AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!

ಎರಡು ವಾರಗಳ ಹಿಂದೆ ನಡೆದ ಜೋಡಿ ಟಾಸ್ಕ್​ನಲ್ಲಿ ರಘು ಗೌಡ-ವೈಷ್ಣವಿ ಒಟ್ಟಾಗಿದ್ದರು. ಆಗ ರಘು ಮತ್ತು ವೈಷ್ಣವಿ ನಡುವೆ ಒಂದು ಆಪ್ತತೆ ಬೆಳೆದಿತ್ತು.

ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!
ರಘು ಗೌಡ-ವೈಷ್ಣವಿ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Apr 02, 2021 | 5:59 PM

ಬಿಗ್​ ಬಾಸ್​ ಮನೆ ಸೇರಿರುವ ರಘು ಗೌಡ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ತಾಯಿ ಜತೆಯೇ ವಾಸವಾಗಿದ್ದರು. ಆದರೆ, ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಅವರಿಗೆ ಆಘಾತ ತಂದಿತ್ತು. ಈಗ ಬಿಗ್​ ಬಾಸ್​ ಮನೆಯಲ್ಲಿರುವ ವೈಷ್ಣವಿ ಗೌಡ ಅವರಲ್ಲಿ ರಘು ತಾಯಿಯನ್ನು ಕಾಣುತ್ತಿದ್ದಾರೆ! ಈ ವಿಚಾರವನ್ನು ಸ್ವತಃ ರಘು ಅವರೇ ಹೇಳಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ನಡೆದ ಜೋಡಿ ಟಾಸ್ಕ್​ನಲ್ಲಿ ರಘು ಗೌಡ-ವೈಷ್ಣವಿ ಒಟ್ಟಾಗಿದ್ದರು. ಆಗ ರಘು ಮತ್ತು ವೈಷ್ಣವಿ ನಡುವೆ ಒಂದು ಆಪ್ತತೆ ಬೆಳೆದಿತ್ತು. ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಒಟ್ಟಾಗಿರುತ್ತಿದ್ದರು. ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದರು.

ವೈಷ್ಣವಿ ಮನೆಗೆ ಬಂದಾಗಿನಿಂದಲೂ ಅವರ ವಿರುದ್ಧ ಇರೋದು ಒಂದೇ ರೀತಿಯ ದೂರು. ವೈಷ್ಣವಿ ಯಾರ ಜತೆಯೂ ಸರಿಯಾಗಿ ಮಾತನಾಡುವುದಿಲ್ಲ ಎಂದು. ಆದರೆ, ಅಚ್ಚರಿ ಎಂಬಂತೆ, ರಘು ಜತೆ ಎಲ್ಲವನ್ನೂ ಅವರು ಹಂಚಿಕೊಳ್ಳುತ್ತಿದ್ದರು. ಈಗ ರಘು, ತಮ್ಮ ತಾಯಿಗೆ ಹೇಳಬೇಕು ಎಂದಿದ್ದನ್ನು ವೈಷ್ಣವಿ ಅವರ ಬಳಿ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೊದಲ್ಲಿ ಚಂದ್ರಚೂಡ ಅವರು, ರಘು-ವೈಷ್ಣವಿ ಬಳಿ ಮಾತನಾಡಿದ್ದಾರೆ. ವೈಷ್ಣವಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ನಿಮ್ಮ ತಾಯಿ ಕಂಡರೆ ಅವರ ಬಳಿ ಏನು ಹೇಳಬೆಕು ಎಂದುಕೊಂಡಿದ್ದೀರೋ ಅದನ್ನು ವೈಷ್ಣವಿ ಬಳಿಯೇ ಹೇಳಿಕೊಳ್ಳಿ ಎಂದು ಚಂದ್ರಚೂಡಗೆ ಸೂಚಿಸಿದ್ದಾರೆ.

ವೈಷ್ಣವಿ ಕಣ್ಣಲ್ಲಿ ಕಣ್ಣಿಡುತ್ತಿದ್ದಂತೆ ರಘುಗೆ ತಾಯಿ ಕಾಣಿಸಿದಂತಿದೆ. ಅಷ್ಟೇ ಅಲ್ಲ, ಕೆಲವೇ ಹೊತ್ತಿನಲ್ಲಿ ಗಳಗಳನೆ ಅತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ (ಮಾರ್ಚ್​ 2) ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗುತ್ತಿರುವುದು ವೈಲ್ಡ್​ ಕಾರ್ಡ್​ ಎಂಟ್ರಿ.  ಪ್ರಶಾಂತ್​ ಸಂಬರಗಿ ಆಪ್ತ ಚಕ್ರವರ್ತಿ ಚಂದ್ರಚೂಡ ಮನೆಗೆ ಬಂದಿದ್ದಾರೆ. ಬಂದ ದಿನವೇ ಮನೆಯಲ್ಲಿ ತುಂಬಾನೇ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತುಂಬಾನೇ ಚರ್ಚೆಗೂ ಕಾರಣವಾಗಿದ್ದಾರೆ.

ಇದನ್ನೂ ಓದಿ: ನಿನ್ನ ಮೇಲಿದ್ದ ಗೌರವ ಡಬಲ್​ ಆಗೋಯ್ತು; ವೈಷ್ಣವಿ ಹೊಗಳೋಕೆ ಮಂಜುಗೆ ಪದಗಳು ಸಿಗ್ತಾ ಇಲ್ಲ

Published On - 5:38 pm, Fri, 2 April 21

ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು