AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಘು ಗೌಡಗೆ ಎಫ್​ ಶಬ್ದದ ಮೂಲಕ ಬೈದ ನಿಧಿ ಸುಬ್ಬಯ್ಯ!

ಆಗ ರಘು ಮಧ್ಯದಲ್ಲಿ ಮಾತನಾಡೋಕೆ ಪ್ರಯತ್ನಿಸಿದ್ದಾರೆ. ಇದು ನಿಧಿಗೆ ಇಷ್ಟವಾಗಿಲ್ಲ. ಎಕ್ಸ್​ಕ್ಯೂಸ್​ಮಿ, ನಾನು ಹೇಳಿ ಮುಗಿಸಿಕೊಳ್ಳುತ್ತೇನೆ ಎಂದು ದೊಡ್ಡ ಧ್ವನಿಯಲ್ಲೇ ನಿಧಿ ಹೇಳಿದರು.

ರಘು ಗೌಡಗೆ ಎಫ್​ ಶಬ್ದದ ಮೂಲಕ ಬೈದ ನಿಧಿ ಸುಬ್ಬಯ್ಯ!
ರಘು ಗೌಡ-ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
|

Updated on:Apr 03, 2021 | 6:41 PM

Share

 ಬಿಗ್​ ಬಾಸ್​ ಮನೆಯಲ್ಲಿರುವ ನಿಧಿ ಸುಬ್ಬಯ್ಯ ಅವರು ರಘು ಗೌಡ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ನಿಧಿ ಎಲ್ಲರ ಜತೆಯೂ ಓಪನ್​ಅಪ್​ ಆಗಿಲ್ಲ. ಆದರೆ, ರಘು ಗೌಡ ಎಂದರೆ ಅವರಿಗೆ ಹೆಚ್ಚು ಇಷ್ಟ. ಇದೇ ಕಾರಣಕ್ಕೆ ಏನೇ ಕಷ್ಟ ಸುಖ ಇದ್ದರೂ ರಘು ಬಳಿ ಹಂಚಿಕೊಳ್ಳುತ್ತಾರೆ. ಆದರೆ, ಈಗ ಇಬ್ಬರ ನಡುವೆ ವೈಮನಸ್ಸು ಮೂಡುವ ಲಕ್ಷಣ ಗೋಚರವಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​, ಚಕ್ರವರ್ತಿ ಚಂದ್ರಚೂಡ್, ನಿಧಿ ಸುಬ್ಬಯ್ಯ ಹಾಗೂ ಮಂಜು ಕೂತು ಮಾತನಾಡುತ್ತಿದ್ದರು. ಈ ವೇಳೆ ನಿಧಿ, ಟಾಸ್ಕ್​ ಚೆನ್ನಾಗಿ ಮಾಡಿಲ್ಲ ಎಂದರೆ ಎಲ್ಲರೂ ನಮಗೆ ಕಳಪೆ ಎನ್ನುವ ಪಟ್ಟ ಕಟ್ಟುತ್ತಾರೆ. ಉಳಿದ ಯಾವ ವಿಚಾರವನ್ನೂ ಗಮನಿಸುವುದೇ ಇಲ್ಲ ಎಂದು ಬೇಸರ ಹೊರ ಹಾಕಿದರು.

ಆಗ ರಘು ಮಧ್ಯದಲ್ಲಿ ಮಾತನಾಡೋಕೆ ಪ್ರಯತ್ನಿಸಿದ್ದಾರೆ. ಇದು ನಿಧಿಗೆ ಇಷ್ಟವಾಗಿಲ್ಲ. ಎಕ್ಸ್​ಕ್ಯೂಸ್​ಮಿ, ನಾನು ಹೇಳಿ ಮುಗಿಸಿಕೊಳ್ಳುತ್ತೇನೆ ಎಂದು ದೊಡ್ಡ ಧ್ವನಿಯಲ್ಲೇ ನಿಧಿ ಹೇಳಿದರು. ಇದಕ್ಕೆ ರಘು ಸಿಟ್ಟಾಗಿದ್ದಾರೆ. ನೀವು ಮೆಲ್ಲಗೆ ಹೇಳಿದ್ರೆ ನಂಗೆ ಅರ್ಥವಾಗುತ್ತೆ. ದೊಡ್ಡ ಧ್ವನಿ ಮಾಡಿ ಹೇಳುವ ಅಗತ್ಯವೇನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ನಿಧಿ, ನಾನು ನಿಮಗೆ ಬಯ್ಯುತ್ತಿಲ್ಲ ಅಥವಾ ನಿಮ್ಮನ್ನು ಟೀಕೆ ಮಾಡುತ್ತಿಲ್ಲ. ಇದ್ದ ವಿಚಾರವನ್ನು ಹೇಳುತ್ತಿದ್ದೇನೆ ಎಂದರು. ಆಗ ರಘು, ಹೌದು ಎಂದು ಕೊಂಕಾಗಿ ಉತ್ತರಿಸಿದರು. ಆಗ ನಿಧಿ What the F*** Dude ಎಂದು ಪ್ರಶ್ನೆ ಮಾಡಿದ್ದಾರೆ.

ನಂತರ ಮಾತಿಗೆ ಮಾತು ಬೆಳೆದಿದೆ. ನಿಧಿ ಕೊನೆಗೆ ಬೇಸರ ಮಾಡಿಕೊಂಡು ಅತ್ತೇ ಬಿಟ್ಟಿದ್ದಾರೆ. ಆಗ ನಿಧಿ ಅವರನ್ನು ರಘು ಸಮಾಧಾನ ಮಾಡೋಕೆ ಹೋಗಿದ್ದಾರೆ. ಕೊನೆಗೂ ನಿಧಿ ಅಳುತ್ತಲೇ ತಾವು ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನು ಹೇಳಿ ಮುಗಿಸಿದ್ದಾರೆ.

ಇದನ್ನೂ ಓದಿ: ಗೆಳೆಯ ಎನ್ನುತ್ತಲೇ ಚಂದ್ರಚೂಡ್​ಗೆ ನಂಬಿಕೆ ದ್ರೋಹ ಬಗೆದ ಸಂಬರಗಿ; ಇಲ್ಲಿದೆ ವಿಡಿಯೋ ಸಾಕ್ಷಿ

Published On - 6:37 pm, Sat, 3 April 21

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ