AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Kerala Story: ಚುನಾವಣೆ ಕಾವು, ಐಪಿಎಲ್​ ಹವಾ ನಡುವೆಯೂ ಅಬ್ಬರಿಸಿದ ‘ದಿ ಕೇರಳ ಸ್ಟೋರಿ’; 3 ದಿನಕ್ಕೆ ಆದ ಕಲೆಕ್ಷನ್​ ಎಷ್ಟು?

The Kerala Story Box Office Collection: ದಿನದಿಂದ ದಿನಕ್ಕೆ ‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದೆ. ಮೊದಲ ಮೂರು ದಿನಗಳ ಕಾಲ ಈ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

The Kerala Story: ಚುನಾವಣೆ ಕಾವು, ಐಪಿಎಲ್​ ಹವಾ ನಡುವೆಯೂ ಅಬ್ಬರಿಸಿದ ‘ದಿ ಕೇರಳ ಸ್ಟೋರಿ’; 3 ದಿನಕ್ಕೆ ಆದ ಕಲೆಕ್ಷನ್​ ಎಷ್ಟು?
ಅದಾ ಶರ್ಮಾ
ಮದನ್​ ಕುಮಾರ್​
|

Updated on: May 08, 2023 | 2:58 PM

Share

ಮುಖ್ಯಾಂಶಗಳು

  • ಹಲವು ಅಡೆತಡೆಗಳನ್ನು ದಾಟಿಕೊಂಡು ‘ದಿ ಕೇರಳ ಸ್ಟೋರಿ’ ಸಿನಿಮಾ ಮುನ್ನುಗ್ಗುತ್ತಿದೆ
  • 3ನೇ ದಿನ 16 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು ಕಲೆಕ್ಷನ್​ 35.25 ಕೋಟಿ ರೂಪಾಯಿ ಆಗಿದೆ
  • ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಮೇ 8ರಂದು ಎಷ್ಟು ಕಮಾಯಿ ಆಗಿದೆ ಎಂಬ ಲೆಕ್ಕ ಇನ್ನಷ್ಟೇ ಸಿಗಬೇಕಿದೆ

ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸದ್ದು ಮಾಡುತ್ತಿದೆ. ಮೇ 5ರಂದು ಬಿಡುಗಡೆ ಆದ ಈ ಸಿನಿಮಾ ವೀಕೆಂಡ್​ನಲ್ಲಿ ಸಖತ್​ ಸದ್ದು ಮಾಡಿದೆ. ಮೊದಲು ಮೂರು ದಿನಗಳ ಕಾಲ ಜನರು ಮುಗಿಬಿದ್ದು ಈ ಚಿತ್ರ ನೋಡಿದ್ದಾರೆ. ದಿನದಿಂದ ದಿನಕ್ಕೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ (Box Office Collection) ಹೆಚ್ಚಾಗುತ್ತಿದೆ. ಮೊದಲ ದಿನ ಈ ಚಿತ್ರ 8.3 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನವಾದ ಶನಿವಾರ ಗಣನೀಯ ಏರಿಕೆ ಕಂಡಿತು. ಅಂದು ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಬರೋಬ್ಬರಿ 11.22 ಕೋಟಿ ರೂಪಾಯಿ. ಇನ್ನು ಭಾನುವಾರ ಕೂಡ ಜನರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಅಂದರೆ, 3ನೇ ದಿನ 16 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಈ ಸಿನಿಮಾದ ಒಟ್ಟು ಕಲೆಕ್ಷನ್​ 35.25 ಕೋಟಿ ರೂಪಾಯಿ ಆಗಿದೆ. ಇನ್ನೂ ಒಂದು ವಾರಗಳ ಕಾಲ ಇದೇ ರೀತಿ ಪ್ರದರ್ಶನ ಕಂಡರೆ ‘ದಿ ಕೇರಳ ಸ್ಟೋರಿ’ ಚಿತ್ರ ಆದಷ್ಟು ಬೇಗ 100 ಕೋಟಿ ರೂಪಾಯಿ ಕ್ಲಬ್​ ಸೇರಲಿದೆ.

ಹಲವು ಅಡೆತಡೆಗಳನ್ನು ದಾಟಿಕೊಂಡು ‘ದಿ ಕೇರಳ ಸ್ಟೋರಿ’ ಸಿನಿಮಾ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಬಹುತೇಕ ಜನರು ಪ್ರಚಾರದಲ್ಲಿ, ಸಮಾವೇಷಗಳಲ್ಲಿ ಭಾಗಿ ಆಗಿದ್ದಾರೆ. ಎಲ್ಲೆಲ್ಲೂ ರಾಜಕೀಯದ್ದೇ ಚರ್ಚೆ ಆಗುತ್ತಿದೆ. ಇನ್ನು, ಐಪಿಎಲ್​ ಹವಾ ಕೂಡ ಜೋರಾಗಿದೆ. ಪ್ರತಿದಿನ ಮ್ಯಾಚ್​ ನೋಡುವುದರಲ್ಲೇ ಜನರು ಬ್ಯುಸಿ ಆಗಿದ್ದಾರೆ. ಇದೆಲ್ಲದರ ನಡುವೆಯೂ ‘ದಿ ಕೇರಳ ಸ್ಟೋರಿ’ ಚಿತ್ರ ಮೂರು ದಿನಕ್ಕೆ 35.25 ಕೋಟಿ ರೂಪಾಯಿ ಗಳಿಸಿರುವುದು ಹೆಚ್ಚುಗಾರಿಕೆ.

ಇದನ್ನೂ ಓದಿ
Image
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
Image
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Image
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
Image
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ಯಾವುದೇ ಸಿನಿಮಾಗೆ ಸೋಮವಾರದ ಕಲೆಕ್ಷನ್​ ತುಂಬ ಮುಖ್ಯವಾಗಲಿದೆ. ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಮೇ 8ರಂದು ಎಷ್ಟು ಕಮಾಯಿ ಆಗಿದೆ ಎಂಬ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ಸೋಮವಾರ ಕೂಡ ಉತ್ತಮ ಗಳಿಕೆ ಆದರೆ ಚಿತ್ರದ ನಾಗಾಲೋಟ ಹೆಚ್ಚಾಗಲಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿರುವುದರಿಂದ ಕಲೆಕ್ಷನ್​ ಹೆಚ್ಚಿದೆ.

The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ

ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸುದೀಪ್ತೋ ಸೇನ್​ ಅವರು ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ