ಜೈಲಿನಿಂದ ಜಾಕ್ವೆಲಿನ್​ಗೆ ಮತ್ತೆ ಪತ್ರ ಬರೆದ ವಂಚಕ ಸುಕೇಶ್, ಈ ಬಾರಿ ದೊಡ್ಡ ಸಪ್ರೈಸ್ ಕೊಡಲಿದ್ದಾನಂತೆ

Sukesh Chandrashekhar: ನಟಿ ಜಾಕ್ವೆಲಿನ್ ಫರ್ನಾಂಡೀಸ್​ಗೆ ಆಕೆಯ ಬಾಯ್​ಫ್ರೆಂಡ್ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಪತ್ರ ಬರೆದಿದ್ದಾನೆ.

ಜೈಲಿನಿಂದ ಜಾಕ್ವೆಲಿನ್​ಗೆ ಮತ್ತೆ ಪತ್ರ ಬರೆದ ವಂಚಕ ಸುಕೇಶ್, ಈ ಬಾರಿ ದೊಡ್ಡ ಸಪ್ರೈಸ್ ಕೊಡಲಿದ್ದಾನಂತೆ
ಸುಕೇಶ್-ಜಾಕ್ವಲಿನ್
Follow us
ಮಂಜುನಾಥ ಸಿ.
|

Updated on: May 07, 2023 | 5:25 PM

ಮಹಾವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ಅವನ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಸಹ ಆರೋಪಿಯಾಗಿದ್ದು ಸಿಬಿಐ, ಇಡಿಗಳಿಂದ ಸತತ ವಿಚಾರಣೆಗೆ ಒಳಗಾಗುತ್ತಲೇ ಇದ್ದಾರೆ. ಇನ್ನು ಸುಕೇಶ್ ಮಾತ್ರ ಜಾಕ್ವೆಲಿನ್ ತನ್ನ ಗರ್ಲ್​ಫ್ರೆಂಡ್ ಎಂದಿದ್ದು ಆಗಾಗ್ಗೆ ಜೈಲಿನಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಪ್ರೇಮಪತ್ರಗಳನ್ನು ಬರೆಯುತ್ತಿರುತ್ತಾನೆ. ಹಾಗೆಯೇ ಇದೀಗ ತಮ್ಮ ವಕೀಲರ ಮೂಲಕ ಜಾಕ್ವೆಲಿನ್​ಗೆ ಉದ್ದನೆಯ ಪ್ರೇಮಪತ್ರ ಬರೆದಿದ್ದು ಜಾಕ್ವೆಲಿನ್​ಗೆ ದೊಡ್ಡ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾನೆ.

ಈ ಬಾರಿ ಉದ್ದನೆಯ ಪತ್ರವನ್ನೇ ಬರೆದಿರುವ ಸುಕೇಶ್ ಚಂದ್ರಶೇಖರ್, ತಾನು ಜಾಕ್ವೆಲಿನ್​ಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ. ಅದರ ಜೊತೆಗೆ ಇತ್ತೀಚೆಗೆ ಫಿಲಂಫೇರ್ ಕಾರ್ಯಕ್ರಮದಲ್ಲಿ ಜಾಕ್ವೆಲಿನ್ ಮಾಡಿದ ನೃತ್ಯವನ್ನು ಬಹುವಾಗಿ ಹೊಗಳಿದ್ದಾನೆ. ”ನನ್ನ ಬೇಬಿ, ನನ್ನ ಪ್ರೀತಿಯೇ, ನನ್ನ ಬೊಮ್ಮ ಜಾಕ್ವೆಲಿನ್ ನಾನು ಏಪ್ರಿಲ್ 28 ರಂದು ಫಿಲಂಫೇರ್ ನೋಡಿದೆ. ನಿನ್ನ ನೃತ್ಯ ಅತ್ಯದ್ಭುತವಾಗಿತ್ತು. ಇಡೀ ಶೋನಲ್ಲಿ ನಿನ್ನ ನೃತ್ಯವೇ ಹೈಲೆಟ್. ನೀನು ಸೊಗಸಾಗಿ ಕಾಣುತ್ತಿದ್ದೆ, ಕ್ಲಾಸಿ, ಸೂಪರ್-ಹಾಟ್ ಆಗಿ ಕಾಣುತ್ತಿದ್ದೆ. ನಾನು ಇನ್ನಷ್ಟು ಬಲವಾಗಿ ನಿನ್ನನ್ನು ಪ್ರೀತಿಸುವಂತೆ ನೀನು ಮಾಡಿದೆ. ನಿನ್ನನ್ನು ಹೊಗಳಲು ನನಗೆ ಪದಗಳಿಲ್ಲ, ನೀನು ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್ ಎಂದು ಬರೆದಿದ್ದಾನೆ ಸುಖೇಶ್ ಚಂದ್ರಶೇಖರ್.

ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ರಾಣಿ, ಬೊಟ್ಟ ಬೊಮ್ಮಾ, ನನ್ನ ದೇಹದ ಪ್ರತಿ ಕಣಕಣವೂ ನಿನ್ನನ್ನು ಪ್ರೇಮಿಸುತ್ತದೆ. ನನ್ನ ಜೀವನದ ಪ್ರತಿ ಸೆಕೆಂಡ್ ನಿನ್ನ ಬಗ್ಗೆಯೇ ಯೋಚಿಸುತ್ತೇನೆ. ನಾನು ನಿನ್ನನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತೇನೆ ಎಂದು ನಿನಗೂ ಗೊತ್ತು, ನೀನು ನನ್ನನ್ನು ಎಷ್ಟು ಹುಚ್ಚುತನದಿಂದ ಪ್ರೀತಿಸುತ್ತೀಯೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜನ್ಮದಿನದಂದು ನಿನಗೆ ದೊಡ್ಡ ಸೂಪರ್ ಸರ್ಪ್ರೈಸ್ ಇದೆ, ಆ ಸರ್ಪ್ರೈಸ್ ನಿನಗೆ ಇಷ್ಟವಾಗುತ್ತದೆ. ನಾನು ನನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇನೆ. ನನಗೆ ಕಾಯಲು ಸಾಧ್ಯವಿಲ್ಲ. ಬೇಬಿ ನೀನು ನಗುತ್ತಿರಬೇಕೆಂದು ನಾನು ಬಯಸುತ್ತೇನೆ, ನಾನು ಇಲ್ಲಿದ್ದೇನೆ, ಸತ್ಯದ ಕ್ಷಣಗಣನೆ ಪ್ರಾರಂಭವಾಗಿದೆ, ಚಿಂತಿಸಬೇಡ ಬೇಬಿ” ಎಂದು ಭಾವುಕವಾಗಿ ಪತ್ರ ಬರೆದಿದ್ದಾನೆ ಸುಕೇಶ್.

ಇದನ್ನೂ ಓದಿ:Video Viral: ಜೈಲಿಗೆ ದಾಳಿ, 80 ಸಾವಿರದ ಜೀನ್ಸ್, 1.5 ಲಕ್ಷದ ಶೂ ವಶ, ಕಣ್ಣೀರು ಹಾಕಿದ ಸುಕೇಶ್ ಚಂದ್ರಶೇಖರ್

ಸುಕೇಶ್ ಚಂದ್ರಶೇಖರ್ ಮಹಾ ವಂಚಕ ಹಾಗೂ ಸುಲಿಗೆಕೋರನಾಗಿದ್ದು ಈ ವರೆಗೆ ಹಲವು ಖ್ಯಾತನಾಮ ರಾಜಕಾರಣಿಗಳು, ಉದ್ಯಮಿಗಳಿಗೆ ವಂಚಿಸಿ ನೂರಾರು ಕೋಟಿ ಹಣ ಗಳಿಸಿದ್ದಾನೆ. ತಮಿಳುನಾಡಿನ ಜನಪ್ರಿಯ ರಾಜಕಾರಣಿಗೆ ನೂರಾರು ಕೋಟಿ ವಂಚಿಸಿದ್ದ ಸುಕೇಶ್, ಅದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಅಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ ಸುಕೇಶ್ ಅಲ್ಲಿಂದಲೇ ಹಲವು ಉದ್ಯಮಿಗಳಿಗೆ ಕರೆಗಳನ್ನು ಮಾಡಿ ಹಣ ವಸೂಲಿ ಮಾಡುತ್ತಿದ್ದ. ಜೈಲಿನಲ್ಲಿರುವ ರ್ಯಾನ್​ಬಾಕ್ಸಿ ಮಾಲೀಕ ಶಿವೇಂದರ್ ಸಿಂಗ್ ಅನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ, ಶಿವೇಂದರ್ ಸಿಂಗ್ ಪತ್ನಿ ಅದಿತಿಯಿಂದ 200 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದ. ಗೃಹ ಸಚಿವಾಲಯದ ಉನ್ನತ ಅಧಿಕಾರಿ ತಾನು ಎಂದೂ ಸಹ ಸುಕೇಶ್ ಹೇಳಿಕೊಂಡಿದ್ದ.

ಸುಕೇಶ್​ಗೆ ಹಲವು ಬಾಲಿವುಡ್ ನಟಿಯರೊಟ್ಟಿಗೆ ಸಂಪರ್ಕವಿತ್ತು. ಹಲವು ಬಾಲಿವುಡ್ ನಟಿಯರು ಸುಕೇಶ್ ಅನ್ನು ಕಾಣಲು ತಿಹಾರ್​ ಜೈಲಿಗೆ ಬಂದಿದ್ದರು ಸಹ. ಆದರೆ ಜಾಕ್ವೆಲಿನ್ ಫರ್ನಾಂಡೀಸ್​ ಜೊತೆ ಹೆಚ್ಚು ಆಪ್ತತೆಯನ್ನು ಸುಕೇಶ್ ಹೊಂದಿದ್ದ. ಇವರಿಬ್ಬರ ಕೆಲವು ಖಾಸಗಿ ಚಿತ್ರಗಳು ಲೀಕ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ