Pushpa 2: ‘ಪುಷ್ಪ 2’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡೋದು ಯಾರು? ಸಮಂತಾ ಬದಲು ಬೇರೆ ನಟಿಗೆ ಚಿತ್ರತಂಡ ಮಣೆ

‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಸೀಕ್ವೆಲ್​ ಮೇಲೆ ನಿರೀಕ್ಷೆ ಜೋರಾಗಿದೆ. ದೊಡ್ಡ ಮಟ್ಟದಲ್ಲಿಯೇ ‘ಪುಷ್ಪ 2’ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

Pushpa 2: ‘ಪುಷ್ಪ 2’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡೋದು ಯಾರು? ಸಮಂತಾ ಬದಲು ಬೇರೆ ನಟಿಗೆ ಚಿತ್ರತಂಡ ಮಣೆ
ಸಮಂತಾ
TV9kannada Web Team

| Edited By: Madan Kumar

Sep 29, 2022 | 7:30 AM

ಸುಕುಮಾರ್​ ನಿರ್ದೇಶನದ ‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಸಿನಿಮಾದ ಗೆಲುವಿನಲ್ಲಿ ಹಾಡುಗಳಿಗೂ ಹೆಚ್ಚಿನ ಕ್ರಿಡಿಟ್​ ಸಲ್ಲಬೇಕು. ಅದರಲ್ಲೂ ಸಮಂತಾ ರುತ್​ ಪ್ರಭು (Samantha) ನಟಿಸಿದ್ದ ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಸಿಕ್ಕಾಪಟ್ಟೆ ಧೂಳೆಬ್ಬಿಸಿತು. ಯೂಟ್ಯೂಬ್​ನಲ್ಲಿ ಈ ಗೀತೆ ಹಲವು ದಾಖಲೆಗಳನ್ನು ಬರೆದಿದೆ. ಅಲ್ಲು ಅರ್ಜುನ್​ ಮತ್ತು ಸಮಂತಾ ಅವರು ಕುಣಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದು ಗೊತ್ತೇ ಇದೆ. ಈಗ ‘ಪುಷ್ಪ 2’ (Pushpa 2) ಸಿನಿಮಾ ಸೆಟ್ಟೇರಿದೆ. ಈ ಸೀಕ್ವೆಲ್​ನಲ್ಲಿಯೂ ಒಂದು ಭರ್ಜರಿಯಾದ ಐಟಂ ಸಾಂಗ್ ಇರುವುದು ಖಚಿತ. ಆದರೆ ಅದರಲ್ಲಿ ನಟಿಸುವುದು ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ಸಮಂತಾ ಬದಲು ಕಾಜಲ್​ ಅಗರ್​ವಾಲ್​ (Kajal Aggarwal) ಅವರ ಹೆಸರು ಜಾಲ್ತಿಗೆ ಬಂದಿದೆ.

‘ಪುಷ್ಪ 2’ ಸಿನಿಮಾದಲ್ಲಿ ಯಾರು ಐಟಂ ಡ್ಯಾನ್ಸ್​ ಮಾಡುತ್ತಾರೆ ಎಂಬ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಗಾಸಿಪ್​ ಮಂದಿ ಮಾತ್ರ ಕಾಜಲ್​ ಅಗರ್​ವಾಲ್​ ಕಡೆಗೆ ಕೈ ತೋರಿಸುತ್ತಿದ್ದಾರೆ. ಮೊದಲ ಮಗುವಿಗೆ ಜನ್ಮ ನೀಡಿರುವ ಕಾಜಲ್​ ಅವರು ಬಣ್ಣದ ಲೋಕಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ. ಅವರಿಗೆ ‘ಪುಷ್ಪ 2’ ಚಿತ್ರತಂಡ ಆಫರ್​ ನೀಡಿದೆ ಎಂದೆಲ್ಲ ಗುಸುಗುಸು ಹರಿದಾಡುತ್ತಿದೆ.

‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಗಿದ್ದರಿಂದ ಸೀಕ್ವೆಲ್​ ಮೇಲೆ ನಿರೀಕ್ಷೆ ಜೋರಾಗಿದೆ. ದೊಡ್ಡ ಮಟ್ಟದಲ್ಲಿಯೇ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ನಿರ್ದೇಶಕ ಸುಕುಮಾರ್​ ಅವರು ಸ್ಕ್ರಿಪ್ಟ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಮಾತಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ಮುಂದುವರಿದಿದ್ದಾರೆ. ರಕ್ತ ಚಂದನ ಕಳ್ಳ ಸಾಗಾಣಿಕೆಯ ಕಥೆಯಲ್ಲಿ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾತುರರಾಗಿದ್ದಾರೆ.

ಅಕ್ಟೋಬರ್​ 1ರಂದು ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಹೇಳಿಕೆ ಪ್ರಕಟ ಆಗಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಚಿತ್ರದ ಶೂಟಿಂಗ್​ ಮತ್ತೆ ಮುಂದೂಡಿಕೆ ಆಗಿರಬಹುದೇ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರ ಲುಕ್​ ಬದಲಾಗಲಿದೆ ಎಂಬ ಸುದ್ದಿ ಕೂಡ ಇದೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಡಾಲಿ ಧನಂಜಯ್​, ಫಹಾದ್ ಫಾಸಿಲ್​ ಮುಂತಾದ ಘಟಾನುಘಟಿ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಆ ಕಾರಣದಿಂದಲೂ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada