ಆ ಒಂದು ಮಾತಿಗೆ ಭಾವುಕರಾದ ಕಿಚ್ಚ; ಸುದೀಪ್ ಮನಸ್ಸಿಗೆ ಮುಟ್ಟಿದ್ದೇನು?

ಸುದೀಪ್ ಅವರು ವೀಕೆಂಡ್ ಎಪಿಸೋಡ್​ಗೆ ಟ್ವಿಸ್ಟ್ ಕೊಟ್ಟರು. ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಹೇಳಿದರು. ಸುದೀಪ್ ಮಾತು ಕೇಳಿ ಇಬ್ಬರೂ ಗಳಗಳನೆ ಅತ್ತರು.

ಆ ಒಂದು ಮಾತಿಗೆ ಭಾವುಕರಾದ ಕಿಚ್ಚ; ಸುದೀಪ್ ಮನಸ್ಸಿಗೆ ಮುಟ್ಟಿದ್ದೇನು?
ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸುದೀಪ್

Updated on: Jan 15, 2024 | 7:27 AM

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ನೀಡಲಾಯಿತು. ಯಾರೂ ಎಲಿಮಿನೇಷನ್ ಆಗುವುದಿಲ್ಲ ಎಂದು ಸುದೀಪ್ ಘೋಷಿಸಿದರು. ಇದರಿಂದ ಡೇಂಜರ್​ಜೋನ್​ನಲ್ಲಿ ಇದ್ದ ವರ್ತೂರು ಸಂತೋಷ್ (Varthur Santosh) ಹಾಗೂ ತುಕಾಲಿ ಸಂತೋಷ್ ಅವರು ಖುಷಿಪಟ್ಟರು. ಅಲ್ಲದೆ, ಇಬ್ಬರೂ ಭಾವುಕರಾಗಿ ಮಾತನಾಡಿದರು. ಇದು ಸುದೀಪ್ ಅವರ ಮನಸ್ಸಿಗೆ ಮುಟ್ಟಿದೆ. ಅವರು ಕೂಡ ಭಾವುಕರಾದಂತೆ ಕಂಡು ಬಂತು. ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಗೆಳೆತನ ನೋಡಿ ವೀಕ್ಷಕರು ಕೂಡ ಭಾವುಕರಾದರು.

ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಶುಕ್ರವಾರದ (ಜನವರಿ 12) ಎಪಿಸೋಡ್​​ನಲ್ಲಿ ಒಟ್ಟಿಗೆ ಕುಳಿತು ಮಾತನಾಡುವಾಗ ಗಳಗಳನೆ ಅತ್ತಿದ್ದರು. ಇಬ್ಬರಲ್ಲಿ ಒಬ್ಬರು ಹೋಗುತ್ತೇವೆ ಅನ್ನೋದು ಅವರಿಗೆ ಖಚಿತವಾಗಿತ್ತು. ಆದರೆ, ಹಾಗಾಗಿಲ್ಲ. ಸುದೀಪ್ ಅವರು ವೀಕೆಂಡ್ ಎಪಿಸೋಡ್​ಗೆ ಟ್ವಿಸ್ಟ್ ಕೊಟ್ಟರು. ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಹೇಳಿದರು. ಸುದೀಪ್ ಮಾತು ಕೇಳಿ ಇಬ್ಬರೂ ಗಳಗಳನೆ ಅತ್ತರು.

‘ನಿಮಗೆ ಕೋಟಿ ಕೋಟಿ ಧನ್ಯವಾದ. ಕಳೆದುಕೊಂಡು ಬಿಡ್ತೀನಿ ಎನ್ನುವ ಭಯ ಕಾಡುತ್ತಿತ್ತು. ನಿಮ್ಮಿಬ್ಬರಲಿ ಯಾರು ಎದ್ದು ಹೋಗ್ತೀರಾ ಎಂದು ಕೇಳಿದ್ರೆ ನಾನು ಎದ್ದು ಹೋಗುತ್ತಿದೆ. ಇವರನ್ನು ಕಳಿಸಿ ಇಲ್ಲಿ ಇರೋಕೆ ಆಗುತ್ತಿರಲಿಲ್ಲ. ಇದ್ದಷ್ಟು ದಿನ ಎಲ್ಲರನ್ನೂ ರಂಜಿಸುತ್ತೇವೆ’ ಎಂದು ತುಕಾಲಿ ಸಂತೋಷ್ ಶಪಥ ಮಾಡಿದರು. ಈ ಭಾವುಕ ಕ್ಷಣವನ್ನು ಎಲ್ಲರೂ ಕಣ್ತುಂಬಿಕೊಂಡರು. ಇದನ್ನು ನೋಡುತ್ತಿದ್ದ ಸುದೀಪ್ ಅವರು ಭಾವುಕರಾದರು.

ಇದನ್ನೂ ಓದಿ: ವೀಕೆಂಡ್​ನಲ್ಲಿ ಎಲಿಮಿನೇಷನ್ ಏಕೆ ನಡೆದಿಲ್ಲ? ಸುದೀಪ್ ಕೊಟ್ಟರು ಉತ್ತರ

ಫಿನಾಲೆ ಸಮೀಪಿಸುತ್ತಿದೆ. ಸಂಗೀತಾಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ಉಳಿದ ನಾಲ್ಕು ಸ್ಥಾನಕ್ಕೆ ಎಳು ಮಂದಿ ಸ್ಪರ್ಧೆ ನೀಡುತ್ತಿದ್ದಾರೆ. ಯಾರು ಹೊರ ಹೋಗುತ್ತಾರೆ, ಯಾರು ಉಳಿದುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ