ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವಿಶ್ವ ಮತ್ತು ಮಂಜು ವೈಲ್ಡ್​ ಕಾರ್ಡ್​ ಎಂಟ್ರಿ ಬಗ್ಗೆ ಮಾತನಾಡಿದ್ದರು. ನಾವು ಹಾಯಾಗಿದ್ದೆವು. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಬೇಡವಾಗಿತ್ತು ಎಂದಿದ್ದರು.

ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ
ಕಿಚ್ಚ ಸುದೀಪ್​
Edited By:

Updated on: Apr 04, 2021 | 7:07 AM

ಬಿಗ್​ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಅವರ ಎಂಟ್ರಿ ಆಗಿದೆ. ಅವರು ಮನೆಗೆ ಬಂದಿದ್ದನ್ನು ನೋಡಿದ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ಅವರು ಬರಲೇಬಾರದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದ ಬಗ್ಗೆ ಸುದೀಪ್​ ಚರ್ಚೆ ಮಾಡಿದ್ದಾರೆ. ಅಷ್ಟೇ ಅಲ್ಲ, ವೈಲ್ಡ್​ ಕಾರ್ಡ್​ ಎಂಟ್ರಿ ಇದು ಆರಂಭವಷ್ಟೇ ಎನ್ನುವ ಸೂಚನೆ ನೀಡಿದ್ದಾರೆ.

ಹಾಯಾಗಿದ್ದ 13 ಸ್ಪರ್ಧಿಗಳ ನಡುವೆ ಮತ್ತೋರ್ವನ ಎಂಟ್ರಿ ಆಗಿರುವುದು ಬಿಗ್​ ಬಾಸ್​ ಸ್ಪರ್ಧಿಗಳಿಗೆ ಬೇಸರ ಇದೆ. ಚಕ್ರವರ್ತಿ ಚಂದ್ರಚೂಡ ಬಿಗ್​ ಬಾಸ್​ ಮನೆ ಪ್ರವೇಶಿಸಿದ ಕೂಡಲೇ ಎಲ್ಲರ ಗಮನವನ್ನೂ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲ, ಎಲ್ಲರ ಹಿಡಿತ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ, ವೈಲ್ಡ್​ ಕಾರ್ಡ್​ ಎಂಟ್ರಿಯೇ ಬೇಡವಾಗಿತ್ತು ಎನ್ನುವ ಚರ್ಚೆ ನಡೆತ್ತು.

ವಿಶ್ವ ಮತ್ತು ಮಂಜು ವೈಲ್ಡ್​ ಕಾರ್ಡ್​ ಎಂಟ್ರಿ ಬಗ್ಗೆ ಮಾತನಾಡಿದ್ದರು. ನಾವು ಹಾಯಾಗಿದ್ದೆವು. ಈಗ ವೈಲ್ಡ್​ ಕಾರ್ಡ್​ ಎಂಟ್ರಿ ಬೇಡವಾಗಿತ್ತು. ಚಕ್ರವರ್ತಿ ಎಂದಲ್ಲ, ಯಾರೂ ಮನೆಗೆ ಬರಬಾರದಿತ್ತು. ಇಷ್ಟು ದಿನ ನಾವು ಹಾಯಾಗಿದ್ದೆವು ಎಂದು ಹೇಳಿದ್ದರು.

ಈ ಬಗ್ಗೆ ಸುದೀಪ್​ ಮಾತನಾಡಿದ್ದು, ಏಕೆ ವೈಲ್ಡ್​ ಕಾರ್ಡ್​ ಎಂಟ್ರಿ ಇಷ್ಟವಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪರ್ಧಿಗಳು ಆಯಾ ಕಾರಣ ನೀಡಿದ್ದಾರೆ. ಆಗ ಸುದೀಪ್​, ಬಿಗ್​ ಬಾಸ್​ ಇದು ಆರಂಭ ಮಾತ್ರ ಎಂದಿದ್ದಾರೆ. ಈ ಮೂಲಕ ಅನೇಕರು ಬಿಗ್​ ಬಾಸ್​ ಮನೆಗೆ ಪ್ರವೇಶಿಸುತ್ತಾರೆ ಎನ್ನುವ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

ರಘುಗೆ ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡ್ಕೊಂಡಿದ್ದಾನೆ; ನೊಂದ ಮನಸ್ಸಿಗೆ ಮತ್ತೊಂದಷ್ಟು ಘಾಸಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us