ಪ್ರಶಾಂತ್​ ಸಂಬರಗಿ ಎದುರು ತಪ್ಪು ಒಪ್ಪಿಕೊಂಡ ನಿಧಿ; ದ್ವೇಷ ಕಳೆದುಕೊಂಡು ಒಂದಾದರು!

ಈಗ ನಿಧಿ-ಪ್ರಶಾಂತ್​ ಒಂದಾಗಿದ್ದಾರೆ. ನಿಧಿ ತಮ್ಮ ಕಷ್ಟವನ್ನೆಲ್ಲ ಹೇಳಿಕೊಂಡಿದ್ದಾರೆ. ಟಾಸ್ಕ್​ ವೇಳೆ ಮಾತನಾಡುವಾಗ ಎಲ್ಲರೂ ರೇಗಾಡುತ್ತಿದ್ದರು.

ಪ್ರಶಾಂತ್​ ಸಂಬರಗಿ ಎದುರು ತಪ್ಪು ಒಪ್ಪಿಕೊಂಡ ನಿಧಿ; ದ್ವೇಷ ಕಳೆದುಕೊಂಡು ಒಂದಾದರು!
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on: Apr 02, 2021 | 6:57 AM

ಬಿಗ್​ ಬಾಸ್​ ಮನೆಯಲ್ಲಿ ನಿಧಿ ಸುಬ್ಬಯ ಮತ್ತು ಪ್ರಶಾಂತ್​ ಸಂಬರಗಿ ಹಾವು ಮುಂಗುಸಿ ರೀತಿ ಇದ್ದರು. ಪ್ರಶಾಂತ್​ ಅವರನ್ನು ಕಂಡರೆ ಸದಾ ಉರಿದು ಬೀಳುತ್ತಿದ್ದರು ನಿಧಿ. ಪ್ರಶಾಂತ್​ ಸರಿ ಇಲ್ಲ. ಅವರು ಹಾಗೆ ಮಾಡ್ತಾರೆ, ಹೀಗೆ ಮಾಡ್ತಾರೆ ಎಂದು ಆರೋಪಿಸುತ್ತಿದ್ದರು. ಆದರೆ, ಈಗ ಎಲ್ಲವನ್ನೂ ಮರೆತು ಇಬ್ಬರೂ ಒಂದಾಗಿದ್ದಾರೆ. ಅಲ್ಲದೆ, ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾಲ್ಕನೇ ವಾರದ ಟಾಸ್ಕ್​ ವೇಳೆ ನಿಧಿ ಸುಬ್ಬಯ್ಯ ಹಾಗೂ ಪ್ರಶಾಂತ್​ ನಡುವೆ ಕಿತ್ತಾಟ ನಡೆದಿತ್ತು. ಎಲ್ಲರೂ ತಮ್ಮನ್ನು ದಡ್ಡನಂತೆ ನೋಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಅಂತ ನಿಧಿ ಎಂದುಕೊಂಡರು. ಅಷ್ಟೇ ಅಲ್ಲ, ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಹೇಳುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡು ಒಮ್ಮೆಲೇ ಸಿಟ್ಟಾದರು. ನಾನು ದಡ್ಡಿಯಲ್ಲ. ಅಧಿಕಪ್ರಸಂಗ ಮಾಡುವುದು ನಂಗೆ ಇಷ್ಟ ಆಗುವುದೇ ಇಲ್ಲ. ಇಷ್ಟು ಸಣ್ಣ ಸಣ್ಣ ವಿಚಾರ ಹೇಳಿ ನಂಗೆ ಇರಿಟೇಟ್​ ಮಾಡಬೇಡಿ ಎಂದು ಬುದ್ಧಿ ಹೇಳಿದ್ರು.

ಆದರೆ, ಈಗ ಇಬ್ಬರೂ ಒಂದಾಗಿದ್ದಾರೆ. ನಿಧಿ ತಮ್ಮ ಕಷ್ಟವನ್ನೆಲ್ಲ ಹೇಳಿಕೊಂಡಿದ್ದಾರೆ. ಟಾಸ್ಕ್​ ವೇಳೆ ಮಾತನಾಡುವಾಗ ಎಲ್ಲರೂ ರೇಗಾಡುತ್ತಿದ್ದರು. ಆಗ ನಾವು ಅವರ ಮಾತಿಗೆ ತಿರುಗಿ ಹೇಳಬಾರದು. ಹಾಗೆ ಮಾಡಿದರೆ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ ಎಂದರು. ಈ ವೇಳೆ ಪ್ರಶಾಂತ್​ ಕೂಡ ನಿಧಿಗೆ ಒಂದಷ್ಟು ಟಿಪ್ಸ್​ ನೀಡಿದರು. ಇದನ್ನು ನಿಧಿ ಸ್ವೀಕಾರ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಇಂದು ಗೆಳೆಯರಾಗಿದ್ದವರು ನಾಳೆ ದ್ವೇಷಿಗಳಾಗುತ್ತಾರೆ. ಇಂದು ದ್ವೇಷಿಗಳಾಗಿದ್ದವರು ನಾಳೆ ಒಂದಾಗಿ ಬಿಡುತ್ತಾರೆ. ಇದಕ್ಕೆ ಇಂದು ನಡೆದ ಈ ಘಟನೆ ಹೊಸ ಸಾಕ್ಷಿ. ಮುಂದಿನ ದಿನಗಳಲ್ಲಿ ಇವರ ಗೆಳೆತನ ಹೇಗೆ ಸಾಗಲಿದೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಸೆಳೆತದಲ್ಲಿ ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶವನ್ನೇ ಮರೆತರಾ ಅರವಿಂದ್?