AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಸಮಂತಾ ನಟನೆಯ ಇಂಗ್ಲಿಷ್​ ಸಿನಿಮಾಗೆ ‘ಚೆನ್ನೈ ಸ್ಟೋರೀಸ್​’ ಶೀರ್ಷಿಕೆ? ಶೀಘ್ರದಲ್ಲೇ ಶುರುವಾಗಲಿದೆ ಶೂಟಿಂಗ್​

Chennai Stories: ಶೀರ್ಷಿಕೇ ಸೂಚಿಸುವಂತೆ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇಂಗ್ಲೆಂಡ್​ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು.

Samantha: ಸಮಂತಾ ನಟನೆಯ ಇಂಗ್ಲಿಷ್​ ಸಿನಿಮಾಗೆ ‘ಚೆನ್ನೈ ಸ್ಟೋರೀಸ್​’ ಶೀರ್ಷಿಕೆ? ಶೀಘ್ರದಲ್ಲೇ ಶುರುವಾಗಲಿದೆ ಶೂಟಿಂಗ್​
ಸಮಂತಾ
Follow us
ಮದನ್​ ಕುಮಾರ್​
|

Updated on: May 31, 2023 | 1:14 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಭಾರತದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಮೂಲಕ ಅವರು ಹಿಂದಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ‘ಪುಷ್ಪ’ ಸಿನಿಮಾದ ಹಾಡಿನಲ್ಲಿ ಐಟಂ ಡ್ಯಾನ್ಸ್​ ಮಾಡಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿದ್ದಾರೆ. ಈಗ ಅವರು ಇಂಗ್ಲಿಷ್​ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆ ಚಿತ್ರಕ್ಕೆ ‘ಚೆನ್ನೈ ಸ್ಟೋರೀಸ್​’ (Chennai Stories) ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಶೀರ್ಷಿಕೇ ಸೂಚಿಸುವಂತೆ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇಂಗ್ಲೆಂಡ್​ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಸಿನಿಮಾದ ಕಥೆ ಬಗ್ಗೆಯೂ ಮಾಹಿತಿ ಕೇಳಿಬಂದಿದೆ.

ಈ ಸಿನಿಮಾದ ಕಥೆ ಏನು?

‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಕಾದಂಬರಿ ಆಧರಿಸಿ ‘ಚೆನ್ನೈ ಸ್ಟೋರೀಸ್​’ ಸಿನಿಮಾ ತಯಾರಾಗಲಿದೆ. ಇಂಗ್ಲಿಷ್​ ಮತ್ತು ತಮಿಳಿನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ತಾಯಿ ಸತ್ತ ಬಳಿಕ ವಿದೇಶದಿಂದ ಚೆನ್ನೈಗೆ ಬಂದು ತನ್ನ ತಂದೆಯನ್ನು ಹುಡುಕುವ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಆ ವ್ಯಕ್ತಿಗೆ ಸಹಾಯ ಮಾಡುವ ಡಿಟೆಕ್ಟೀವ್​ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Citadel: ಸಮಂತಾ-ವರುಣ್​ ಧವನ್​ ಮಧ್ಯೆ ಅಂಥದ್ದೇನೂ ಆಗಿಲ್ವಾ? ನೆಟ್ಟಿಗರ ಅನುಮಾನಕ್ಕೆ ಸಿಕ್ತು ಉತ್ತರ

ವೈಯಕ್ತಿಕ ಜೀವನದ ಕಾರಣದಿಂದಲೂ ಸಮಂತಾ ಅವರು ಆಗಾಗ ಸುದ್ದಿ ಆಗುತ್ತಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ ಬಳಿಕ ಒಂಟಿಯಾಗಿ ಬದುಕುತ್ತಿದ್ದಾರೆ. ವಿಚ್ಛೇದನ ಪಡೆದ ಅವರು ಸಂಪೂರ್ಣವಾಗಿ ಸಿನಿಮಾ ಮತ್ತು ವೆಬ್​ ಸಿರೀಸ್​ ಕಡೆಗೆ ಗಮನ ಹರಿಸಿದ್ದಾರೆ. ಹಲವು ವರ್ಷ ಪ್ರೀತಿಸಿ ಮದುವೆಯಾದ ಅವರು ಡಿವೋರ್ಸ್​ ಪಡೆಯುವಂತಾಗಿದ್ದು ಬೇಸರದ ಸಂಗತಿ. ಹಾಗಿದ್ದರೂ ಕೂಡ ಸಮಂತಾಗೆ ಮದುವೆ ಬಗ್ಗೆ ನಂಬಿಕೆ ಕಡಿಮೆ ಆಗಿಲ್ಲ ಎಂಬುದು ಗಮನಿಸಬೇಕಾದ ವಿಷಯ. ಹಾಗಂತ ಅವರೀಗ ಮರು ಮದುವೆ ಆಗಲು ಸಿದ್ಧರಿಲ್ಲ. ತಮ್ಮ ಸ್ನೇಹಿತರೊಬ್ಬರ ವಿವಾಹಕ್ಕಾಗಿ ಹೆಣ್ಣು ಹುಡುಕುತ್ತಿದ್ದಾರೆ! ಮದುವೆ ಎಂಬ ಕಾನ್ಸೆಪ್ಟ್​ ಬಗ್ಗೆ ಅವರಿಗೆ ಈಗಲೂ ನಂಬಿಕೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಇದನ್ನೂ ಓದಿ: ಸಮಂತಾ ನಂಬಿ ಪೂಜಿಸುವ ದೇವರು ಯಾವುದು? ಏನು ಈ ದೇವಿಯ ಮಹಿಮೆ?

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಡಾಕ್ಟರ್​ ಜ್ವೆಲ್​ ಗಮಾಡಿಯಾ ಅವರ ಬಳಿ ತೆರಳುತ್ತಾರೆ. ಅನುಷ್ಕಾ ಶರ್ಮಾ, ಅಜಯ್​ ದೇವಗನ್​, ಕತ್ರಿನಾ ಕೈಫ್​ ಮುಂತಾದವರಿಗೆ ಅವರು ಟ್ರೀಟ್​ಮೆಂಟ್​ ನೀಡಿದ್ದಾರೆ. ಈಗ ಸಮಂತಾ ರುತ್​ ಪ್ರಭು ಕೂಡ ಜ್ವೆಲ್​ ಗಮಾಡಿಯಾ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ‘ಇವರಿಗೆ ಒಂದು ಜೋಡಿ ಹುಡುಕುತ್ತಿದ್ದೇನೆ. ಇವರು ತುಂಬ ಸ್ಮಾರ್ಟ್​ ಆಗಿದ್ದಾರೆ’ ಎಂದು ಸಮಂತಾ ಅವರು ಡಾಕ್ಟರ್​ ಜ್ವೆಲ್​ ಗಮಾಡಿಯಾ ಫೋಟೋಗೆ ಕ್ಯಾಪ್ಷನ್​ ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.