AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೆಲೆಬ್ರಿಟಿ ಮಕ್ಕಳು ಚಿತ್ರ ವಿಚಿತ್ರ ಕಾರಣಕ್ಕೆ ಟ್ರೋಲ್ ಆಗಿದ್ದರು; ಇಲ್ಲಿದೆ ವಿವರ

ಸೆಲೆಬ್ರಿಟಿ ಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ನೀಡುವ ಹೇಳಿಕೆಗಳು, ಅವರು ನಡೆದುಕೊಳ್ಳುವ ರೀತಿ ವಿವಾದ ಸೃಷ್ಟಿ ಮಾಡುತ್ತವೆ. ಅದಕ್ಕೆ ಕಾರಣಗಳು ತುಂಬಾನೇ ಸಿಲ್ಲಿ. ಈ ರೀತಿ ವಿವಾದಕ್ಕೆ ಟ್ರೋಲ್​ಗೆ ಒಳಗಾದವರಲ್ಲಿ ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮೊದಲಾದವರು ಇದ್ದಾರೆ.

ಈ ಸೆಲೆಬ್ರಿಟಿ ಮಕ್ಕಳು ಚಿತ್ರ ವಿಚಿತ್ರ ಕಾರಣಕ್ಕೆ ಟ್ರೋಲ್ ಆಗಿದ್ದರು; ಇಲ್ಲಿದೆ ವಿವರ
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 14, 2023 | 8:08 AM

Share

ಸ್ಟಾರ್​ಗಳ ರೀತಿ ಅವರ ಮಕ್ಕಳ ಬಗ್ಗೆಯೂ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಸ್ಟಾರ್ ಕಲಾವಿದರ ಮಕ್ಕಳು ಎಲ್ಲಿಗೇ ಹೋದರು ಜನರು ಅವರನ್ನು ಗಮನಿಸುತ್ತಾರೆ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ನೀಡುವ ಹೇಳಿಕೆಗಳು, ಅವರು ನಡೆದುಕೊಳ್ಳುವ ರೀತಿ ವಿವಾದ ಸೃಷ್ಟಿ ಮಾಡುತ್ತವೆ. ಅದಕ್ಕೆ ಕಾರಣಗಳು ತುಂಬಾನೇ ಸಿಲ್ಲಿ. ಈ ರೀತಿ ವಿವಾದಕ್ಕೆ ಟ್ರೋಲ್​ಗೆ ಒಳಗಾದವರಲ್ಲಿ ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಖಾನ್ (Aryan Khan), ಸುಹಾನಾ ಖಾನ್ ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಖುಷಿ ಕಪೂರ್

ನಟಿ ಶ್ರೀದೆವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮಗಳು ಖುಷಿ ಕಪೂರ್. ಅವರ ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಮೂಲಕ ಬಾಲಿವುಡ್​ಗೆ ಕಾಲಿಡಲು ರೆಡಿ ಆಗಿದ್ದಾರೆ. ನಡೆದು ಹೋಗುವಾಗ ತಮ್ಮ ಛತ್ರಿಯನ್ನು ಹಿಡಿದುಕೊಂಡಿರಲಿಲ್ಲ ಎಂದು ಅನೇಕರು ಅವರನ್ನು ಟ್ರೋಲ್ ಮಾಡಿದ್ದರು.

ಆರ್ಯನ್ ಖಾನ್

ಆರ್ಯನ್ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಶಾರುಖ್ ಖಾನ್ ಮಗ ಎನ್ನುವ ಕಾರಣಕ್ಕೆ ಇವರಿಗೆ ಹೆಚ್ಚು ಅಟೆನ್ಷನ್ ಸಿಗುತ್ತಿದೆ. ಆರ್ಯನ್ ಖಾನ್ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ. ಆದರೆ, ಈ ಬಗ್ಗೆ ಬ್ರ್ಯಾಂಡ್​ನ ಬೆಲೆ ಕೇಳಿ ಅನೇಕರು ಶಾಕ್ ಆಗಿದ್ದರು. ಸಾಮಾನ್ಯ ಜಾಕೆಟ್​ಗೆ ಲಕ್ಷ ರೂಪಾಯಿ ಬೆಲೆ ನಿಗದಿ ಆಗಿತ್ತು. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ಆರ್ಯನ್ ಡ್ರಗ್ ಕೇಸ್​ನಲ್ಲಿ ಸಿಲುಕಿದ್ದರಿಂದಲೂ ಸುದ್ದಿ ಆಗಿದ್ದರು.

ಪಲಕ್ ತಿವಾರಿ

ಶ್ವೇತಾ ತಿವಾರಿ ಮಗಳು ಪಲಕ್ ತಿವಾರಿ. ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋ ಹಂಚಿಕೊಂಡು ಅವರು ಗಮನ ಸೆಳೆಯುತ್ತಾರೆ. ಪಲಕ್ ತಿವಾರಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರ ಇಟ್ಟುಕೊಂಡು ಅವರನ್ನು ಟೀಕಿಸಲಾಗಿತ್ತು.

ಇಬ್ರಾಹಿಮ್ ಅಲಿ ಖಾನ್

ಸೈಫ್ ಅಲಿ ಖಾನ್ ಮಗ ಇಬ್ರಾಹಿಮ್ ಅಲಿ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಪಲಕ್ ತಿವಾರಿ ಜೊತೆ ಅವರು ಸುತ್ತಾಟ ನಡೆಸಿದ್ದರು. ಒಮ್ಮೆ ಥಿಯೇಟರ್​ನಿಂದ ಹೊರ ಬರುವಾಗ ಅವರಿಗೆ ಪಾಪರಾಜಿಗಳು ಎದುರಾಗಿದ್ದರು. ಅವರನ್ನು ನೋಡಿ ಇಬ್ರಾಹಿಮ್ ಸಿಟ್ಟಾಗಿದ್ದರು. ಇಬ್ರಾಹಿಮ್​ಗೆ ಸೊಕ್ಕು ಎಂದು ಅನೇಕರು ಹೇಳಿದ್ದರು. ಇಬ್ರಾಹಿಮ್ ನೋಡೋಕೆ ಸೈಫ್ ಅಲಿ ಖಾನ್ ರೀತಿಯಲ್ಲೇ ಇದ್ದಾರೆ.

ಶನಾಯ ಕಪೂರ್

ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ ಮಗಳು ಶನಾಯ ಕಪೂರ್. ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದರು. ಸಖತ್ ತೆಳ್ಳಗೆ ಕಾಣಿಸುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಟ್ರೋಲ್ ಮಾಡಲಾಗಿತ್ತು.

ಅಗಸ್ತ್ಯ ನಂದ

ಅಮಿತಾಭ್ ಬಚ್ಚನ್ ಮೊಮ್ಮೊಗ ಅಗಸ್ತ್ಯ ನಂದ ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮ್ಯಾಗಜಿನ್ ಒಂದರ ಕವರ್​ ಪೇಜ್​ನಲ್ಲಿ ಅವರ ಫೋಟೊ ಇತ್ತು. ಏನು ಸಾಧನೆ ಮಾಡದೇ ಮ್ಯಾಗಜಿನ್ ಕವರ್ ಪೇಜ್​ನಲ್ಲಿ ಅಗಸ್ತ್ಯ ಕಾಣಿಸಿಕೊಂಡಿದ್ದಕ್ಕೆ ಟ್ರೋಲ್ ಆಗಿದ್ದರು.

ಸುಹಾನಾ ಖಾನ್

ಶಾರುಖ್ ಖಾನ್ ಮಗಳು ಎನ್ನುವ ಕಾರಣಕ್ಕೆ ಸುಹಾನಾ ಖಾನ್​ಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಅವರು ಬಾಲಿವುಡ್​ಗೆ ಕಾಲಿಡಲು ರೆಡಿ ಆಗಿದ್ದಾರೆ. ಶಾರುಖ್ ಖಾನ್ ಕೂಡ ಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಯಾವುದೇ ಆಡಿಷನ್ ನೀಡದೇ ಸಿನಿಮಾ ಆಫರ್ ಪಡೆದುಕೊಂಡಿದ್ದಾರೆ ಎಂದು ಅವರನ್ನು ಟೀಕಿಸಲಾಗಿತ್ತು.

ಇದನ್ನೂ ಓದಿ: ಈ ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿತ್ತು ದೊಡ್ಡ ಟ್ರ್ಯಾಜಿಡಿ; ಟ್ರೋಲ್​ಗಳಿಗೆ ಆಹಾರವಾಗಿದ್ದ ಕಲಾವಿದರು

ಆರಾಧ್ಯಾ ಬಚ್ಚನ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯಾ. ಅವರು ಸದ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಲಿಪ್​ಸ್ಟಿಕ್ ಹಚ್ಚಿಕೊಂಡ ಫೋಟೋ ಒಂದು ವೈರಲ್ ಆಗಿತ್ತು. ಈ ಕಾರಣದಿಂದಲೂ ಅವರನ್ನು ಟ್ರೋಲ್ ಮಾಡಲಾಗಿತ್ತು.

ನಿಸಾ ದೇವಗನ್

ಅಜಯ್ ದೇವಗನ್ ಹಾಗೂ ಕಾಜೋಲ್ ಮಗಳು ನೈಸಾ ಆಗಾಗ ಸುದ್ದಿ ಆಗುತ್ತಾರೆ. ಅವರು ಇತ್ತೀಚೆಗೆ ಉಡುಗೆ ವಿಚಾರದಲ್ಲಿ ಟ್ರೋಲ್ ಆಗಿದ್ದರು. ಸಣ್ಣ ಬಟ್ಟೆ ಹಾಕಿದ್ದಕ್ಕೆ ಅವರನ್ನು ಅನೇಕರು ಟೀಕಿಸಿದ್ದರು. ಈ ಫೋಟೋಗಳು ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Thu, 14 September 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?