ನಟಿ ಕೃತಿ ಶೆಟ್ಟಿ (Krithi Shetty) ಅವರು ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಒಪ್ಪಿಕೊಂಡು ಅವರು ಶೈನ್ ಆಗುತ್ತಿದ್ದಾರೆ. ಅವರು ನಟಿಸಿದ ‘ಕಸ್ಟಡಿ’ ಚಿತ್ರ ಇತ್ತೀಚೆಗೆ ಬಿಡುಗಡೆ ಆಯಿತು. ಈ ಚಿತ್ರದ ಪ್ರಚಾರದ ವೇಳೆ ಅನೇಕ ವಿಚಾರಗಳ ಬಗ್ಗೆ ಕೃತಿ ಶೆಟ್ಟಿ ಮಾತನಾಡಿದ್ದಾರೆ. ಅಚ್ಚರಿ ಎಂದರೆ ಸಮಂತಾ ರುತ್ ಪ್ರಭು (Samantha Ruth Prabhu) ಬಗ್ಗೆ ಕೃತಿ ಶೆಟ್ಟಿ ಆಡಿದ ಮಾತುಗಳು ಚರ್ಚೆ ಹುಟ್ಟುಹಾಕಿವೆ. ಚಿತ್ರರಂಗದಲ್ಲಿ ಸಮಂತಾ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಅವರ ಎದುರಿನಲ್ಲಿ ಕೃತಿ ಶೆಟ್ಟಿಯ ಅನುಭವ ತುಂಬ ಚಿಕ್ಕದು. ಹಾಗಿದ್ದರೂ ಕೂಡ ಹಿರಿಯ ನಟಿಗೆ ಟಕ್ಕರ್ ಕೊಡುವ ರೀತಿಯಲ್ಲಿ ಕೃತಿ ಶೆಟ್ಟಿ ಅವರು ಮಾತನಾಡಿದ್ದಾರೆ. ‘ಉ ಅಂಟಾವಾ ಮಾವ..’ ರೀತಿಯ ಹಾಡಿನಲ್ಲಿ ತಾವು ನಟಿಸಲ್ಲ ಎಂದು ಅವರು ಹೇಳಿದ್ದಾರೆ. ಈ ವಿಚಾರ ಟಾಲಿವುಡ್ನಲ್ಲಿ ಚರ್ಚೆ ಆಗುತ್ತಿದೆ.
ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ ಬಹಳ ಸಮಯ ಕಳೆದಿದೆ. ನಾಗ ಚೈತನ್ಯ ಜೊತೆ ‘ಕಸ್ಟಡಿ’ ಚಿತ್ರದಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ. ತಮ್ಮದೇ ಸಿನಿಮಾದ ಹೀರೋನ ಮಾಜಿ ಪತ್ನಿ ಬಗ್ಗೆ ಕೇಳಿಬಂದ ಪ್ರಶ್ನೆಗೆ ಕೃತಿ ಶೆಟ್ಟಿ ಅವರು ಧೈರ್ಯವಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: Kriti Shetty: ಸೀರೆಯುಟ್ಟು ಬಂದ ಮಂಗಳೂರು ಚೆಲುವೆ ಕೃತಿ ಶೆಟ್ಟಿ
‘ಕಸ್ಟಡಿ’ ಚಿತ್ರದ ಪ್ರಚಾರದ ಸಲುವಾಗಿ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ಒಂದು ಪ್ರಶ್ನೆ ಎದುರಾಗಿದೆ. ‘ಉ ಅಂಟಾವಾ..’ ಹಾಡಿನ ಆಫರ್ ನಿಮಗೆ ಸಿಕ್ಕಿದ್ದರೆ ಒಪ್ಪಿಕೊಳ್ಳುತ್ತಿದ್ರಾ ಎಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಅವರು ‘ಇಲ್ಲ’ ಎಂದು ಹೇಳಿದ್ದಾರೆ. ‘ಸದ್ಯಕ್ಕೆ ನಾನು ಅಂಥ ಪಾತ್ರ ಒಪ್ಪಿಕೊಳ್ಳಲ್ಲ. ಆ ರೀತಿ ಪಾತ್ರದಲ್ಲಿ ನಟಿಸಲು ನನಗೆ ಕಷ್ಟ ಆಗುತ್ತದೆ’ ಎಂದು ಅವರು ಹೇಳಿದ್ದಾರೆ. ಆದರೂ ಕೂಡ ಅವರಿಗೆ ಆ ಹಾಡಿನಲ್ಲಿ ಸಮಂತಾ ಅವರ ಪರ್ಫಾರ್ಮೆನ್ಸ್ ಇಷ್ಟ ಆಗಿದೆ.
ಇದನ್ನೂ ಓದಿ: Krithi Shetty: ಕರಾವಳಿಯ ಚೆಲುವೆ ಕೃತಿ ಶೆಟ್ಟಿ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಇಲ್ಲಿವೆ
ಐಟಂ ಡ್ಯಾನ್ಸ್ ವಿಚಾರದಲ್ಲಿ ನಟಿಯರ ಅಭಿಪ್ರಾಯ ಬೇರೆ ಬೇರೆ ರೀತಿ ಇದೆ. ಒಂದು ಕಾಲದಲ್ಲಿ ಐಟಂ ಡ್ಯಾನ್ಸ್ ಮಾಡಲು ಪ್ರತ್ಯೇಕ ನಟಿಯರು ಇರುತ್ತಿದ್ದರು. ನಂತರ ಕಾಲ ಬದಲಾಯಿತು. ಹೀರೋಯಿನ್ಗಳೇ ಸ್ಪೆಷಲ್ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಮುಂತಾದವರು ಇಂಥ ಹಾಡುಗಳಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.