Samantha: ‘ನನ್ನ ಮೆಚ್ಚಿನ ಹುಡುಗಿ ಸಮಂತಾ’: ಕಡೆಗೂ ಬಹಿರಂಗವಾಗಿ ಒಪ್ಪಿಕೊಂಡ ವಿಜಯ್​ ದೇವರಕೊಂಡ

​Vijay Deverakonda: ರೆಸ್ಟೋರೆಂಟ್​ಗೆ ತೆರಳಿದ ಸಮಂತಾ ರುತ್​ ಪ್ರಭು ಅವರು ವಿಜಯ್​ ದೇವರಕೊಂಡ ಪಕ್ಕದಲ್ಲಿ ಕುಳಿತಿದ್ದಾರೆ. ಇಬ್ಬರೂ ಖುಷಿಯಾಗಿ ಫೋಟೋಗೆ ಪೋಸ್​ ನೀಡಿದ್ದಾರೆ.

Samantha: ‘ನನ್ನ ಮೆಚ್ಚಿನ ಹುಡುಗಿ ಸಮಂತಾ’: ಕಡೆಗೂ ಬಹಿರಂಗವಾಗಿ ಒಪ್ಪಿಕೊಂಡ ವಿಜಯ್​ ದೇವರಕೊಂಡ
ವಿಜಯ್​ ದೇವರಕೊಂಡ, ಸಮಂತಾ
Follow us
ಮದನ್​ ಕುಮಾರ್​
|

Updated on: Jun 01, 2023 | 7:04 PM

ಟಾಲಿವುಡ್​ ಅಂಗಳದಲ್ಲಿ ಸಮಂತಾ ರುತ್​ ಪ್ರಭು (​Samantha Ruth Prabhu) ಮತ್ತು ವಿಜಯ್​ ದೇವರಕೊಂಡ ಬಗ್ಗೆ ಸಾಕಷ್ಟು ವಿಷಯಗಳು ಹರಿದಾಡುತ್ತಿವೆ. ಇಬ್ಬರ ಮಧ್ಯೆ ದಿನದಿಂದ ದಿನಕ್ಕೆ ಆಪ್ತತೆ ಹೆಚ್ಚುತ್ತಿದೆ. ಈ ಹಿಂದೆ ‘ಮಹಾನಟಿ’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ಈಗ ‘ಖುಷಿ’ ಚಿತ್ರದಲ್ಲಿ ಮತ್ತೆ ಒಟ್ಟಾಗಿ ಕ್ಯಾಮೆರಾ ಎದುರಿಸುತ್ತಿದ್ದಾರೆ. ‘ಖುಷಿ’ (​Kushi Movie) ಶೂಟಿಂಗ್​ ಆರಂಭವಾದ ಬಳಿಕ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರ ನಡುವೆ ಒಡನಾಟ ಹೆಚ್ಚಾಗಿದೆ. ಶೂಟಿಂಗ್ ಬಿಡುವಿನಲ್ಲೂ ಈ ಜೋಡಿ ಒಟ್ಟಿಗೆ ಕಾಲ ಕಳೆಯುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದೂ ಸಾಲದೆಂಬಂತೆ, ‘ನನ್ನ ಮೆಚ್ಚಿನ ಹುಡುಗಿ’ ಎಂದು ವಿಜಯ್​ ದೇವರಕೊಂಡ (​Vijay Deverakonda) ಅವರು ಓಪನ್​ ಆಗಿಯೇ ಹೇಳಿದ್ದಾರೆ. ಇಬ್ಬರ ನಡುವಿನ ಸ್ನೇಹದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಹೊಸ ಚರ್ಚೆ ಆರಂಭ ಆಗಿದೆ. ಇಬ್ಬರ ಹೊಸ ಫೋಟೋ ಸಖತ್​ ವೈರಲ್​ ಆಗಿದೆ.

ಸಮಂತಾ ರುತ್​ ಪ್ರಭು ಅವರು ಇತ್ತೀಚೆಗೆ ‘ಖುಷಿ’ ಚಿತ್ರತಂಡದ ಜೊತೆ ಊಟ ಮಾಡಿದ್ದಾರೆ. ರೆಸ್ಟೋರೆಂಟ್​ಗೆ ತೆರಳಿದ ಅವರು ವಿಜಯ್​ ದೇವರಕೊಂಡ ಪಕ್ಕದಲ್ಲಿ ಕುಳಿತಿದ್ದಾರೆ. ಇಬ್ಬರೂ ಖುಷಿಯಾಗಿ ಫೋಟೋಗೆ ಪೋಸ್​ ನೀಡಿದ್ದಾರೆ. ಆ ಫೋಟೋ ಜೊತೆಯಲ್ಲಿ ಸಮಂತಾ ಬರೆದ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ಕೆಲವು ಸ್ನೇಹಿತರು ನಿಮ್ಮ ಕೆಟ್ಟದ್ದನ್ನು, ಒಳ್ಳೆಯದನ್ನು ನೋಡುತ್ತಾರೆ, ನಿಮ್ಮ ಜೀವನದ ಏಳು-ಬೀಳುಗಳನ್ನು ನೋಡುತ್ತಾರೆ, ನೀವು ಮುಂದೆ ಬರುವುದನ್ನು ನೋಡುತ್ತಾರೆ, ನೀವು ಹಿಂದುಳಿಯುವುದನ್ನೂ ನೋಡುತ್ತಾರೆ. ಸ್ನೇಹಿತರು ನಿಮ್ಮ ಜೊತೆಗೆ ಇರುತ್ತಾರೆ. ಇದು ಎಂಥಾ ವರ್ಷವಾಗಿತ್ತು’ ಎಂದು ಸಮಂತಾ ಬರೆದುಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಸಮಂತಾ ಅವರು ಹಂಚಿಕೊಂಡ ಈ ಫೋಟೋವನ್ನು ವಿಜಯ್​ ದೇವರಕೊಂಡ ಅವರು ರೀಲ್ಸ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದರ ಜೊತೆ ‘ನನ್ನ ಮೆಚ್ಚಿನ ಹುಡುಗಿ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಇವರಿಬ್ಬರದ್ದು ಕ್ಯೂಟ್​ ಜೋಡಿ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ಅವರು ಒಂಟಿಯಾಗಿದ್ದಾರೆ. ಮರು ಮದುವೆ ಬಗ್ಗೆ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಸದ್ಯಕ್ಕೆ ಸ್ನೇಹಿತರ ಜೊತೆ ಕಾಲ ಕಳೆಯುತ್ತ, ಸಿನಿಮಾದ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ.

ಇದನ್ನೂ ಓದಿ: Samantha: ಸಮಂತಾ ನಟನೆಯ ಇಂಗ್ಲಿಷ್​ ಸಿನಿಮಾಗೆ ‘ಚೆನ್ನೈ ಸ್ಟೋರೀಸ್​’ ಶೀರ್ಷಿಕೆ? ಶೀಘ್ರದಲ್ಲೇ ಶುರುವಾಗಲಿದೆ ಶೂಟಿಂಗ್​

ಸಮಂತಾ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. ‘ಖುಷಿ’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಹಿಂದೆ ಸಮಂತಾಗೆ ಅನಾರೋಗ್ಯ ಉಂಟಾಗಿದ್ದಾಗ ಈ ಚಿತ್ರದ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಈಗ ಈ ಚಿತ್ರದ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಸೆಪ್ಟೆಂಬರ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದಲ್ಲದೇ, ‘ಸಿಟಾಡೆಲ್​’ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ಕೂಡ ಸಮಂತಾ ನಟಿಸುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಹಲವು ಆಫರ್​ಗಳು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ