ತೆರೆ ಮೇಲೆ ಕಾಣಿಸುವ ಕೆಲವು ಪಾತ್ರಗಳನ್ನು ಅಭಿಮಾನಿಗಳು ತುಂಬ ಹಚ್ಚಿಕೊಳ್ಳುತ್ತಾರೆ. ತಮ್ಮ ನಿರೀಕ್ಷೆಯಂತೆಯೇ ಪಾತ್ರಧಾರಿಗಳು ಕೂಡ ಇರಬೇಕು ಎಂದು ವೀಕ್ಷಕರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಅವರ ನಿರೀಕ್ಷೆ ಹುಸಿಯಾಗಿಬಿಡುತ್ತದೆ. ಜನಪ್ರಿಯ ಕಿರುತೆರೆ ನಟಿ ಶಿಖಾ ಸಿಂಗ್ ವಿಚಾರದಲ್ಲಿ ಇದೇ ರೀತಿ ಆಗಿದೆ. ಇತ್ತೀಚೆಗೆ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅದನ್ನು ಕಂಡು ಫ್ಯಾನ್ಸ್ಗೆ ತೀವ್ರ ಬೇಸರ ಆಗಿದೆ. ಕಮೆಂಟ್ಗಳ ಮೂಲಕ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿ ಕಿರುತೆರೆ ಲೋಕದಲ್ಲಿ ನಟಿ ಶಿಖಾ ಸಿಂಗ್ ಹೆಚ್ಚು ಫೇಮಸ್. ‘ಕುಂಕುಮ್ ಭಾಗ್ಯ’ ಸೀರಿಯಲ್ನಲ್ಲಿ ಅವರು ಮಾಡಿದ ಆಲಿಯಾ ಎಂಬ ಪಾತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಶಿಖಾ ಸಿಂಗ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಟಾಪ್ಲೆಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ.
ಹಾಸಿಗೆಯ ಮೇಲೆ ಮಲಗಿ, ಎದೆ ಭಾಗವನ್ನು ದಿಂಬಿನಿಂದ ಮುಚ್ಚಿಕೊಂಡಿರುವ ಅವರು ಟಾಪ್ಲೆಸ್ ಆಗಿ ಪೋಸ್ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು, ‘ನಿಮ್ಮಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಬೇರೆ ನಟಿಯರು ಬಗ್ಗೆ ನಮಗೆ ತಿಳಿದಿಲ್ಲ. ಆದರೆ ನೀವು ಹೀಗೆ ಮಾಡಿರುವುದು ಬೇಸರ ಮೂಡಿಸಿದೆ’ ಎಂದು ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಶಿಖಾ ಸಿಂಗ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ಮೂಡಿದೆ.
ಇನ್ನು, ಈ ಫೋಟೋ ನೋಡಿದ ಅವರ ಸ್ನೇಹಿತರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಅವರಿಗೆ ಕಿರುತೆರೆ ಸೆಲೆಬ್ರಿಟಿಗಳು ಪ್ರೋತ್ಸಾಹ ನೀಡಿದ್ದಾರೆ. ಇತ್ತೀಚೆಗೆ ಮಗುವಿಗೆ ತಾವು ಎದೆಹಾಲು ಕುಡಿಸುತ್ತಿರುವ ಫೋಟೋವನ್ನು ಶಿಖಾ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಕೂಡ ಸಖತ್ ವೈರಲ್ ಆಗಿತ್ತು.
35ರ ಪ್ರಾಯದ ಶಿಖಾ ಸಿಂಗ್ ಅವರು ಸದ್ಯ ನಟನೆಯಿಂದ ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ. ಮಗುವಿನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. 2007ರಿಂದಲೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಅವರು ಹಲವು ಧಾರಾವಾಹಿ ಮತ್ತು ಗೇಮ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ:
ಸ್ಕರ್ಟ್ ಧರಿಸಿ ಯೋಗ ಮಾಡಿದ ಸ್ಟಾರ್ ನಟನ ಪತ್ನಿ? ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್