋಯಿನ್ ಆಗಿ ಜನಮನ್ನಣೆ ಪಡೆದರು.

ತೆಲುಗು ಮತ್ತು ತಮಿಳಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ದಿವ್ಯಾ ಭಾರತಿ, 1992ರಲ್ಲಿ ‘ವಿಶ್ವಾತ್ಮ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ದಿವ್ಯಾ ಭಾರತಿ 1992-93ರ ಅವಧಿಯಲ್ಲಿ ಸುಮಾರು 14 ಚಿತ್ರಗಳಲ್ಲಿ ನಟಿಸಿದ್ದರು. ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಅವರನ್ನು ಕೆಲವು ವರ್ಷಗಳಿಂದ ದಿವ್ಯಾ ಪ್ರೀತಿಸುತ್ತಿದ್ದರು. ಮೇ 10, 1992ರಂದು ಇಬ್ಬರೂ ರಹಸ್ಯವಾಗಿ ವಿವಾಹವಾದರು.

ಇದನ್ನೂ ಓದಿ: Keerthy Suresh: ಉದ್ಯಮಿ ಜೊತೆ ಕೀರ್ತಿ ಸುರೇಶ್ ಸುತ್ತಾಟ​; ಮದುವೆ ಬಗ್ಗೆ ಮಾಹಿತಿ ನೀಡಿದ ನಟಿಯ ತಂದೆ

ದುರಂತ ಎಂದರೆ ಮದುವೆ ಆಗಿ ಒಂದು ವರ್ಷ ಕಳೆಯುವುದರೊಳಗೆ ಮುಂಬೈನಲ್ಲಿ ದಿವ್ಯಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರು. ಏಪ್ರಿಲ್ 5, 1993ರ ಸಂಜೆ ಸಮಯದಲ್ಲಿ ಅವರು ಮುಂಬೈನ ತಮ್ಮ ನಿವಾಸದಲ್ಲಿದ್ದರು. ಅಪಾರ್ಟ್​ಮೆಂಟ್​ನ ಐದನೇ ಮಹಡಿಯ ಬಾಲ್ಕನಿಯಿಂದ ಅವರು ಕೆಳಕ್ಕೆ ಬಿದ್ದರು. ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನ ಆಗಲಿಲ್ಲ. ಅವರಿಗೆ 19 ವರ್ಷ ವಯಸ್ಸಾಗಿತ್ತು. ಏಪ್ರಿಲ್ 7ರಂದು ಅವರ ಅಂತ್ಯಕ್ರಿಯೆ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ