ಕನ್ನಡದ ನಟಿ ಖುಷಿ ರವಿ (Kushee Ravi) ಅವರು ‘ದಿಯಾ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. ಆ ಬಳಿಕ ಅವರಿಗೆ ಪರಭಾಷೆಯಿಂದಲೂ ಅವಕಾಶಗಳು ಬರಲು ಆರಂಭಿಸಿದರು. ತೆಲುಗಿನಲ್ಲಿ ಅವರು ಅಭಿನಯಿಸಿದ್ದಾರೆ. ಖುಷಿ ರವಿ ನಟನೆಯ ಟಾಲಿವುಡ್ ಸಿನಿಮಾ ‘ಪಿಂಡಂ’ (Pindam Movie) ಈ ವಾರ ಬಿಡುಗಡೆ ಆಗಲಿದೆ. ಡಿಸೆಂಬರ್ 15ರಂದು ಈ ಚಿತ್ರ ತೆರೆಕಾಣಲಿದೆ. ಇದು ಹಾರರ್ ಸಿನಿಮಾ ಆಗಿದ್ದು, ಬಿಡುಗಡೆಗೂ ಮುನ್ನವೇ ಚಿತ್ರತಂಡದವರು ಒಂದು ಎಚ್ಚರಿಕೆ ನೀಡಿದ್ದಾರೆ. ಗರ್ಭಿಣಿಯರು (Pregnant ladies) ಈ ಸಿನಿಮಾ ನೋಡಬಾರದು ಎಂದು ವಿಶೇಷ ಸೂಚನೆ ನೀಡಲಾಗಿದೆ.
‘ಪಿಂಡಂ’ ಸಿನಿಮಾದಲ್ಲಿ ಶ್ರೀರಾಮ್, ಖುಷಿ ರವಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಹಾರರ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಪಿಂಡಂ’ ಭರ್ಜರಿ ಟ್ರೀಟ್ ನೀಡಲಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಆ ಕಾರಣದಿಂದಲೂ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
2️⃣Days to go for the scariest film ever!!#Pindam Movie Releasing on December 15th 2023 🔥
Disclaimer: Pregnant women are strictly not encouraged to watch@saikirandaida @yeshwanth_daggumati @ameaswarirao @kalaahimedia#TheScariestFilmEver #Pindamon15thDecember pic.twitter.com/FNiKbErQvn
— Kalaahi Media (@Kalaahi_Media) December 13, 2023
ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿರುವ ‘ಪಿಂಡಂ’ ಸಿನಿಮಾ ‘ಎ’ ಪ್ರಮಾಣ ಪತ್ರ ಪಡೆದಿದೆ. ಭಯಾನಕ ದೃಶ್ಯಗಳು ಈ ಸಿನಿಮಾದಲ್ಲಿ ಇವೆ ಎಂಬ ಕಾರಣಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇದು ಗರ್ಭಿಣಿಯರಿಗೆ ಸೂಕ್ತವಲ್ಲ ಎಂದು ಕೂಡ ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ಬಳಿಕ ಸಿನಿಪ್ರಿಯರ ಕೌತುಕ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್ ಅನುಭವ
‘ಅತಿ ಹೆಚ್ಚು ಹೆದರಿಸುವ ಸಿನಿಮಾ’ ಎಂಬ ಟ್ಯಾಗ್ ಲೈನ್ ಕೂಡ ‘ಪಿಂಡಂ’ ಸಿನಿಮಾದ ಪೋಸ್ಟರ್ನಲ್ಲಿ ಹೈಲೈಟ್ ಆಗಿದೆ. ಸಾಯಿಕಿರಣ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿವಿಧ ಕಾಲಘಟದಲ್ಲಿ ಈ ಸಿನಿಮಾದ ಕಥೆ ಸಾಗಲಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:41 pm, Wed, 13 December 23