AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಮುಂದಿನ ಚಿತ್ರದಲ್ಲಿ ನೀವು ಆ್ಯಕ್ಷನ್ ನಿರೀಕ್ಷಿಸುವಂತಿಲ್ಲ; ಆದರೂ ಸಿನಿಮಾ ಹಿಟ್ ಆಗೋದು ಪಕ್ಕಾ

ಶಾರುಖ್ ಖಾನ್ ಕೈಯಲ್ಲಿ ಸದ್ಯ ‘ಡಂಕಿ’ ಸಿನಿಮಾ ಇದೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್​ಗೆ ಜೊತೆಯಾಗಿ ತಾಪ್ಸೀ ಪನ್ನು ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಶಾರುಖ್ ಖಾನ್ ಮುಂದಿನ ಚಿತ್ರದಲ್ಲಿ ನೀವು ಆ್ಯಕ್ಷನ್ ನಿರೀಕ್ಷಿಸುವಂತಿಲ್ಲ; ಆದರೂ ಸಿನಿಮಾ ಹಿಟ್ ಆಗೋದು ಪಕ್ಕಾ
ರಾಜ್​ಕುಮಾರ್​ ರಾವ್-ಶಾರುಖ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 12, 2023 | 12:29 PM

Share

ಶಾರುಖ್ ಖಾನ್ ನಟನೆಯ ‘ಪಠಾಣ್’ (Pathan Movie) ಹಾಗೂ ‘ಜವಾನ್’ ಸಿನಿಮಾ ಈ ವರ್ಷ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿವೆ. ‘ಪಠಾಣ್​’ ಸಾವಿರ ಕೋಟಿ ಬಿಸ್ನೆಸ್ ಮಾಡಿದೆ. ‘ಜವಾನ್’ ಸಾವಿರ ಕೋಟಿ ಬಿಸ್ನೆಸ್ ಮಾಡುವತ್ತ ಸಾಗುತ್ತಿದೆ. ಈ ಸಿನಿಮಾ ಮೂಲಕ ಶಾರುಖ್ ಖಾನ್ (Shah Rukh Khan) ಅವರು ಬ್ಯಾಕ್​ ಟು ಬ್ಯಾಕ್ ಯಶಸ್ಸು ಕಂಡಿದ್ದಾರೆ. ಈಗ ಎಲ್ಲರ ಗಮನ ‘ಡಂಕಿ’ ಸಿನಿಮಾ ಮೇಲಿದೆ. ಈ ಚಿತ್ರದಲ್ಲಿ ಅಭಿಮಾನಿಗಳು ಆ್ಯಕ್ಷನ್ ನಿರೀಕ್ಷಿಸೋಕೆ ಸಾಧ್ಯವಿಲ್ಲ. ಆದಾಗ್ಯೂ ಸಿನಿಮಾ ಹಿಟ್ ಆಗೋದು ಪಕ್ಕಾ ಅನ್ನೋದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಆ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.

ಮಸ್ತ್ ಆ್ಯಕ್ಷನ್

ಶಾರುಖ್ ಖಾನ್ ಅವರು ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡವರು. ಅವರಿಗೆ ಆ್ಯಕ್ಷನ್ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಮೂಲಕ ಅವರು ಭರ್ಜರಿ ಆ್ಯಕ್ಷನ್ ಮೆರೆದರು. ಈ ಎರಡೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಶಾರುಖ್ ಅವರಿಗೆ ಆ್ಯಕ್ಷನ್ ಸಿನಿಮಾಗಳು ಸರಿಯಾಗಿ ಹೊಂದುತ್ತವೆ ಎನ್ನುವ ಅಭಿಪ್ರಾಯ ಅಭಿಮಾನಿಗಳ ವಲಯದಲ್ಲಿ ವ್ಯಕ್ತವಾಗಿದೆ. ‘ಪಠಾಣ್’ ಚಿತ್ರದಲ್ಲಿ ಶಾರುಖ್ ಅವರು ಆ್ಯಕ್ಷನ್ ಮೆರೆದಿದ್ದರಿಂದಲೇ ‘ಜವಾನ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತಾಯಿತು. ಅಲ್ಲಿಯೂ ಆ್ಯಕ್ಷನ್ ಇದ್ದಿದ್ದರಿಂದ ಜನರಿಗೆ ಸಿನಿಮಾ ಇಷ್ಟವಾಯಿತು.

ಮುಂದಿನ ಸಿನಿಮಾ ಬಗ್ಗೆ

ಶಾರುಖ್ ಖಾನ್ ಕೈಯಲ್ಲಿ ಸದ್ಯ ‘ಡಂಕಿ’ ಸಿನಿಮಾ ಇದೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್​ಗೆ ಜೊತೆಯಾಗಿ ತಾಪ್ಸೀ ಪನ್ನು ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸದ್ಯ ಭರ್ಜರಿ ನಿರೀಕ್ಷೆ ಇದೆ.

ಆ್ಯಕ್ಷನ್ ಸಿನಿಮಾ ಅನ್ನೋಕಾಗಲ್ಲ

ಎಲ್ಲಾ ನಿರ್ದೇಶಕರದ್ದೂ ಒಂದು ಪ್ಯಾಟರ್ನ್ ಇರುತ್ತದೆ. ರಾಜ್​ಕುಮಾರ್ ಹಿರಾನಿ ಕೂಡ ನಿರ್ದೇಶನದಲ್ಲಿ ತಮ್ಮದೇ ಪ್ಯಾಟರ್ನ್ ಸೆಟ್ ಮಾಡಿಟ್ಟಿದ್ದಾರೆ. ‘ಮುನ್ನಾ ಭಾಯ್ ಎಂಬಿಬಿಎಸ್​’ ಅವರ ನಿರ್ದೇಶನದ ಮೊದಲ ಸಿನಿಮಾ. ಈ ಚಿತ್ರ 2003ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ‘ಲಗೇ ರಹೋ ಮುನ್ನಾ ಭಾಯ್’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಈ ಯಾವ ಸಿನಿಮಾಗಳಲ್ಲೂ ಅವರು ಆ್ಯಕ್ಷನ್ ತೋರಿಸಿಲ್ಲ. ಕಾಮಿಡಿ ಜೊತೆ ಒಂದೊಳ್ಳೆಯ ಸಂದೇಶ ಸಾರುವ ಕೆಲಸ ಮಾಡಿದ್ದಾರೆ. ‘ಡಂಕಿ’ ಚಿತ್ರದಲ್ಲೂ ಅವರು ತಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಾರೆ ಅನ್ನೋದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಸೋಮವಾರವೂ ತಗ್ಗಲಿಲ್ಲ ‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ

ರಾಜ್​ಕುಮಾರ್ ಹಿರಾನಿ ನಿರ್ದೇಶನದ ಎಲ್ಲಾ ಸಿನಿಮಾಗಳು ಕ್ಲಾಸ್ ಸ್ಟೈಲ್​ನಲ್ಲಿ ಮೂಡಿ ಬಂದಿದೆ. ‘ಡಂಕಿ’ ಸಿನಿಮಾ ಕೂಡ ಇದೇ ಸ್ಟೈಲ್​ನಲ್ಲಿ ಮೂಡಿ ಬರುತ್ತದೆ ಅನ್ನೋದು ಅನೇಕರ ಅಭಿಪ್ರಾಯ. ಹೀಗಾಗಿ, ಈ ಚಿತ್ರದಲ್ಲಿ ಆ್ಯಕ್ಷನ್ ಇಲ್ಲದಿದ್ದರೂ ಸಿನಿಮಾ ಹಿಟ್ ಆಗಬಹುದು ಎಂಬುದು ಅನೇಕರ ಲೆಕ್ಕಾಚಾರ.

ರಿಲೀಸ್ ದಿನಾಂಕ

‘ಡಂಕಿ’ ಸಿನಿಮಾದ ಪ್ರೋಮೋ ರಿಲೀಸ್ ಸಂದರ್ಭದಲ್ಲೇ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿತ್ತು. ಕ್ರಿಸ್​ಮಸ್​ ಪ್ರಯುಕ್ತ ಈ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿವೆ ಎಂದು ರಾಜ್​ಕುಮಾರ್ ಹಿರಾನಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಹಲವು ದೊಡ್ಡ ಬಜೆಟ್​ ಚಿತ್ರಗಳು ರಿಲೀಸ್ ಆಗಲಿದೆ. ಅವುಗಳ ವಿರುದ್ಧ ‘ಡಂಕಿ’ ಸೆಣೆಸಬೇಕಿದೆ. ಆ್ಯಕ್ಷನ್ ಅವತಾರದಲ್ಲಿ ಶಾರುಖ್​ನ ಕಣ್ತುಂಬಿಕೊಂಡವರು ಈ ಚಿತ್ರವನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು