ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ

Naga Chaithanya: ತಮ್ಮ ಹಾಗೂ ಸಮಂತಾರ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತನಾಡಿದ್ದಾರೆ. ಈ ವೇಳೆ ಮೂರನೇ ವ್ಯಕ್ತಿಗಳ ಬಗ್ಗೆ ನಾಗ ಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ
ಸಮಂತಾ-ನಾಗ ಚೈತನ್ಯ
Follow us
ಮಂಜುನಾಥ ಸಿ.
|

Updated on: May 07, 2023 | 3:47 PM

ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaithanya) ವಿಚ್ಛೇದನ ಘೋಷಿಸಿ ಎರಡು ವರ್ಷಗಳಾಗಿವೆ. ಟಾಲಿವುಡ್​ನ (Tollywood) ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಸಮಂತಾ ಹಾಗೂ ನಾಗ ಚೈತನ್ಯ ಅವರುಗಳು 2021 ರಲ್ಲಿ ಬೇರ್ಪಡುತ್ತಿರುವುದಾಗಿ ಘೋಷಣೆ ಮಾಡಿದರು. ಇವರಿಬ್ಬರ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಅದಾದ ಬಳಿಕ ಇಬ್ಬರೂ ಸಹ ವಿಚ್ಛೇದನದ ಬಗ್ಗೆ ಹೆಚ್ಚಾಗಿ ಮಾತನಾಡಿರಲಿಲ್ಲ. ಕಾಫಿ ವಿತ್ ಕರಣ್​ನಲ್ಲಿ (Koffee With Karan) ಸಮಂತಾ ವಿಚ್ಛೇದನದ ಬಗ್ಗೆ ಕೆಲವು ಮಾತುಗಳನ್ನಾಡಿದ್ದರಾದರೂ ನಾಗ ಚತನ್ಯಾ ಎಲ್ಲಿಯೂ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಈ ವಿಷಯವಾಗಿ ಬಾಯ್ಬಿಟ್ಟಿದ್ದಾರೆ.

ನಾಗ ಚೈತನ್ಯ ನಟನೆಯ ಕಸ್ಟಡಿ ಹೆಸರಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿರುವ ನಟ, ”ನಾನು ಹಾಗೂ ಸಮಂತಾ ನಮ್ಮ ನಮ್ಮ ಜೀವನದಲ್ಲಿ ಮುಂದಕ್ಕೆ ಸಾಗಿದ್ದೀವಿ. ಆದರೆ ಮಾಧ್ಯಮಗಳು ಏನೇನೋ ಹೇಳಿ ನಮ್ಮಿಬ್ಬರ ನಡುವೆ ಮುಜುಗರದ ವಾತಾವರಣವನ್ನು ಸೃಷ್ಟಿಸುತ್ತವೆ. ಅದರಲ್ಲಿಯೂ ತಾವು ಹೆಡ್​ಲೈನ್ ಸೃಷ್ಟಿಸಿಕೊಳ್ಳಲು ಮೂರನೇ ವ್ಯಕ್ತಿಯನ್ನು ತಂದು ಅವರಿಂದ ನಮ್ಮ ಜೀವನದ ಬಗ್ಗೆ ಜಡ್ಜ್​ಮೆಂಟ್​ಗಳನ್ನು ಕೊಡುತ್ತಾರೆ ಅದು ಬಹಳ ಸಿಟ್ಟು ತರಿಸುತ್ತದೆ. ಆ ಮೂರನೇ ವ್ಯಕ್ತಿಗೆ ನಮ್ಮ ಜೀವನದ ಜೊತೆಗೆ ನಂಟು ಇರುವುದಿಲ್ಲ. ಆತನೂ ಸಹ ಮತ್ತೊಬ್ಬರ ಖಾಸಗಿ ವಿಷಯದಲ್ಲಿ ಮೂಗು ತೂರಿಸಬಾರದು ಎಂಬ ವಿಷಯ ತಿಳಿದರಬೇಕು ಎಂದಿದ್ದಾರೆ.

ಸಮಂತಾ ಜೊತೆಗೆ ವಿಚ್ಛೇದನದ ಬಳಿಕ ನಾಗ್ ಚೈತನ್ಯ ಹೆಸರು ನಟಿ ಶೋಭಿತಾ ದುಲಿಪಾಲ ಜೊತೆ ಕೇಳಿ ಬರುತ್ತಿದೆ. ಇವರಿಬ್ಬರೂ ಒಟ್ಟಿಗೆ ಓಡಾಡುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಸಮಂತಾ ಜೊತೆ ವಿಚ್ಛೇದನ ಆದಾಗ, ವಿಚ್ಛೇದನಕ್ಕೆ ಸಮಂತಾರೇ ಕಾರಣವೆಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ದೂರಲಾಗಿತ್ತು. ಸಮಂತಾಗೆ ಅಕ್ರಮ ಸಂಬಂಧ ಇದೆಯೆಂದು, ಸಮಂತಾಗೆ ಮಗು ಬೇಕಿರಲಿಲ್ಲವೆಂದು ಅದಕ್ಕೆ ವಿಚ್ಛೇದನ ಆಗಿದೆ ಎನ್ನಲಾಗಿತ್ತು. ಇದು ಸಮಂತಾರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ಕೊಡಬಹುದಾಗಿದ್ದ ನಾಗ ಚೈತನ್ಯ ಮೌನಕ್ಕೆ ಶರಣಾಗಿದ್ದರು. ಇದು ಟೀಕೆಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ:ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ

ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಂತೂ ವಿಚ್ಛೇದನದ ಬಳಿಕ ಸಖತ್ ಬೋಲ್ಡ್ ಆದ ಪಾತ್ರಗಳನ್ನು ಮಾಡುತ್ತಿದ್ದಾರೆ. ನಾಗ ಚೈತನ್ಯ ಸಹ ಕೆಲವು ಸಿನಿಮಾಗಳನ್ನು ಮಾಡಿದರಾದರೂ ಹಿಟ್ ಸಿನಿಮಾ ಒಂದು ಅವರ ಕೈಹಿಡಿದಿಲ್ಲ. ಇದೀಗ ತಮಿಳಿನ ನಿರ್ದೇಶಕರೊಟ್ಟಿಗೆ ಕೈಜೋಡಿಸಿ ಕಸ್ಟಡಿ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಕಾನ್​ಸ್ಟೆಬಲ್ ಪಾತ್ರದಲ್ಲಿ ನಾಗ ಚೈತನ್ಯ ಕಾಣಿಸಿಕೊಂಡಿದ್ದಾರೆ. ಆರೋಪಿಯೊಬ್ಬನನ್ನು ನ್ಯಾಯಾಲಯಕ್ಕೆ ಒಪ್ಪಿಸುವ ಜವಾಬ್ದಾರಿ ಹೊತ್ತಿರುವ ಕಾನ್​ಸ್ಟೆಬಲ್ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ.

ಸಿನಿಮಾದ ಜೊತೆಗೆ ಹೋಟೆಲ್ ಉದ್ಯಮಕ್ಕೂ ನಾಗ ಚೈತನ್ಯ ಕೈ ಹಾಕಿದ್ದಾರೆ. ಶೋಯು ಹೆಸರಿನ ಕ್ಲೌಡ್ ಕಿಚನ್ ತೆರೆದಿದ್ದು ಏಷಿಯನ್, ಕಾಂಟಿನೆಂಟಲ್ ಆಹಾರಗಳನ್ನು ಆನ್​ಲೈನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಒದಗಿಸುತ್ತಿದ್ದಾರೆ. ಅದರಲ್ಲಿಯೂ ಜಪಾನೀಸ್, ಚೈನೀಸ್ ಹಾಗೂ ಇನ್ನಿತರೆ ಏಷಿಯನ್ ದೇಶಗಳ ಆಹಾರ ಶೋಯು ಕ್ಲೌಡ್ ಕಿಚನ್​ನ ಟ್ರೇಡ್ ಮಾರ್ಕ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ