Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್​ ಅನುಭವ

ಭೂತ ಕಂಡ ರೀತಿಯ ಅನುಭವ ಬಾಲಿವುಡ್ ಸೆಲೆಬ್ರಿಟಿಗಳಿಗೂ ಆಗಿದೆ. ಸಿನಿಮಾ ಶೂಟಿಂಗ್ ಕಾರಣದಿಂದ ಅವರು ಬೇರೆ ಬೇರೆ ಕಡೆ ತೆರಳುತ್ತಾರೆ. ಹೊಸ ಪ್ರದೇಶಗಳಲ್ಲಿ ಹಾರರ್ ಅನುಭವ ಆಗಿರುತ್ತದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಹೇಳಿಕೊಂಡಿದ್ದಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.

ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್​ ಅನುಭವ
ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್​ ಅನುಭವ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 15, 2023 | 8:29 AM

ದೆವ್ವ-ಭೂತ ಇದೆ ಅಥವಾ ಇಲ್ಲ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ದೇವರು ಇದ್ದಾನೆ ಎನ್ನುವ ನಂಬಿಕೆ ಹೇಗಿದೆಯೋ ಹಾಗೆಯೇ ದುಷ್ಟ ಶಕ್ತಿಗಳೂ ಇವೆ ಅನ್ನೋದು ಕೆಲವರ ನಂಬಿಕೆ. ಆದರೆ, ಇದನ್ನು ಅನೇಕರು ನಂಬುವುದಿಲ್ಲ. ಇನ್ನೂ ಕೆಲವರು ಇದನ್ನು ಒಪ್ಪಿಸುತ್ತಾರೆ. ಅವರಿಗೆ ಆದ ಅನುಭವಗಳೇ ಇದಕ್ಕೆ ಕಾರಣ. ಭೂತ (Ghoast) ಕಂಡ ರೀತಿಯ ಅನುಭವ ಬಾಲಿವುಡ್ ಸೆಲೆಬ್ರಿಟಿಗಳಿಗೂ ಆಗಿದೆ. ಸಿನಿಮಾ ಶೂಟಿಂಗ್ ಕಾರಣದಿಂದ ಅವರು ಬೇರೆ ಬೇರೆ ಕಡೆ ತೆರಳುತ್ತಾರೆ. ಹೊಸ ಪ್ರದೇಶಗಳಲ್ಲಿ ಹಾರರ್ ಅನುಭವ ಆಗಿರುತ್ತದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಹೇಳಿಕೊಂಡಿದ್ದಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.

ವರುಣ್ ಶರ್ಮಾ

ವರುಣ್ ಶರ್ಮಾ ಅವರು ‘ಫುಕ್ರೆ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಮನಾಲಿಗೆ ತೆರಳಿದ್ದರು. ಅವರು ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಅವರಿಗೆ ಮನುಷ್ಯನ ರೀತಿಯ ಆಕೃತಿ ಒಂದು ಕಂಡಿತ್ತು. ತಕ್ಷಣ ಅದು ಮಾಯವಾಯಿತು. ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ತಾಪ್ಸೀ ಪನ್ನು

ನಟಿ ತಾಪ್ಸೀ ಪನ್ನು ಅವರು ಹೈದರಾಬಾದ್​​ನ ರಾಮೋಜಿ ಫಿಲ್ಮ್​ ಸಿಟಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ರೂಂ ಹೊರಗೆ ಅವರಿಗೆ ಯಾರೋ ಓಡಾಡಿದಂತೆ ಭಾಸವಾಗಿತ್ತು. ಅವರು ನಿದ್ರಿಸಬೇಕು ಎಂದರೆ ಅದು ಸಾಧ್ಯವೇ ಆಗಿಲ್ಲ. ಕೊನೆಗೂ ಅಲ್ಲಿ ಯಾರಿದ್ದರು ಎನ್ನುವುದನ್ನು ಕಂಡು ಹಿಡಿಯೋಕೆ ಅವರ ಬಳಿ ಸಾಧ್ಯವಾಗಿಲ್ಲ.

ಕೃತಿ ಸನೋನ್

ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಕೃತಿ ಸನೋನ್​ಗೆ ಇದೆ. ಅವರು ಬಾಲಿವುಡ್​ನ ಬೇಡಿಕೆಯ ಹೀರೋಯಿನ್. ಅವರು ‘ದಿಲ್​ವಾಲೆ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವರು ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ಹೋಟೆಲ್ ರೂಂನಲ್ಲಿ ಯಾರೋ ಉಳಿದುಕೊಂಡಂತೆ ಭಾಸವಾಗಿತ್ತಂತೆ. ಬಾಡಿ ಲೋಷನ್ ಬಾಟಲಿ ಪದೇ ಪದೇ ಬೀಳುತ್ತಿತ್ತಂತೆ. ಯಾರೂ ದೂಡಿದಂತೆಯೂ ಅವರಿಗೆ ಭಾಸವಾಗಿತ್ತು.

ಇಮ್ರಾನ್ ಹಶ್ಮಿ

ಇಮ್ರಾನ್ ಹಶ್ಮಿ ಅವರು ಗೆಳೆಯರ ಜೊತೆ ಒಮ್ಮೆ ವೆಕೇಶನ್ ಹೋಗಿದ್ದರು. ಈ ವೇಳೆ ಅವರು ಹೋಟೆಲ್ ಮಾಡಿ ಉಳಿದುಕೊಂಡಿದ್ದರು. ಹೋಟೆಲ್ ಹೊರಗೆ ಯಾರೋ ಅತ್ತಂತೆ, ಕಿರುಚಿದಂತೆ ಕೇಳಿತ್ತು. ಹೋಗಿ ಪರೀಕ್ಷಿಸಿದರೆ ಯಾರೂ ಇರಲಿಲ್ಲ. ಆದರೆ, ಆ ಅರಚಾಟ ಮಾತ್ರ ಮುಂದುವರಿದೇ ಇತ್ತು. ನಂತರ ಅವರು ಈ ಜಾಗವನ್ನು ಬಿಟ್ಟು ಬೇರೆ ಕಡೆ ಹೋಗಬೇಕಾಯಿತು.

ಬಿಪಾಶಾ ಬಸ್ಸು

ಬಿಪಾಶಾ ಬಸ್ಸು ಅವರು ‘ಆತ್ಮ’ ಹೆಸರಿನ ಹಾರರ್ ಸಿನಿಮಾ ಮಾಡಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಇವರ ತಂಡಕ್ಕೆ ಯಾರೋ ಹಾಡಿದಂತೆ ಕೇಳುತ್ತಿತ್ತು. ಆದರೆ, ಅದನ್ನು ರೆಕಾರ್ಡ್ ಮಾಡಿದರೆ ಯಾವುದೇ ಶಬ್ದ ಇರುತ್ತಿರಲಿಲ್ಲ. ಆ ಬಳಿಕ ಗೋಡೆಗೆ ಹಾಕಿದ್ದ ಫೋಟೋಗಳು ಬಿದ್ದಿದ್ದವು. ಇದು ಬಿಪಾಶಾಗೆ ಭಯ ಹುಟ್ಟಿಸಿತ್ತು.

ರಾಜ್​ಕುಮಾರ್ ರಾವ್

ರಾಜ್​ಕುಮಾರ್ ರಾವ್ ಅವರು ‘ಸ್ತ್ರೀ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಹಾರರ್ ಸಿನಿಮಾ. ಈ ಚಿತ್ರದ ಶೂಟಿಂಗ್ ಮಧ್ಯರಾತ್ರಿ ನಡೆಯುತ್ತಿತ್ತು. ಸಿನಿಮಾ ಸೆಟ್​ನಲ್ಲ್ಲಿ ಚಿತ್ರತಂಡದ ವ್ಯಕ್ತಿ 20 ಅಡಿ ಎತ್ತರದಲ್ಲಿ ಕುಳಿತಿದ್ದ. ಆತನನ್ನು ಯಾರೋ ತಳ್ಳಿದಂತೆ ಭಾಸವಾಯಿತಂತೆ. ಆ ಹುಡುಗ ಬಿದ್ದು ಗಾಯ ಮಾಡಿಕೊಂಡಿದ್ದ.

ನವಾಜುದ್ದೀನ್ ಸಿದ್ಧಿಕಿ

ನವಾಜುದ್ದೀನ್ ಸಿದ್ಧಿಕಿ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಅವರು ‘ಆತ್ಮ’ ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೂ ಬಿಪಾಶಾ ಬಸ್ಸು ರೀತಿಯೇ ಹಾರರ್ ಅನುಭವ ಆಗಿತ್ತು. ಇದನ್ನು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಈ ಸೆಲೆಬ್ರಿಟಿ ಮಕ್ಕಳು ಚಿತ್ರ ವಿಚಿತ್ರ ಕಾರಣಕ್ಕೆ ಟ್ರೋಲ್ ಆಗಿದ್ದರು; ಇಲ್ಲಿದೆ ವಿವರ

ಸೋಹಾ ಅಲಿ ಖಾನ್

‘ಗ್ಯಾಂಗ್ಸ್ ಆಫ್ ಘೋಸ್ಟ್​’ ಸಿನಿಮಾ ಶೂಟಿಂಗ್ ವೇಳೆ ಸೋಹಾ ಅಲಿ ಖಾನ್ ಅವರಿಗೆ ಭಯ ಆಗಿತ್ತು. ಖಾಲಿ ರೂಂನಿಂದ ಬೇರೆ ಬೇರೆ ರೀತಿಯ ಶಬ್ದಗಳು ಕೇಳಿ ಬರುತ್ತಿದ್ದವು. ಆ ಬಳಿಕ ಅವರು ಅಲ್ಲಿಂದ ತೆರಳಿದ್ದರು.

ವರುಣ್ ಧವನ್

ವರುಣ್ ಧವನ್ ಅವರು ಬಾಲಿವುಡ್​​ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಅಮೆರಿಕದಲ್ಲಿ ‘ಎಬಿಸಿಡಿ 2’ ಸಿನಿಮಾ ಶೂಟಿಂಗ್​ನಲ್ಲಿದ್ದರು. ಈ ವೇಳೆ ಅವರು ಒಂದು ಕಡೆ ಉಳಿದುಕೊಂಡಿದ್ದರು. ಅಲ್ಲಿ ಯಾರೋ ಹಾಡಿದಂತೆ ಕೇಳುತ್ತಿತ್ತು. ಜೊತೆಗೆ ರೂಂನ ಬಾಗಿಲು ಚಿತ್ರ-ವಿಚಿತ್ರವಾಗಿ ತೆರೆದುಕೊಳ್ಳುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:28 am, Fri, 15 September 23