ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?

ಬಿಗ್​ ಬಾಸ್​ ಮನೆಯ ಮೊದಲ ವಾರದ ಪಂಚಾಯ್ತಿಯಲ್ಲಿ ಕೆಲವರು ಆಡಿದ ಮಾತುಗಳು ಅನೇಕರಿಗೆ ಬೇಸರ ತರಿಸಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಎರಡು ಟೀಂಗಳಾಗಿವೆ. ಸೋಮವಾರದಿಂದ ಇಲ್ಲಿಯವರೆಗೆ ಮನೆಯಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಲೇ ಇವೆ.

ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?
ಸುದೀಪ್​
Edited By:

Updated on: Jul 01, 2021 | 7:20 AM

ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ ಆರಂಭದಲ್ಲಿ ಬಿಗ್​ ಬಾಸ್​ ಮನೆ ರಣರಂಗವಾಗಿತ್ತು. ವೈರಸ್​ ಮತ್ತು ಮನುಷ್ಯರ ಟಾಸ್ಕ್​ನಲ್ಲಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಪ್ರೀತಿಯಿಂದ ಆಡಬಹುದಾದ ಗೇಮ್​ನಲ್ಲಿ ದ್ವೇಷ ಕಾರಿಕೊಂಡಿದ್ದರು. ಎರಡನೇ ಇನ್ನಿಂಗ್ಸ್​ ಆರಂಭದಲ್ಲೂ ಇದು ಪುನರಾವರ್ತನೆ ಆಗಿದೆ. ಈ ವಿಚಾರದಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಕ್ಲಾಸ್​ ತೆಗೆದುಕೊಳ್ಳುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ನಡೆದುಕೊಂಡಿದ್ದ ರೀತಿ ಸುದೀಪ್​ಗೆ ಇಷ್ಟವಾಗಿಲ್ಲ. ಖುಷಿಯಿಂದ ನಡೆಯಬೇಕಿದ್ದ ಟಾಸ್ಕ್​ ರಣರಂಗವಾಗಿದ್ದಕ್ಕೆ ಸುದೀಪ್​ ಛೀಮಾರಿ ಹಾಕಿದ್ದರು. ಇದಾದ ನಂತರ ಮನೆಯವರು ಪಾಠ ಕಲಿತಿದ್ದರು. ಎಲ್ಲರೂ ಒಂದಾಗಿದ್ದರು. ಈಗ ಮತ್ತದೇ ರಿಪೀಟ್​ ಆಗಿದೆ.

ಬಿಗ್​ ಬಾಸ್​ ಮನೆಯ ಮೊದಲ ವಾರದ ಪಂಚಾಯ್ತಿಯಲ್ಲಿ ಕೆಲವರು ಆಡಿದ ಮಾತುಗಳಿಂದ ಈ ದ್ವೇಷ ಹುಟ್ಟಿಕೊಂಡಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಎರಡು ಟೀಂಗಳಾಗಿವೆ. ಸೋಮವಾರದಿಂದ ಇಲ್ಲಿಯವರೆಗೆ ಮನೆಯಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಲೇ ಇವೆ. ಮಂಜು-ದಿವ್ಯಾ ಜತೆ ಪ್ರಶಾಂತ್​-ಚಕ್ರವರ್ತಿ ಜಗಳ ಆಡಿದ್ದಾರೆ. ನಿಧಿ ಸುಬ್ಬಯ್ಯ ಹಾಗೂ ಅರವಿಂದ್ ಕೆಪಿ ಕಿತ್ತಾಡಿಕೊಂಡಿದ್ದಾರೆ. ಕ್ಲೋಸ್​ ಫ್ರೆಂಡ್ಸ್​ ಆಗಿರುವ ನಿಧಿ-ಶುಭಾ ನಡುವೆಯೂ ಮಾತಿನ ಚಕಮಕಿ ನಡೆದಿದೆ. ರಘು-ವೈಷ್ಣವಿ ನಡುವೆ ಉಂಟಾದ ಮಿಸ್​ ಅಂಡರ್​​ಸ್ಟ್ಯಾಂಡಿಗ್​ನಿಂದ ಇಬ್ಬರೂ ಬೇಸರ ಮಾಡಿಕೊಂಡರು.

ಒಟ್ಟಿನಲ್ಲಿ ಎರಡನೇ ಇನ್ನಿಂಗ್ಸ್​ನ ಎರಡನೇ ವಾರ ಮನೆ ಸಂಪೂರ್ಣವಾಗಿ ರಣರಂಗವಾಗಿದೆ. ಶಮಂತ್​ ಹಾಗೂ ಶುಭಾ ಪೂಂಜಾ ಎಲ್ಲವನ್ನೂ ಸರಿ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಭಿನ್ನಾಭಿಪ್ರಾಯಗಳು ಶಮನವಾಗುತ್ತಿಲ್ಲ. ಹೀಗಾಗಿ, ಈ ವಾರ​ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್​ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ:

 ‘ಮಂಜು ಬೆಂಬಲಿಗರ ವೋಟ್​ ನಂಗೆ ಸಿಗಲ್ಲ’; ದಿವ್ಯಾ ಸುರೇಶ್​ ಲೆಕ್ಕಾಚಾರ ಉಲ್ಟಾಪಲ್ಟಾ

Divya Uruduga: ಪದೇಪದೇ ಅರವಿಂದ್ ವಹಿಸಿಕೊಂಡು ಬರುವ ದಿವ್ಯಾಗೆ ಮಾತಿನಲ್ಲೇ ತಿವಿದ ಸುದೀಪ್

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us