AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4ನೇ ದಿನಕ್ಕೆ ‘ಕೆಜಿಎಫ್​ 2’, ‘ಬಾಹುಬಲಿ 2’ ದಾಖಲೆ ಮುರಿದ ‘ಜವಾನ್​’; ಇಲ್ಲಿದೆ ಲೆಕ್ಕಾಚಾರ

ದಕ್ಷಿಣ ಭಾರತದ ‘ಕೆಜಿಎಫ್​ 2’, ‘ಬಾಹುಬಲಿ 2’ ಮುಂತಾದ ಸಿನಿಮಾಗಳು ಹಿಂದಿಗೂ ಡಬ್​ ಆಗಿ ತೆರೆಕಂಡು ಉತ್ತಮವಾಗಿ ಕಮಾಯಿ ಮಾಡಿದ್ದವು. ಆ ಚಿತ್ರಗಳ ಗಳಿಕೆಗೆ ಹೋಲಿಸಿದರೆ ‘ಜವಾನ್​’ ಸಿನಿಮಾ ಬಹಳ ವೇಗವಾಗಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ. ಈ ವಿಚಾರದಲ್ಲಿ ಶಾರುಖ್​ ಖಾನ್​ ಅವರು ಹೊಸ ದಾಖಲೆ ಬರೆದಿದ್ದಾರೆ.

4ನೇ ದಿನಕ್ಕೆ ‘ಕೆಜಿಎಫ್​ 2’, ‘ಬಾಹುಬಲಿ 2’ ದಾಖಲೆ ಮುರಿದ ‘ಜವಾನ್​’; ಇಲ್ಲಿದೆ ಲೆಕ್ಕಾಚಾರ
ಶಾರುಖ್​ ಖಾನ್​, ಯಶ್​, ಪ್ರಭಾಸ್​​
ಮದನ್​ ಕುಮಾರ್​
|

Updated on: Sep 12, 2023 | 11:16 AM

Share

ಗಲ್ಲಾಪೆಟ್ಟಿಗೆಯಲ್ಲಿ ‘ಜವಾನ್​’ ಸಿನಿಮಾ (Jawan Movie) ಅಬ್ಬರಿಸುತ್ತಿದೆ. ಈ ಸಿನಿಮಾದ ಕ್ರೇಜ್​ನಿಂದ ಅನೇಕ ಚಿತ್ರಗಳ ದಾಖಲೆಗಳು ಪುಡಿ ಆಗುತ್ತಿವೆ. ಸೆಪ್ಟೆಂಬರ್​ 7ರಂದು ‘ಜವಾನ್’ ಬಿಡುಗಡೆ ಆಯಿತು. ಶಾರುಖ್​ ಖಾನ್​ (Shah Rukh Khan) ಅಭಿಮಾನಿಗಳು ಈ ಸಿನಿಮಾಗೆ ದೊಡ್ಡ ಮಟ್ಟದ ಓಪನಿಂಗ್​ ನೀಡಿದರು. ಅಂದಿನಿಂದ ಪ್ರತಿದಿನವೂ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ (Jawan Box Office Collection) ವಿಚಾರದಲ್ಲಿ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ​ಅಚ್ಚರಿ ಎಂದರೆ ಅತಿ ವೇಗವಾಗಿ 250 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್​’ ಪಾತ್ರವಾಗಿದೆ. ಈ ವಿಚಾರದಲ್ಲಿ ‘ಕೆಜಿಎಫ್​ 2’ ಮತ್ತು ‘ಬಾಹುಬಲಿ 2’ ಸಿನಿಮಾದ ಹಿಂದಿ ವರ್ಷನ್​ ಅನ್ನು ‘ಜವಾನ್​’ ಮೀರಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದಕ್ಷಿಣ ಭಾರತದ ‘ಕೆಜಿಎಫ್​ 2’, ‘ಬಾಹುಬಲಿ 2’ ಮುಂತಾದ ಸಿನಿಮಾಗಳು ಹಿಂದಿಗೂ ಡಬ್​ ಆಗಿ ತೆರೆಕಂಡು ಉತ್ತಮವಾಗಿ ಕಮಾಯಿ ಮಾಡಿದ್ದವು. ಆ ಚಿತ್ರಗಳ ಗಳಿಕೆಗೆ ಹೋಲಿಸಿದರೆ ‘ಜವಾನ್​’ ಸಿನಿಮಾ ಬಹಳ ವೇಗವಾಗಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ. ಈ ವಿಚಾರದಲ್ಲಿ ಶಾರುಖ್​ ಖಾನ್​ ಅವರು ಹೊಸ ದಾಖಲೆ ಬರೆದಿದ್ದಾರೆ. ಹಿಂದಿ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಗಳಿಸಲು ‘ಕೆಜಿಎಫ್​ 2’ ಸಿನಿಮಾ 7 ದಿನಗಳನ್ನು ತೆಗೆದುಕೊಂಡಿತ್ತು. ‘ಬಾಹುಬಲಿ 2’ ಸಿನಿಮಾಗೆ 8 ದಿನ ಹಿಡಿದಿತ್ತು. ಆದರೆ ‘ಜವಾನ್​’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಅತಿವೇಗವಾಗಿ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಸಿನಿಮಾಗಳು:

‘ಜವಾನ್​’ – 4ನೇ ದಿನ ‘ಪಠಾಣ್’​ – 5ನೇ ದಿನ ‘ಗದರ್​ 2’ – 6ನೇ ದಿನ ‘ಕೆಜಿಎಫ್​ 2’- 7ನೇ ದಿನ ‘ಬಾಹುಬಲಿ 2’- 8ನೇ ದಿನ ‘ದಂಗಲ್​’ – 10ನೇ ದಿನ ‘ಸಂಜು’ – 10ನೇ ದಿನ ‘ಟೈಗರ್​ ಜಿಂದಾ ಹೈ’ – 10ನೇ ದಿನ

ಇದನ್ನೂ ಓದಿ: ಸೋಮವಾರವೂ ತಗ್ಗಲಿಲ್ಲ ‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ

‘ಜವಾನ್​’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಜೊತೆ ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ, ಸುನಿಲ್​ ಗ್ರೋವರ್​, ಸಂಜಯ್​ ದತ್​, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ್​ ರವಿಚಂದರ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವಾದ್ಯಂತ ಹಿಂದಿ, ತಮಿಳು, ತೆಲುಗು ವರ್ಷನ್​ ಸೇರಿ ಈ ಸಿನಿಮಾಗೆ ನಾಲ್ಕು ದಿನದಲ್ಲಿ 520 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್