ಹೇಗಿದೆ ಸುದೀಪ್ ಬರ್ತ್​ಡೇ ಸೆಲೆಬ್ರೇಷನ್? ಅಭಿಮಾನಿಗಳಿಗೆ ಉಡಗೊರೆಯಾಗಿ ಸಿಕ್ತು ಸಾಂಗ್

|

Updated on: Sep 02, 2023 | 7:45 AM

ಅಭಿಮಾನಿಗಳನ್ನು ಕಂಡರೆ ಸುದೀಪ್​ಗೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳು ತೋರಿಸಿದಷ್ಟೇ ಪ್ರೀತಿಯನ್ನು ಸುದೀಪ್ ಕೂಡ ತೋರಿಸುತ್ತಾರೆ. ಸೆಪ್ಟೆಂಬರ್ 1ರ ಮಧ್ಯರಾತ್ರಿ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ಸುದೀಪ್ ಹುಟ್ಟುಹಬ್ಬ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.

ಹೇಗಿದೆ ಸುದೀಪ್ ಬರ್ತ್​ಡೇ ಸೆಲೆಬ್ರೇಷನ್? ಅಭಿಮಾನಿಗಳಿಗೆ ಉಡಗೊರೆಯಾಗಿ ಸಿಕ್ತು ಸಾಂಗ್
ಸುದೀಪ್
Follow us on

ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗೆ ಇಂದು (ಸೆಪ್ಟೆಂಬರ್ 2) ಹಬ್ಬ. ಇದಕ್ಕೆ ಕಾರಣ ಕಿಚ್ಚನ ಬರ್ತ್​ಡೇ. ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸುದೀಪ್​ಗೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಈ ವರ್ಷ ಅದ್ದೂರಿಯಾಗಿ ಬರ್ತ್​ಡೇ ಸೆಲೆಬ್ರೇಷನ್ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಪಿಕ್ಚರ್​ಗೆ ಸುದೀಪ್ (Sudeep) ಫೋಟೋ ಹಾಕಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಒಟ್ಟಾರೆ ಸುದೀಪ್ ಅವರ ಬರ್ತ್​ಡೇ ಆಚರಣೆ ಹೇಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ

ಅಭಿಮಾನಿಗಳನ್ನು ಕಂಡರೆ ಸುದೀಪ್​ಗೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳು ತೋರಿಸಿದಷ್ಟೇ ಪ್ರೀತಿಯನ್ನು ಸುದೀಪ್ ಕೂಡ ತೋರಿಸುತ್ತಾರೆ. ಸೆಪ್ಟೆಂಬರ್ 1ರ ಮಧ್ಯರಾತ್ರಿ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ಸುದೀಪ್ ಹುಟ್ಟುಹಬ್ಬ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಸುದೀಪ್ ಸಿನಿಮಾದ ವಿವಿಧ ಹಾಡುಗಳನ್ನು ಹಾಡಲಾಯಿತು. ಇದಕ್ಕೆ ಅಭಿಮಾನಿಗಳು ಧ್ವನಿಗೂಡಿಸಿದರು. ಮಧ್ಯರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾ ಘೋಷಣೆ

ಸುದೀಪ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಘೋಷಣೆ ಆಗುತ್ತಿವೆ. ‘ಕಿಚ್ಚ 46’ ಚಿತ್ರದ ಟೈಟಲ್ ಟೀಸರ್ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮ್ಯಾಕ್ಸ್’ ಎಂದು ಶೀರ್ಷಿಕೆ ಇಡಲಾಗಿದೆ. ಸುದೀಪ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಿಚ್ಚ ಅವರು ಆರ್. ಚಂದ್ರು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಭಾಗಿ ಆಗುತ್ತಿದ್ದಾರೆ. ಸುದೀಪ್ ನಿರ್ದೇಶನಕ್ಕೆ ಇಳಿದಿದ್ದು, ಕೆಆರ್​ಜಿ ಸ್ಟುಡಿಯೋಸ್ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: Kichcha 46: ‘ಕಿಚ್ಚ 46’ ಚಿತ್ರಕ್ಕೆ ‘ಮ್ಯಾಕ್ಸ್’ ಶೀರ್ಷಿಕೆ; ಮತ್ತೆ ಖಾಕಿ ತೊಟ್ಟ ಸುದೀಪ್?

ಹೊಸ ಸಾಂಗ್ ರಿಲೀಸ್

‘ಅಭಿನಯ ತಿಲಕ’ ಹೆಸರಿನ ಹೊಸ ಸಾಂಗ್ ಬಿಡುಗಡೆ ಆಗಿದೆ. ಅಭಿಮಾನಿಗಳು ಮಾಡಿದ ಈ ವಿಡಿಯೋ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಹಾಡಿಗೆ, ಶಶಾಂಕ್ ಶೇಷಗಿರಿ ಮ್ಯೂಸಿಕ್ ನೀಡಿದ್ದಾರೆ. ಕಿಚ್ಚ ಕಿರಣ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ