AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara: ಒಟಿಟಿಯಲ್ಲಿ ಬರಲಿದೆ ‘ದಸರಾ’ ಹಿಂದಿ ವರ್ಷನ್​; ತಡವಾಗಿ ಗುಡ್ ನ್ಯೂಸ್​ ನೀಡಿದ ನೆಟ್​ಫ್ಲಿಕ್ಸ್​

Dasara on Netflix: ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಹಿಂದಿಗೆ ಡಬ್​ ಆದ ‘ದಸರಾ’ ಸಿನಿಮಾ ಮೇ 25ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

Dasara: ಒಟಿಟಿಯಲ್ಲಿ ಬರಲಿದೆ ‘ದಸರಾ’ ಹಿಂದಿ ವರ್ಷನ್​; ತಡವಾಗಿ ಗುಡ್ ನ್ಯೂಸ್​ ನೀಡಿದ ನೆಟ್​ಫ್ಲಿಕ್ಸ್​
ನಾನಿ
ಮದನ್​ ಕುಮಾರ್​
|

Updated on: May 18, 2023 | 6:49 PM

Share

ಟಾಲಿವುಡ್​ ಸ್ಟಾರ್​ ನಟ ನಾನಿ (Nani) ಅಭಿನಯದ ‘ದಸರಾ’ ಸಿನಿಮಾ ಈ ವರ್ಷ ತೆರೆಕಂಡು ಸೂಪರ್​ ಹಿಟ್​ ಆಯಿತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬಂದ ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಹಿಂದಿ ಹೊರತುಪಡಿಸಿ ಬೇರೆ ಎಲ್ಲ ಭಾಷೆಯ ವರ್ಷನ್​ಗಳು ಏಪ್ರಿಲ್​ 27ರಂದು ಒಟಿಟಿಯಲ್ಲಿ ಲಭ್ಯವಾಗಿದ್ದವು. ನೆಟ್​​ಫ್ಲಿಕ್ಸ್​ನಲ್ಲಿ (Netflix) ಈ ಸಿನಿಮಾವನ್ನು ನೋಡಿ ಸೌತ್​ ಇಂಡಿಯಾದ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಆದರೆ ಉತ್ತರ ಭಾರತದ ಮಂದಿಗೆ ಹಿಂದಿಯಲ್ಲಿ ನೋಡುವ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೆ ಈಗ ಕಾಲ ಕೂಡಿಬಂದಿದೆ. ದಸರಾ’ (Dasara Movie) ಹಿಂದಿ ವರ್ಷನ್​ ಪ್ರಸಾರಕ್ಕೆ ನೆಟ್​ಫ್ಲಿಕ್ಸ್​ ಸಜ್ಜಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಧೂಮ್​ ಧಾಮ್​ ಮುಗಿಯಿತು ಅಂದುಕೊಂಡ್ರಾ? ನಿಮ್ಮ ಊಹೆ ತಪ್ಪು. ನೆಟ್​ಫ್ಲಿಕ್​ನಲ್ಲಿ ಮೇ 25ರಂದು ದಸರಾ ಸಿನಿಮಾದ ಹಿಂದಿ ವರ್ಷನ್​ ಬರುತ್ತಿದೆ’ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಸೌತ್​ ಹೀರೋಗಳ ಸಿನಿಮಾಗಳು ಹಿಂದಿಗೆ ಡಬ್​ ಆಗುವುದರಿಂದ ಉತ್ತರ ಭಾರತದಲ್ಲಿನ ಪ್ರೇಕ್ಷಕರು ನೋಡಿ ಎಂಜಾಯ್​ ಮಾಡುತ್ತಾರೆ.

‘ದಸರಾ’ ಸಿನಿಮಾದಲ್ಲಿ ನಾನಿ ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್​ ನಟಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದರು. ರಾಜಮೌಳಿ ಕೂಡ ಫಿದಾ ಆಗಿದ್ದರು. ಮಾರ್ಚ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ರಿಲೀಸ್​ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಸಹ ದಾಟಿತು. ಇದು ನಾನಿ ವೃತ್ತಿ ಜೀವನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಶ್ರೀಕಾಂತ್ ಒಡೆಲಾ ಭರ್ಜರಿ ಗೆಲುವು ಪಡೆದರು.

ಇದನ್ನೂ ಓದಿ: ಅವತಾರ್ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ಹೆಚ್ಚುವರಿ ಶುಲ್ಕ ಪಾವತಿಯ ಅಗತ್ಯವಿಲ್ಲ

‘ದಸರಾ’ ಸಿನಿಮಾದಲ್ಲಿ ನಟ ನಾನಿ ಅವರು ರಗಡ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಚಿತ್ರದ ಟ್ರೇಲರ್​ ಬಿಡುಗಡೆ ಆದಾಗ ಎಲ್ಲರೂ ‘ಪುಷ್ಪ’ ಸಿನಿಮಾಗೆ ಹೋಲಿಕೆ ಮಾಡಿದರು. ಆದರೆ ಸಿನಿಮಾ ರಿಲೀಸ್​ ಆದಾಗ ಆ ಹೋಲಿಕೆ ಮಾಯವಾಯ್ತು. ಇದು ಬೇರೆಯದೇ ಕಥೆಯನ್ನು ಹೊಂದಿದೆ ಎಂಬುದು ಪ್ರೇಕ್ಷಕರಿಗೆ ತಿಳಿಯಿತು. ಒಂದು ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಬಳಿಕ ಈ ಸಿನಿಮಾ ಶತಕೋಟಿ ರೂಪಾಯಿ ಕ್ಲಬ್​ ಸೇರಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More