ಈ ಚಿತ್ರದಲ್ಲಿರೋ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
ಸೆಲೆಬ್ರಿಟಿಗಳು ಆಗಾಗ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕುತ್ತಾರೆ.
ಸೋಶಿಯಲ್ ಮೀಡಿಯಾ ವ್ಯಾಪ್ತಿ ಹೆಚ್ಚಿದೆ. ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳಿಗೋಸ್ಕರ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿ ಇರುತ್ತಾರೆ. ಫ್ಯಾನ್ಸ್ಗೋಸ್ಕರ ವಿವಿಧ ರೀತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಸ್ಟಾರ್ ನಟಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನಟಿ ಯಾರೆಂದು ಗುರುತಿಸುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ. ಅಂದಹಾಗೆ ಇದು ಬೇರಾರೂ ಅಲ್ಲ ನಟಿ ಜಾನ್ವಿ ಕಪೂರ್(Janhvi Kapoor).
ಸೆಲೆಬ್ರಿಟಿಗಳು ಆಗಾಗ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಅವರು ಈ ಫೋಟೋ ಹಂಚಿಕೊಳ್ಳಲು ಪ್ರಮುಖ ಕಾರಣ ನಟಿ ಶ್ರೀದೇವಿ.
ಶ್ರೀದೇವಿ ಅವರು ಮೃತಪಟ್ಟು ಹಲವು ವರ್ಷಗಳು ಕಳೆದಿವೆ. ದುಬೈನಲ್ಲಿ ಅವರು ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟರು. ಈ ನೋವಿನಿಂದ ಹೊರ ಬರೋಕೆ ಜಾನ್ವಿ ಕಪೂರ್ಗೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಅಮ್ಮನ ಜೊತೆ ಕಳೆದ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು ಶ್ರೀದೇವಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: ಶ್ರೀದೇವಿಯ ಜೀವನ ಹಾಳಾಗಲು ಆಕೆಯ ತಾಯಿಯೇ ಕಾರಣ: ನಟಿ ಕುಟ್ಟಿ ಪದ್ಮಿನಿ
ಶ್ರೀದೇವಿ ನಿಧನರಾಗಿದ್ದು 2018 ಫೆಬ್ರವರಿ 24ರಂದು. ಅವರನ್ನು ಅಭಿಮಾನಿಗಳು ಇಂದಿಗೂ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಪುಣ್ಯತಿಥಿಯಂದು ಜಾನ್ವಿ ಕಪೂರ್ ಭಾವುಕ ಪೋಸ್ಟ್ ಹಾಕಿದ್ದರು. ‘ಈಗಲೂ ನಾನು ನಿಮಗಾಗಿ ಎಲ್ಲ ಕಡೆಗಳಲ್ಲಿ ಹುಡುಕುತ್ತೇನೆ ಅಮ್ಮ. ನಿಮಗೆ ಹೆಮ್ಮೆ ತರುವೆನೆಂಬ ಭರವಸೆಯಲ್ಲಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವೆ. ನಾನು ಎಲ್ಲಿಯೇ ಹೋದರೂ ಏನೇ ಮಾಡಿದರೂ ಅದು ನಿಮ್ಮಿಂದಲೇ ಶುರುವಾಗುತ್ತದೆ ಹಾಗೂ ನಿಮ್ಮಲ್ಲೇ ಮುಗಿಯುತ್ತದೆ’ ಎಂದು ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ