ರಘುಗೆ ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡ್ಕೊಂಡಿದ್ದಾನೆ; ನೊಂದ ಮನಸ್ಸಿಗೆ ಮತ್ತೊಂದಷ್ಟು ಘಾಸಿ

ರಘು ಗೌಡ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ತಾಯಿ ಜತೆಯೇ ವಾಸವಾಗಿದ್ದರು. ಆದರೆ, ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಘುಗೆ ನೋವನ್ನೇ ಮಾರ್ಕೆಟಿಂಗ್ ತಂತ್ರ ಮಾಡ್ಕೊಂಡಿದ್ದಾನೆ; ನೊಂದ ಮನಸ್ಸಿಗೆ ಮತ್ತೊಂದಷ್ಟು ಘಾಸಿ
ರಘು ಗೌಡ - ಬಿಗ್​ ಬಾಸ್
Follow us
ರಾಜೇಶ್ ದುಗ್ಗುಮನೆ
| Updated By: ganapathi bhat

Updated on:Apr 03, 2021 | 9:37 PM

ಬಿಗ್​ ಬಾಸ್​ ಮನೆ ಸೇರಿರುವ ರಘು ಗೌಡ ಅವರು ತಮ್ಮ ಜೀವನದಲ್ಲಿ ತುಂಬಾನೇ ನೊಂದಿದ್ದಾರೆ. ಇದನ್ನು ಬಿಗ್​ ಬಾಸ್​ ಮನೆಯಲ್ಲಿ ಅನೇಕರ ಬಾರಿ ಹೇಳಿಕೊಂಡಿದ್ದಾರೆ. ಇದು ಮಾರ್ಕೆಟಿಂಗ್​ ತಂತ್ರ ಎಂದು ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಅಭಿಪ್ರಾಯಪಟ್ಟಿದ್ದಾರೆ. ರಘು ಗೌಡ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ತಾಯಿ ಜತೆಯೇ ವಾಸವಾಗಿದ್ದರು. ಆದರೆ, ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಅವರಿಗೆ ಆಘಾತ ತಂದಿತ್ತು. ಆರಂಭದಲ್ಲಿ ಈ ವಿಚಾರದ ಬಗ್ಗೆ ರಘು ಹೇಳಿ ಅತ್ತುಕೊಂಡಿದ್ದಾರೆ. ಶುಕ್ರವಾರ (ಮಾರ್ಚ್​ 3) ವೈಷ್ಣವಿಯಲ್ಲಿ ರಘು ತಾಯಿಯನ್ನು ಕಂಡಿದ್ದರು. ಅಷ್ಟೇ ಅಲ್ಲ, ಕೆಲವೇ ಹೊತ್ತಿನಲ್ಲಿ ಗಳಗಳನೆ ಅತ್ತಿದ್ದರು. ಇದೊಂದು ಮಾರ್ಕೆಟಿಂಗ್​ ತಂತ್ರ ಎನ್ನುವ ಮಾತು ಕೇಳಿ ಬಂದಿದೆ.

ಪ್ರಶಾಂತ್ ಹಾಗೂ ಚಂದ್ರಚೂಡ್​ ತಮ್ಮ ತಂಡಕ್ಕೆ ಕೆಲ ಸದಸ್ಯರನ್ನು ಸೇರಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾರ ಯಾವ ಟೀಂ ಎನ್ನುವ ಬಗ್ಗೆ ಚಂದ್ರಚೂಡ್​ಗೆ ಪ್ರಶಾಂತ್ ಲೆಕ್ಕಾಚಾರ ಒಪ್ಪಿಸಿದ್ದಾರೆ. ಆಗ ರಘು ಬಗ್ಗೆ ಚಂದ್ರಚೂಡ್​ ಮಾತನಾಡಿದ್ದಾರೆ.

ರಘು ಒಳ್ಳೆಯ ವ್ಯಕ್ತಿ. ಆದರೆ, ಅವರು ತಮ್ಮ ನೋವು ಹಾಗೂ ದುಃಖವನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. ತಮ್ಮ ನೋವನ್ನು ಮಾರ್ಕೆಟಿಂಗ್​ ತಂತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಹೊರ ಬರಬೇಕಿದೆ ಎಂದು ಚಂದ್ರಚೂಡ್​ ಅಭಿಪ್ರಾಯಪಟ್ಟರು. ಅದೇನೆ ಇರಲಿ, ಆತ ನನ್ನ ಪಾಲಿಗೆ ಒಳ್ಳೆಯ ಹುಡುಗ. ಅವನಿಗೆ ನಮ್ಮ ಟೀಂಗೆ ಬರಬೇಕೆಂದಿದೆ. ಆದರೆ, ಒಮ್ಮೊಮ್ಮೆ ಅವರು ತಮ್ಮ ನಿರ್ಧಾರ ಬದಲಿಸುತ್ತಾರೆ. ಆದರೆ, ಆತ ಎಲ್ಲವನ್ನೂ ನೇರ ನೇರ ಹೇಳ್ತಾರೆ ಎಂದರು.

ಇದನ್ನೂ ಓದಿ: ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

Published On - 9:36 pm, Sat, 3 April 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್