AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿತ್ತು ದೊಡ್ಡ ಟ್ರ್ಯಾಜಿಡಿ; ಟ್ರೋಲ್​ಗಳಿಗೆ ಆಹಾರವಾಗಿದ್ದ ಕಲಾವಿದರು

ದೂರದಿಂದ ನೋಡಿದಾಗ ಸೆಲೆಬ್ರಿಟಿಗಳು ಬದುಕು ಸಖತ್ ಕಲರ್​​ಫುಲ್ ಆಗಿ ಕಾಣುತ್ತದೆ. ಆದರೆ, ಅಸಲಿಗೆ ಆ ರೀತಿ ಇರುವುದಿಲ್ಲ. ಅವರ ಬಾಳಲ್ಲೂ ಹಲವು ದುಃಖಗಳು ಇರುತ್ತವೆ. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಓಪನ್ ಆಗಿ ಮಾತನಾಡಿಕೊಂಡಿದ್ದಿದೆ. ಕೆಲವು ಸಾರ್ವಜನಿಕವಾಗಿಯೇ ಕಾಣಿಸಿದ್ದಿದೆ. ಬಾಲಿವುಡ್ ಸ್ಟಾರ್ಸ್ ಜೀವನದಲ್ಲಿ ನಡೆದ ಟ್ರ್ಯಾಜಿಡಿ ಬಗ್ಗೆ ಇಲ್ಲಿದೆ ಮಾಹಿತಿ.

ಈ ಸೆಲೆಬ್ರಿಟಿಗಳ ಬಾಳಲ್ಲಿ ನಡೆದಿತ್ತು ದೊಡ್ಡ ಟ್ರ್ಯಾಜಿಡಿ; ಟ್ರೋಲ್​ಗಳಿಗೆ ಆಹಾರವಾಗಿದ್ದ ಕಲಾವಿದರು
ಸೆಲೆಬ್ರಿಟಿಗಳ ಬಾಳಲ್ಲಿ ನಡೆದ ಟ್ರ್ಯಾಜಿಡಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 12, 2023 | 8:07 AM

Share

ಒಮ್ಮೆ ಜನಪ್ರಿಯತೆ ಸಿಕ್ಕ ಬಳಿಕ ಅಭಿಮಾನಿ ಬಳಗ ಹಿರಿದಾಗುತ್ತದೆ. ಹೀಗಾಗಿ, ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಸೆಲೆಬ್ರಿಟಿಗಳು ದೂರ ತಳ್ಳೋಕೆ ಸಾಧ್ಯವಿಲ್ಲ. ಇನ್ನು, ದೂರದಿಂದ ನೋಡಿದಾಗ ಸೆಲೆಬ್ರಿಟಿಗಳು ಬದುಕು ಸಖತ್ ಕಲರ್​​ಫುಲ್ ಆಗಿ ಕಾಣುತ್ತದೆ. ಆದರೆ, ಅಸಲಿಗೆ ಆ ರೀತಿ ಇರುವುದಿಲ್ಲ. ಅವರ ಬಾಳಲ್ಲೂ ಹಲವು ದುಃಖಗಳು ಇರುತ್ತವೆ. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಓಪನ್ ಆಗಿ ಮಾತನಾಡಿಕೊಂಡಿದ್ದಿದೆ. ಕೆಲವು ಸಾರ್ವಜನಿಕವಾಗಿಯೇ ಕಾಣಿಸಿದ್ದಿದೆ. ಬಾಲಿವುಡ್ (Bollywood) ಸ್ಟಾರ್ಸ್ ಜೀವನದಲ್ಲಿ ನಡೆದ ಟ್ರ್ಯಾಜಿಡಿ ಬಗ್ಗೆ ಇಲ್ಲಿದೆ ಮಾಹಿತಿ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನ ಬೇಡಿಕೆಯ ನಟಿ. ಅವರು ಒಮ್ಮೆ ಖಿನ್ನತೆಗೆ ಒಳಗಾಗಿದ್ದರು. ಅವರಿಗೆ ಆತ್ಮಹತ್ಯೆ ಆಲೋಚನೆಯೂ ಬಂದಿತ್ತು. ಇದರಿಂದ ಅವರು ಹೊರ ಬಂದರು. ಈಗ ಅವರು ‘ಲಿವ್​, ಲವ್, ಲಾಫ್’ ಹೆಸರಿನ ಎನ್​ಜಿಒ ನಡೆಸುತ್ತಿದ್ದಾರೆ. ಮಾನಸಿಕ ಸಮಸ್ಯೆ ಒಳಗಾದವರಿಗೆ ಸ್ಥೈರ್ಯ ತುಂಬುವ ಕೆಲಸವನ್ನು ಈ ಎನ್​ಜಿಒ ಮಾಡುತ್ತದೆ.

ಶಾರುಖ್ ಖಾನ್

ಶಾರುಖ್ ಖಾನ್ ‘ಪಠಾಣ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಜೀವನದಲ್ಲಿ ಎರಡು ಬಾರಿ ಟ್ರ್ಯಾಜಿಡಿ ನಡೆದಿತ್ತು. ತಂದೆ ಮೀರ್ ತಾಜ್ ಮೊಹಮದ್ ಖಾನ್ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಇತ್ತು. ಅವರನ್ನು ಕಳೆದುಕೊಂಡ ಬಳಿಕ ಶಾರುಖ್ ಡಲ್ ಆಗಿದ್ದರು. ತಂದೆ ಇಲ್ಲ ನೋವು ಅವರನ್ನು ಈಗಲೂ ಕಾಡುತ್ತಿದೆ. ಡ್ರಗ್​ ಕೇಸ್​ನಲ್ಲಿ ಆರ್ಯನ್ ಖಾನ್ ಅರೆಸ್ಟ್ ಆದಾಗಲೂ ಶಾರುಖ್ ಖಾನ್ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದರು.

ವಿವೇಕ್ ಒಬೆರಾಯ್

ವಿವೇಕ್ ಒಬೆರಾಯ್ ಅವರು ಹೀರೋ ಆಗಿ, ವಿಲನ್ ಆಗಿ ಗಮನ ಸೆಳೆದಿದ್ದಾರೆ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರು ಸಲ್ಮಾನ್ ಖಾನ್ ವಿರುದ್ಧ ಪ್ರೆಸ್​ಮೀಟ್ ಮಾಡಿದ್ದರು. ಐಶ್ವರ್ಯಾ ರೈ ಜೊತೆ ರಿಲೇಶನ್​ಶಿಪ್​ನಲ್ಲಿರುವುದಕ್ಕೆ ಸಲ್ಮಾನ್ ಖಾನ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಟ್ರ್ಯಾಜಿಡಿ ಅನುಭವಿಸಿದ್ದರು. ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ತೊಂದರೆ ಅನುಭವಿಸಿದ್ದರು. ಆ ಬಳಿಕ ಹಿಟ್ ಆ್ಯಂಡ್ ರನ್​ ಕೇಸ್​ನಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೃಷ್ಣ ಮೃಗ ಪ್ರಕರಣದಲ್ಲಿ ಅವರು ಜೈಲಿಗೂ ಹೋಗಿ ಬಂದರು. ಅವರ ಜೀವನದಲ್ಲಿ ಇದು ಕಪ್ಪು ಚುಕ್ಕಿ ಆಗಿ ಉಳಿದುಕೊಂಡಿದೆ. ಪ್ರೀತಿ-ಪ್ರೇಮದ ವಿಚಾರದಲ್ಲೂ ಅವರು ಸಾಕಷ್ಟು ಬಾರಿ ವಿಫಲತೆ ಅನುಭವಿಸಿದ್ದಾರೆ.

ಅರ್ಜುನ್ ಕಪೂರ್

ಅರ್ಜುನ್ ಕಪೂರ್ ಅವರ ತಾಯಿ ಮೃತಪಟ್ಟಾಗ ಸಾಕಷ್ಟು ಬೇಸರಗೊಂಡಿದ್ದರು. ಈ ನೋವು ಅವರನ್ನು ಈಗಲೂ ಕಾಡುತ್ತಿದೆ. ಅರ್ಜುನ್ ಕಪೂರ್ ಮೊದಲ ಸಿನಿಮಾ ಕೂಡ ಆಗ ರಿಲೀಸ್ ಆಗಿರಲಿಲ್ಲ. ಇನ್ನು, ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಜೊತೆ ಸುತ್ತಾಟ ಮಾಡಿ ಅವರು ವಿವಾದ ಸೃಷ್ಟಿಸಿಕೊಂಡಿದ್ದರು.

ಕಂಗನಾ ರಣಾವತ್

ಕಂಗನಾ ರಣಾವತ್ ಅವರ ವಿರುದ್ಧ ನೂರಾರು ಕೇಸ್​ಗಳು ದಾಖಲಾಗಿವೆ. ಇದರಲ್ಲಿ ಕೆಲವೇ ಕೆಲವು ಪ್ರಕರಣಗಳು ಅವರ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಆ ಪೈಕಿ ಹೃತಿಕ್ ರೋಷನ್ ವಿರುದ್ಧದ ಕೇಸ್ ಕೂಡ ಹೌದು. ನಾನು ಹೃತಿಕ್ ಜೊತೆ ಡೇಟ್​ ಮಾಡಿದ್ದೇನೆ ಎಂದಿದ್ದರು. ಆದರೆ, ಇದನ್ನು ಹೃತಿಕ್ ಒಪ್ಪಿರಲಿಲ್ಲ.

ಅಮಿತಾಭ್ ಬಚ್ಚನ್

ನಟ ಅಮಿತಾಭ್ ಬಚ್ಚನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ಆರಂಭಿಸಿದ್ದ ನಿರ್ಮಾಣ ಸಂಸ್ಥೆ ‘ಎಬಿ ಕಾರ್ಪ್ಸ್​’ ಯಶಸ್ಸು ಕಾಣಲೇ ಇಲ್ಲ. ವೃತ್ತಿ ಜೀವನದ ಆರಂಭದಲ್ಲೇ ಇದನ್ನು ಅವರು ಪ್ರಾರಂಭಿಸಿದ್ದರು.

ಶೆಹನಾಜ್ ಗಿಲ್

ಶೆಹನಾಜ್ ಗಿಲ್ ಅವರು ಬಿಗ್ ಬಾಸ್ ಮೂಲಕ ಫೇಮಸ್ ಆದರು. ದೊಡ್ಮನೆಯಲ್ಲಿ ಅವರಿಗೆ ಸಿದ್ದಾರ್ಥ್ ಶುಕ್ಲಾ ಅವರ ಭೇಟಿ ಆಯಿತು. ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಆದರೆ, ಸಿದ್ದಾರ್ಥ್ ಹೃದಯಾಘಾತದಿಂದ ಮೃತಪಟ್ಟರು. ಆ ಬಳಿಕ ಶೆಹನಾಜ್ ಖಿನ್ನತೆಗೆ ಒಳಗಾದರು. ಈಗ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ನಟಿ ಆರಾಧನಾ ಫೋಟೋಗಳು

ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್​ ರಜಪೂತ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸುಶಾಂತ್ ಸಿಂಗ್ ಮೃತಪಡುವುದಕ್ಕೂ ಮೊದಲು ಇಬ್ಬರ ಬ್ರೇಕಪ್ ಆಗಿತ್ತು. ಸುಶಾಂತ್ ಸಾವಿನ ಪ್ರಕರಣದಲ್ಲಿ ಅವರು ತೊಂದರೆ ಅನುಭವಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ