Jawan: ‘ಅಣ್ಣಾ.. ಬೇಕಿದ್ರೆ 100, 200 ರೂಪಾಯಿ ಜಾಸ್ತಿ ತಗೊಳ್ಳಿ’; ಶಾರುಖ್ ಖಾನ್ಗೆ ಅಭಿಮಾನಿಯ ವಿಶೇಷ ಮನವಿ
Jawan Release Date: ‘ಜವಾನ್’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಕುರಿತು ಟ್ವಿಟರ್ನಲ್ಲಿ ನೆಟ್ಟಿಗರೊಬ್ಬರು ಶಾರುಖ್ ಖಾನ್ಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ನಟ ಶಾರುಖ್ ಖಾನ್ (Shah Rukh Khan) ಅವರು ‘ಪಠಾಣ್’ ಸಿನಿಮಾದ ಗೆಲುವಿನ ಬಳಿಕ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಸ್ತುತ ಶಾರುಖ್ ಖಾನ್ ಅವರು ‘ಡಂಕಿ’ ಮತ್ತು ‘ಜವಾನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಜವಾನ್’ ಚಿತ್ರ (Jawan Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್ ದಿನಾಂಕ ತಿಳಿಸಲು ಇತ್ತೀಚೆಗೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್ 7ರಂದು ‘ಜವಾನ್’ ತೆರೆಕಾಣಲಿದೆ ಎಂದು ಶಾರುಖ್ ಖಾನ್ ತಿಳಿಸಿದ್ದಾರೆ. ರಿಲೀಸ್ ಡೇಟ್ ತಿಳಿಸಿದ ಬಳಿಕ ಟ್ವಿಟರ್ನಲ್ಲಿ ಅವರು ಅಭಿಮಾನಿಗಳ (Shah Rukh Khan Fans) ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ವಿಚಿತ್ರವಾದ ಮನವಿಯೊಂದನ್ನು ಮುಂದಿಟ್ಟಿದ್ದಾರೆ.
‘ಜವಾನ್’ ಚಿತ್ರಕ್ಕೆ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆ ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳಿ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೂನ್ 2ರಂದು ‘ಜವಾನ್’ ಬಿಡುಗಡೆ ಆಗುವುದರಲ್ಲಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ದಿನಾಂಕ ಸೆಪ್ಟೆಂಬರ್ 7ಕ್ಕೆ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ.
ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ‘ಪಠಾಣ್’ ಗೆದ್ದ ಮೇಲೆ ಸೊಕ್ಕು ಬಂತಾ?
‘ಜವಾನ್’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಬೇಸರ ಮಾಡಿಕೊಂಡಿರುವ ಅಭಿಮಾನಿಯೊಬ್ಬರು ಟ್ವಿಟರ್ನಲ್ಲಿ ಶಾರುಖ್ ಖಾನ್ಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ಅಣ್ಣಾ.. ಬೇಕಿದ್ದರೆ 100 ಅಥವಾ 200 ರೂಪಾಯಿ ಜಾಸ್ತಿ ತೆಗೆದುಕೊಳ್ಳಿ. ಜವಾನ್ ಚಿತ್ರವನ್ನು ನಾಳೆಯೇ ರಿಲೀಸ್ ಮಾಡಿ’ ಎಂದು ಕೋರಿಕೊಳ್ಳಲಾಗಿದೆ. ಅದಕ್ಕೆ ಶಾರುಖ್ ಖಾನ್ ಉತ್ತರ ನೀಡಿದ್ದು, ‘ಅಣ್ಣಾ.. ಇಷ್ಟು ದುಡ್ಡಲ್ಲಿ ಒಟಿಟಿ ಸಬ್ಸ್ಕ್ರಿಪ್ಷನ್ ಕೂಡ ಬರೋದಿಲ್ಲ. ನಿಂಗೆ ಪೂರ್ತಿ ಪಿಕ್ಚರ್ ಬೇಕಾ?’ ಎಂದು ಮರುಪ್ರಶ್ನೆ ಹಾಕಿದ್ದಾರೆ.
Bhai itne mein toh OTT ka subscription nahi milta tujhe poori picture chahiye!! #Jawan https://t.co/KX6pWu8j1V
— Shah Rukh Khan (@iamsrk) May 6, 2023
ಶಾರುಖ್ ಖಾನ್ ಅವರ ಹೋಂ ಬ್ಯಾನರ್ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ‘ಜವಾನ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಶಾರುಖ್ ಪತ್ನಿ ಗೌರಿ ಖಾನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅಟ್ಲಿ ಕುಮಾರ್ ಜೊತೆ ಶಾರುಖ್ ಖಾನ್ ಅವರು ಮೊದಲ ಬಾರಿ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಿದೆ. ದೇಶದ ವಿವಿಧ ನಗರಗಳಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.