Vijay Devarakonda: ಏಕಕಾಲಕ್ಕೆ ಮೂರು ಸಿನಿಮಾಗಳಲ್ಲಿ ಬ್ಯುಸಿ ಆದ ಟಾಲಿವುಡ್​ ನಟ ವಿಜಯ್​ ದೇವರಕೊಂಡ

Vijay Devarakonda Movies: ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ವಿಜಯ್​ ದೇವರಕೊಂಡ ಅವರು ಫಾಸ್ಟ್​ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ಮತ್ತೊಂದು ಸಿನಿಮಾಗೆ ಮುಹೂರ್ತ ಮಾಡಲಾಯಿತು.

Vijay Devarakonda: ಏಕಕಾಲಕ್ಕೆ ಮೂರು ಸಿನಿಮಾಗಳಲ್ಲಿ ಬ್ಯುಸಿ ಆದ ಟಾಲಿವುಡ್​ ನಟ ವಿಜಯ್​ ದೇವರಕೊಂಡ
ವಿಜಯ್​ ದೇವರಕೊಂಡ

Updated on: Jun 21, 2023 | 12:56 PM

ಟಾಲಿವುಡ್​ನಲ್ಲಿ (Tollywood) ನಟ ವಿಜಯ್​ ದೇವರಕೊಂಡ ಅವರು ಸಖತ್​ ಬ್ಯುಸಿ ಆಗಿದ್ದಾರೆ. ನಿರೀಕ್ಷಿಸಿದಂತೆ ಆಗಿದ್ದರೆ ಅವರು ‘ಲೈಗರ್​’ ಸಿನಿಮಾದಿಂದ ದೊಡ್ಡ ಗೆಲುವು ಪಡೆಯಬೇಕಿತ್ತು. ಆದರೆ ಆ ಸಿನಿಮಾ ಹೀನಾಯವಾಗಿ ಸೋತಿತು. ಹಾಗಂತ ವಿಜಯ್​ ದೇವರಕೊಂಡ (Vijay Devarakonda) ಅವರ ವೇಗಕ್ಕೆ ಪೆಟ್ಟು ಬಿದ್ದಿಲ್ಲ. ಅವರೀಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ವಿಶೇಷ ಏನೆಂದರೆ ಏಕಕಾಲಕ್ಕೆ ಅವರು ಮೂರು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯ್​ ದೇವರಕೊಂಡ ಅವರ ಸಿನಿಮಾಗಳು (Vijay Devarakonda Movies) ಒಂದರಹಿಂದೊಂದು ತೆರೆಕಾಣಲಿದೆ. ಪ್ರತಿ ಬಾರಿಯೂ ಅವರು ಬೇರೆ ಬೇರೆ ರೀತಿಯ ಸ್ಕ್ರಿಪ್ಟ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಅಭಿಮಾನಿಗಳಿಗೆ ಬಗೆಬಗೆಯ ಮನರಂಜನೆ ಸಿಗಲಿದೆ.

ಸಮಂತಾ ರುತ್​ ಪ್ರಭು ಜೊತೆ ವಿಜಯ್​ ದೇವರಕೊಂಡ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕಾರಣಾಂತರಗಳಿಂದ ತಡ ಆಗಿದ್ದವು. ಸಮಂತಾ ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಕೆಲವು ದಿನಗಳ ಕಾಲ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿತ್ತು. ನಂತರ ಸಮಂತಾ ಅವರು ಚೇತರಿಸಿಕೊಂಡು ಬಂದ ಬಳಿಕ ಚಿತ್ರೀಕರಣಕ್ಕೆ ಚುರುಕು ಮುಟ್ಟಿಸಲಾಯಿತು. ಈಗ ಈ ಸಿನಿಮಾಗೆ ಕೊನೇ ಹಂತದ ಶೂಟಿಂಗ್​ ನಡೆಯುತ್ತಿದೆ.

ಇದನ್ನೂ ಓದಿ: Samantha: ‘ನನ್ನ ಮೆಚ್ಚಿನ ಹುಡುಗಿ ಸಮಂತಾ’: ಕಡೆಗೂ ಬಹಿರಂಗವಾಗಿ ಒಪ್ಪಿಕೊಂಡ ವಿಜಯ್​ ದೇವರಕೊಂಡ

ನಿರ್ದೇಶಕ ಗೌತಮ್​ ತಿನ್ನನುರಿ ಅವರ ಜೊತೆ ವಿಜಯ್​ ದೇವರಕೊಂಡ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾಗೆ ಕೆಲವೇ ದಿನಗಳ ಹಿಂದೆ ಚಾಲನೆ ಸಿಕ್ಕಿತು. ಈ ಚಿತ್ರದಲ್ಲಿ ವಿಜಯ್​ ದೇವರಕೊಂಡ ಮತ್ತು ಶ್ರೀಲೀಲಾ ಅವರು ಜೋಡಿಯಾಗಿ ನಟಿಸಲಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ವಿಜಯ್​ ದೇವರಕೊಂಡ ಮತ್ತು ಶ್ರೀಲೀಲಾ ಅವರನ್ನು ತೆರೆ ಮೇಲೆ ಜೋಡಿಯಾಗಿ ನೋಡಲು ಫ್ಯಾನ್ಸ್​ ಕಾತುರರಾಗಿದ್ದಾರೆ.

ಇದನ್ನೂ ಓದಿ: Vijay Deverakonda: ಸಮಂತಾ-ವಿಜಯ್​ ದೇವರಕೊಂಡ ನಡುವೆ ಆಪ್ತತೆ ಹೆಚ್ಚಿದ್ದಕ್ಕೆ ಈ ಫೋಟೋಗಳೇ ಸಾಕ್ಷಿ

ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ವಿಜಯ್​ ದೇವರಕೊಂಡ ಅವರು ಫಾಸ್ಟ್​ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ಮತ್ತೊಂದು ಸಿನಿಮಾಗೆ ಮುಹೂರ್ತ ಮಾಡಲಾಯಿತು. ಆ ಚಿತ್ರಕ್ಕೆ ಪರಶುರಾಮ್​ ನಿರ್ದೇಶನ ಮಾಡಲಿದ್ದಾರೆ. ದಿಲ್​ ರಾಜು ಅವರು ನಿರ್ಮಾಣದ ಹೊಣೆ ಹೊತ್ತಿದ್ದು ವಿಜಯ್​ ದೇವರಕೊಂಡ ಅವರಿಗೆ ನಾಯಕಿಯಾಗಿ ಮೃಣಾಲ್​ ಠಾಕೂರ್​ ಅವರು ನಟಿಸಲಿದ್ದಾರೆ. ಇವರಿಬ್ಬರ ಕಾಂಬಿನೇಷನ್​ ಮೇಲೆ ನಿರೀಕ್ಷೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us