AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ನಂಬಿ ಪೂಜಿಸುವ ದೇವರು ಯಾವುದು? ಏನು ಈ ದೇವಿಯ ಮಹಿಮೆ?

Samantha: ಮಾಸಿಕ, ದಹಿಕ ಆರೋಗ್ಯ ತೀವ್ರ ಹದಗೆಟ್ಟು ಜೀವನದಲ್ಲಿ ಇನ್ನು ಮೇಲೆ ಬರಲಾಗುವುದೇ ಇಲ್ಲವೇನೋ ಎಂಬ ಸ್ಥಿತಿಗೆ ತಲುಪಿದ್ದ ಸಮಂತಾರಿಗೆ ಜೀವನೋತ್ಸಾಹ ತುಂಬಿದ್ದು ದೇವಿಯ ಆರಾಧನೆ. ಯಾರಾ ದೇವಿ? ಏನು ಆಕೆಯ ಮಹಿಮೆ?

ಸಮಂತಾ ನಂಬಿ ಪೂಜಿಸುವ ದೇವರು ಯಾವುದು? ಏನು ಈ ದೇವಿಯ ಮಹಿಮೆ?
ಸಮಂತಾ
ಮಂಜುನಾಥ ಸಿ.
|

Updated on: May 18, 2023 | 6:26 PM

Share

ಕಳೆದ ಕೆಲ ವರ್ಷಗಳಲ್ಲಿ ಖಾಸಗಿ ಜೀವನದಲ್ಲಿ ಸಾಕಷ್ಟು ನೋವುಗಳನ್ನುಂಡವರು ಸಮಂತಾ (Samantha). ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಮಂತಾಗೆ ದೈಹಿಕ ಆರೋಗ್ಯ ಸಮಸ್ಯೆಗಳು ಸಹ ಒಂದರ ಬಳಿಕ ಒಂದರಂತೆ ಕಾಡಿದವು. ವಿಚ್ಛೇದನದ ಬಳಿಕವಂತೂ ಸಮಂತಾ ಇನ್ನು ಮೇಲೇರಲಾರರು ಎಂದೇ ಹಲವು ಸಿನಿಮಾ ಮಂದಿ ಎಣಿಸಿದ್ದರು. ಆದರೆ ಹಲವರಿಗೆ ಆಶ್ಚರ್ಯ ಮೂಡಿಸುವಂತೆ ಹಿಂದಿನಕ್ಕಿಂತಲೂ ಗಟ್ಟಿಯಾಗಿ ಅವರು ಮೇಲೆದ್ದು ಬಂದರು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯದಲ್ಲಿ ಹಿಂದಿಗಿಂತಲೂ ಗಟ್ಟಿಯಾಗಿದ್ದಾರೆ. ವೃತ್ತಿಯಲ್ಲಿ ಸಹ ಏರುಗತಿಯಲ್ಲಿದ್ದಾರೆ. ಇದಕ್ಕೆ ಸಮಂತಾರ ಸ್ವಪ್ರಯತ್ನವೇ ಕಾರಣವಾದರೂ ಆ ಸ್ವಪ್ರಯತ್ನಕ್ಕೆ ಪ್ರೇರಣೆ ಒದಗಿಸಿದ್ದು ಭಕ್ತಿ! ಸಮಂತಾ ನಂಬಿದ್ದ ದೇವರು (God). ಸಮಂತಾ ನಂಬಿರುವ ದೇವರು ಪವಾಡಗಳನ್ನು ಮಾಡುವ, ವರಗಳನ್ನು ಕರುಣಿಸುವ ದೇವರಲ್ಲ ಬದಲಿಗೆ ಅಂತಃಶಕ್ತಿ ತುಂಬುವ ದೇವರು.

ಸಮಂತಾ, ಲಿಂಗ ಭೈರವಿ ದೇವಿಯ ಆರಾಧಕಿ. ತಮ್ಮ ಮನೆಯಲ್ಲಿಯೇ ಸಣ್ಣ ಗುಡಿ ಕಟ್ಟಿ ಲಿಂಗ ಭೈರವಿಯನ್ನು ಪ್ರತಿಷ್ಠಾಪನೆ ಮಾಡಿ ಪ್ರತಿದಿನವೂ ದೇವಿಯ ಆರಾಧನೆ ಮಾಡುತ್ತಾರೆ. ದೇವರ ಮುಂದೆ ಕೂತು ಧ್ಯಾನಸ್ತರಾಗುತ್ತಾರೆ. ದೇವಿಯ ಸ್ತೋತ್ರಗಳನ್ನು ಪಠಿಸಿ ಆನಂದ ಪಡೆಯುತ್ತಾರೆ, ಬದುಕನ್ನು ತಮಗೆ ಸರಿಎನಿಸಿದಂತೆ ಬದುಕಲು ಪ್ರೇರಣೆ ಪಡೆಯುತ್ತಾರೆ.

ಲಿಂಗ ಭೈರವಿ ದೇವಿ ಸಾಂಪ್ರದಾಯಿಕ ದೇವರುಗಳಂತಲ್ಲ. ದೈವಿಕ ಸ್ತೀತ್ವವನ್ನು ಲಿಂಗದ ರೂಪದಲ್ಲಿ ಪೂಜಿಸುವುದೇ ಲಿಂಗ ಭೈರವಿಯ ಆರಾಧನೆಯ ಉದ್ದೇಶ. ಭೈರವಿ ದೇವಿಯ ಲಿಂಗದ ರೂಪವೆಂದೂ ಹೇಳಬಹುದು. ಲಿಂಗದ ರೂಪದಲ್ಲಿನ ಏಕೈಕ ದೇವಿ ಎಂದೂ ಹೇಳಬಹುದು. ಲಿಂಗ ಭೈರವಿ ದೇವಿಯ ರೂಪ ಅನೂಹ್ಯವಾದುದು. ಲಿಂಗಕ್ಕೆ ಎರಡು ದೊಡ್ಡ ಕಣ್ಣಿನ ಜೊತೆಗೆ ಹತ್ತು ಪುಟ್ಟ ಕೈಗಳಿವೆ. ವಿಶೇಷವೆಂದರೆ ಪರಮೇಶ್ವರನಂತೆ ಈಕೆಯ ಹಣೆಯ ಮೇಲೂ ಮೂರನೇ ಕಣ್ಣೋಂದಿದೆ. ಒಂದು ಮೂಗುತಿಯೂ ಇದೆ.

ಭೈರವಿಯ ಕೃಪೆಗೆ ಪಾತ್ರರಾದವರು ಜೀವನ ಅಥವಾ ಮರಣ, ಬಡತನ ಅಥವಾ ವೈಫಲ್ಯದ ಚಿಂತೆ ಅಥವಾ ಭಯ ಅವರನ್ನು ಕಾಡುವುದಿಲ್ಲ. ಈ ಎಲ್ಲ ಪ್ರಾಪಂಚಿಕ ಭಯಗಳಿಂದ ಅವರು ಹೊರಗೆ ಬರುತ್ತಾರೆ. ಯಾವುದು ಉತ್ತಮ ಎಂದು ಮನುಷ್ಯರು ಪರಿಗಣಿಸತ್ತಾರೋ ಅವಲ್ಲವೂ ಲಿಂಗ ಭೈರವಿ ದೇವಿಯ ಕೃಪೆಗೆ ಪಾತ್ರರಾದವರಿಗೆ ಧಕ್ಕುತ್ತದೆ ಎನ್ನುತ್ತಾರೆ ಇಶಾ ಫೌಂಡೇಶನ್​ನ ಸದ್ಗುರು.

ಇದನ್ನೂ ಓದಿ:ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ

ಲಿಂಗ ಭೈರವಿಯು ದೈವಿಕ ಸ್ತ್ರೀತ್ವದ ಅಭಿವ್ಯಕ್ತಿಯಾಗಿದೆ, ಕೊಯಂಬತ್ತೂರಿನ ವೆಲ್ಲಿಯಂಗಿರಿ ತಪ್ಪಲಿನಲ್ಲಿ ಇದರ ದೇವಾಲಯವಿದೆ (ಇಶಾ ಫೌಂಡೇಶನ್). ಶಕ್ತಿಯುತ, ವರ್ಣರಂಜಿತ, ಮಣ್ಣಿನ ಗುಣಗುಳ್ಳ, ಮಾನವೀಯತೆವೆತ್ತ ತಾಯಿಯಂತಹ ಗುಣಗಳುಳ್ಳ ಲಿಂಗ ಭೈರವಿಯು ಪೂರ್ಣ ಪ್ರಮಾಣದ ಸಂಪೂರ್ಣ ಮಹಿಳೆ, ಈಕೆ ಏಕಕಾಲದಲ್ಲಿ ಉಗ್ರಳೂ ಮತ್ತು ಕರುಣಾಮಯಿಯೂ ಹೌದು ಎನ್ನುತ್ತಾರೆ ಸದ್ಗುರು. ಅವರೇ ಹೇಳಿರುವಂತೆ ನೀವು ಲಿಂಗ ಭೈರವಿಯ ಭಕ್ತರಾಗಿ ಇರಬೇಕೆಂದೇನೂ ಇಲ್ಲ. ನಿಮಗೆ ಆಕೆಯ ಮೇಲೆ ನಂಬಿಕೆ ಇರಬೇಕೆಂದೇನೂ ಇಲ್ಲ. ನೀವು ಆಕೆಯ ಧನಾತ್ಮಕತೆಯ ಬಗ್ಗೆ ಯೋಚಿಸಿ, ಆ ಧನಾತ್ಮಕತೆ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ ಹೇಗಿರಬಹುದೆಂದು ಯೋಚಿಸಿರಿ ಸಾಕು ನೀವು ಆಕೆಯ ಭಕ್ತರಾಗುತ್ತೀರಿ ಎಂದಿದ್ದಾರೆ.

ಸಮಂತಾ ಮಾತ್ರವೇ ಅಲ್ಲ ನಟಿ ತಮನ್ನಾ ಸಹ ಲಿಂಗ ಭೈರವಿಯ ಪರಮ ಭಕ್ತೆ. ಇತ್ತೀಚೆಗಷ್ಟೆ ಇಶಾ ಫೌಂಡೇಶನ್​ನಲ್ಲಿ ಲಿಂಗ ಭೈರವಿಯ ವಿಶೇಷ ಪೂಜೆಯಲ್ಲಿ ನಟಿ ಸಮಂತಾ ಭಾಗವಹಿಸಿದ್ದರು. ಸ್ತ್ರೀತ್ವದ (ಫೆಮಿನಿಸಮ್) ಪ್ರತಿಪಾಧಕಿಯಾಗಿರುವ ತಮನ್ನಾ, ಸ್ತ್ರೀತನದ ದೈವಿಕ ಅವತಾರವಾದ ಲಿಂಗ ಭೈರವಿಯನ್ನು ನಂಬುತ್ತಾರೆ ಆರಾಧಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ