ಗೆಳೆಯ ಎನ್ನುತ್ತಲೇ ಚಂದ್ರಚೂಡ್​ಗೆ ನಂಬಿಕೆ ದ್ರೋಹ ಬಗೆದ ಸಂಬರಗಿ; ಇಲ್ಲಿದೆ ವಿಡಿಯೋ ಸಾಕ್ಷಿ

ಚಕ್ರವರ್ತಿ ಚಂದ್ರಚೂಡ್​ ನನ್ನ ಆಪ್ತ ಗೆಳೆಯ. ನಮ್ಮಿಬ್ಬರಿಗೂ ಪರಸ್ಪರ ಪರಿಚಯ ಇದೆ ಎಂದು ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಮನೆಯಲ್ಲಿ ಇಬ್ಬರೂ ಒಟ್ಟಿಗೆ ಇರುತ್ತಿದ್ದರು.

ಗೆಳೆಯ ಎನ್ನುತ್ತಲೇ ಚಂದ್ರಚೂಡ್​ಗೆ ನಂಬಿಕೆ ದ್ರೋಹ ಬಗೆದ ಸಂಬರಗಿ; ಇಲ್ಲಿದೆ ವಿಡಿಯೋ ಸಾಕ್ಷಿ
ಚಕ್ರವರ್ತಿ ಚಂದ್ರಚೂಡ್​-ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ganapathi bhat

Updated on: Apr 03, 2021 | 6:05 PM

ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ತೆಗೆದುಕೊಂಡಿದ್ದಾರೆ. ಬಂದ ದಿನವೇ ಮನೆಯವರ ಮೇಲೆ ಡಾಮಿನೇಟ್​ ಮಾಡೋಕೆ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಬಂದ ದಿನ ಎಲ್ಲರ ಸಾಮರ್ಥ್ಯವನ್ನು ಆಡಿಕೊಂಡಿದ್ದಾರೆ. ಇದು ಬಿಗ್​ ಬಾಸ್​ ಸ್ಪರ್ಧಿಗಳಿಗೆ ಇಷ್ಟವಾಗಿಲ್ಲ. ಅಷ್ಟೇ ಏಕೆ, ಆಪ್ತ ಎನಿಸಿಕೊಂಡಿರುವ ಪ್ರಶಾಂತ್​ ಸಂಬರಗಿಯೇ ಈಗ ಚಕ್ರವರ್ತಿಗೆ ನಂಬಿಕೆ ದ್ರೋಹ ಬಗೆದಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ನನ್ನ ಆಪ್ತ ಗೆಳೆಯ. ನಮ್ಮಿಬ್ಬರಿಗೂ ಪರಸ್ಪರ ಪರಿಚಯ ಇದೆ ಎಂದು ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಮನೆಯಲ್ಲಿ ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಇವರಿಬ್ಬರ ಗೆಳೆತನ ನೋಡಿದ ಮನೆ ಮಂದಿ, ಪ್ರಶಾಂತ್​ಗೆ ಹೊಸ ಗೆಳೆಯ ಸಿಕ್ಕಿದ್ದಾರೆ ಎಂದು ನಕ್ಕಿದ್ದಾರೆ. ಆದರೆ, ವೀಕೆಂಡ್​ನಲ್ಲಿ ಸುದೀಪ್​ ಎದುರು ಸಂಬರಗಿ ಉಲ್ಟಾ ಹೊಡೆದಿದ್ದಾರೆ.

ಬಿಗ್​ ಬಾಸ್ ಮನೆಗೆ ಬಂದಾಗ ಹೇಗೆ ಚಂದ್ರಚೂಡ್​ ಎಲ್ಲರನ್ನೂ ತೀರ್ಮಾನಿಸಿದ್ದರೋ ಅದೇ ರೀತಿ ಚಂದ್ರಚೂಡ್​ ಬಗ್ಗೆ ಅಭಿಪ್ರಾಯ ಹೊರ ಹಾಕಲು ಮನೆಯವರಿಗೆ ಅವಕಾಶ ನೀಡಲಾಗಿತ್ತು. ಆಗ ಕೆಲವರು ಚಂದ್ರಚೂಡ್​ಗೆ ಕೊಟ್ಟ ಅಂಕ ತುಂಬಾನೇ ಕಡಿಮೆ ಆಗಿತ್ತು!

ಬಿಗ್​ ಬಾಸ್​ ಮನೆಯಲ್ಲಿ ಚಂದ್ರಚೂಡ್​ಗೆ ಅರವಿಂದ್ ಕೆ.ಪಿ. ಶೂನ್ಯ ಅಂಕವನ್ನು ನೀಡಿದರು. ಬೇರೆಯವರ ಬಗ್ಗೆ ಕಮೆಂಟ್​ ಮಾಡೋದು ತುಂಬಾನೇ ಸುಲಭ. ತಾವು ಸರಿಯಾಗಿ ನಡೆಯೋದು ತುಂಬಾನೇ ಕಷ್ಟ ಎಂದರು. ಅವರು ತುಂಬಾನೇ ಡಾಮಿನೇಟ್​ ಮಾಡುತ್ತಾರೆ ಎನ್ನುವ ಆರೋಪವನ್ನು ವಿಶ್ವ ಹಾಗೂ ದಿವ್ಯಾ ಉರುಡುಗ ಮಾಡಿದರು. ಚಂದ್ರಚೂಡ್​ ಬಗ್ಗೆ ಮಾತನಾಡಿದ ರಾಜೀವ್​, ಅವರಿಗೆ ಭಾಷೆಯ ಮೇಲೆ ಹಿಡಿತ ಇದೆ. ಅದನ್ನ ಇಟ್ಟುಕೊಂಡು ಬೇರೆಯ ಟ್ಯಾಲೆಂಟ್​ ರೂಲ್​ ಮಾಡೋಕೆ ಆಗಲ್ಲ ಎಂದರು.

ಅಚ್ಚರಿ ಎಂದರೆ ಪ್ರಶಾಂತ್​-ಚಂದ್ರಚೂಡ್​ ಆಪ್ತರು. ಆದಾಗ್ಯೂ ಅವರಿಗೆ ಪ್ರಶಾಂತ್​ ನೀಡಿದ್ದು ಮೈನಸ್​ ಒಂದು ಅಂಕ! ಇದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಪ್ರಶಾಂತ್ ಅಷ್ಟು ಕಡಿಮೆ ಅಂಕ ನೀಡೋಕೆ ಕಾರಣವೇನು ಎನ್ನುವುದನ್ನು ಇಂದಿನ (ಮಾರ್ಚ್​​ 03) ಸಂಚಿಕೆಯಲ್ಲಿ ನೋಡಬೇಕಿದೆ.

ಇದನ್ನೂ ಓದಿ: ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್