AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಮೇಲಿದ್ದ ಗೌರವ ಡಬಲ್​ ಆಗೋಯ್ತು; ವೈಷ್ಣವಿ ಹೊಗಳೋಕೆ ಮಂಜುಗೆ ಪದಗಳು ಸಿಗ್ತಾ ಇಲ್ಲ

ವೈಷ್ಣವಿ ತಾಳ್ಮೆ ನೋಡಿ ಮಂಜು ತುಂಬಾನೇ ಖುಷಿಯಾಗಿದ್ದಾರೆ. ನಿಮ್ಮ ಬಳಿ ಇದು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ, ನೀವು ಆಡಿದ್ದು ನೋಡಿ ತುಂಬಾನೇ ಖುಷಿ ಆಯಿತು ಎಂದು ಹೊಗಳಿದ್ದಾರೆ.

ನಿನ್ನ ಮೇಲಿದ್ದ ಗೌರವ ಡಬಲ್​ ಆಗೋಯ್ತು; ವೈಷ್ಣವಿ ಹೊಗಳೋಕೆ ಮಂಜುಗೆ ಪದಗಳು ಸಿಗ್ತಾ ಇಲ್ಲ
ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
|

Updated on: Apr 01, 2021 | 11:06 PM

Share

ಬಿಗ್​ ಬಾಸ್​ ಮನೆ ಸೇರಿರುವ ವೈಷ್ಣವಿ ಮೇಲೆ ಮನೆಯವರು ತುಂಬಾನೇ ಗೌರವ ಇಟ್ಟುಕೊಂಡಿದ್ದಾರೆ. ಅವರು ಸೈಲೆಂಟ್​ ಆಗಿರೋದು, ಅವರ ತಾಳ್ಮೆ ಎಲ್ಲರಿಗೂ ಇಷ್ಟವಾಗುತ್ತಿದೆ. ಹೀಗಿರುವಾಗಲೇ ಮಂಜು ಪಾವಗಡಗೆ ವೈಷ್ಣವಿ ಮೇಲೆ ಇರುವ ಗೌರವ ದುಪಟ್ಟು ಆಗಿದೆ. ಇದನ್ನು ಹೇಳೋಕೆ ಅವರಿಗೆ ಹೇಳೋಕೆ ಶಬ್ದವೇ ಸಾಗುತ್ತಿಲ್ಲ. ಇದೆಲ್ಲಾ ಆಗೋಕೆ ಮನೆಯಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ. ಮಾರ್ಚ್​ 31ರ ಸಂಚಿಕೆಯಲ್ಲಿ ಬಿಗ್ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಈ ಟಾಸ್ಕ್​ನ ಅನುಸಾರ ಸ್ವಿಮಿಂಗ್​ ಫೂಲ್​ ಮಧ್ಯೆ ಇರುವ ಕಟ್ಟೆಗಳ ಮೇಲೆ ಎರಡೂ ತಂಡದ ತಲಾ ಒಬ್ಬ ಸದಸ್ಯರು ಕೂರಬೇಕು. ಅಂತೆಯೇ ವೈಷ್ಣವಿ ಹಾಗೂ ದಿವ್ಯಾ ಸುರೇಶ್​ ಇಬ್ಬರೂ ಅಲ್ಲಿ ಕುಳಿತಿದ್ದರು.

ಹಲವು ಗಂಟೆಗಳ ಕಾಲ ವೈಷ್ಣವಿ-ದಿವ್ಯಾ ಸ್ವಿಮಿಂಗ್​ ಫೂಲ್​ ಮಧ್ಯೆ ಇರುವ ಎರಡು ಕಟ್ಟೆಗಳ ಮೇಲೆ ಕುಳಿತಿದ್ದರು. ಎರಡೂ ತಂಡದವರು ಪರಸ್ಪರ ಇವರನ್ನು ಬೀಳಿಸಲು ಪ್ರಯತ್ನ ಮಾಡುತ್ತಲೇಇದ್ದರು. ಕೊನೆಗೂ ಅಶ್ವತ್ಥ್​ ಅವರು ವೈಷ್ಣವಿ ಅವರನ್ನು ದೂಡಿ ಬಿಟ್ಟರು. ನಿಯಮದ ಪ್ರಕಾರ ಹೀಗೆ ಮಾಡುವ ಹಾಗೇ ಇರಲಿಲ್ಲ. ಇದು ಫಾಲ್​ ಎಂದು ಘೋಷಣೆ ಆದ ನಂತರ ವೈಷ್ಣವಿ ವಿನ್​ ಎಂದು ಘೋಷಣೆ ಮಾಡಲಾಯಿತು.

ವೈಷ್ಣವಿ ತಾಳ್ಮೆ ನೋಡಿ ಮಂಜು ತುಂಬಾನೇ ಖುಷಿಯಾಗಿದ್ದಾರೆ. ನಿಮ್ಮ ಬಳಿ ಇದು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ, ನೀವು ಆಡಿದ್ದು ನೋಡಿ ತುಂಬಾನೇ ಖುಷಿ ಆಯಿತು. ನಿನ್ನ ಮೇಲಿದ್ದ ಗೌರವ ಡಬಲ್​ ಆಯ್ತು ಎಂದು ಹೊಗಳಿದ್ದಾರೆ. ನಂತರ ಮಂಜು ಅವರಿಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಿಲ್ಲ. ಹೀಗಾಗಿ, ವೈಷ್ಣವಿ ಅವರನ್ನು ತಬ್ಬಿಕೊಂಡು ಮಂಜು ಅವರ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ