AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವತಾರ್ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ಹೆಚ್ಚುವರಿ ಶುಲ್ಕ ಪಾವತಿಯ ಅಗತ್ಯವಿಲ್ಲ

Avatar 2: ಕಳೆದ ವರ್ಷ ಡಿಸೆಂಬರ್ 16 ರಂದು ಬಿಡುಗಡೆ ಆಗಿದ್ದ ಅವತಾರ್ 2 ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಯಾವ ಒಟಿಟಿ? ಎಂದು ಬಿಡುಗಡೆ ಇಲ್ಲಿದೆ ಮಾಹಿತಿ.

ಅವತಾರ್ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ಹೆಚ್ಚುವರಿ ಶುಲ್ಕ ಪಾವತಿಯ ಅಗತ್ಯವಿಲ್ಲ
ಅವತಾರ್ 2
ಮಂಜುನಾಥ ಸಿ.
|

Updated on: May 16, 2023 | 4:17 PM

Share

ಅವತಾರ್ 2 (Avatar 2) ಸಿನಿಮಾ ಕಳೆದ ವರ್ಷಾಂತ್ಯಕ್ಕೆ ಡಿಸೆಂಬರ್ 16 ರಂದು ಬಿಡುಗಡೆ ಆಗಿ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗಿ ಕಲೆಕ್ಷನ್​ನಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿತು. ಅಂದಿನಿಂದಲೂ ಈ ಸಿನಿಮಾ ಯಾವ ಒಟಿಟಿಗೆ ಬರಬಹುದು ಎಂಬ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಲೇ ಇದ್ದವು. ಸಿನಿಮಾವನ್ನು ತಮ್ಮ ಒಟಿಟಿ ಪ್ಲ್ಯಾಟ್​ಫಾರ್ಮ್​ಗೆ ತೆಗೆದುಕೊಳ್ಳಲು ಕೆಲವು ದೊಡ್ಡ ಒಟಿಟಿ (OTT) ವೇದಿಕೆಗಳು ಯತ್ನಿಸಿದ್ದವು. ಆದರೆ ಈಗ ಕೊನೆಗೂ ಅವತಾರ್ 2 ಸಿನಿಮಾದ ಒಟಿಟಿ ಪ್ರವೇಶ ನಿಗದಿಯಾಗಿದೆ.

ಡಿಸ್ಲಿ ಪ್ಲಸ್ ನಲ್ಲಿ ಅವತಾರ್ 2 (Avatar 2) ಸಿನಿಮಾ ಜೂನ್ 7ರಿಂದ ಪ್ರಸಾರವಾಗಲಿದೆ. ಅವತಾರ್ 2 ಸಿನಿಮಾ ನೋಡಲು ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆಯೇ? ಎಂಬ ಆತಂಕ ಸಿನಿಪ್ರಿಯರಲ್ಲಿತ್ತು ಆದರೆ ಡಿಸ್ನಿ ಪ್ಲಸ್ ಅವತಾರ್ 2 ನೋಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ ಎನ್ನಲಾಗಿದೆ.

ಅವತಾರ್ 2 ಸಿನಿಮಾ ಆಪಲ್ ಪ್ಲಸ್ ಹಾಗೂ ಅಮೆಜಾನ್ ಪ್ರೈಂನಲ್ಲಿ (Amazon Prime) ಬಿಡುಗಡೆ ಆಗಲಿದೆ. ಫುಲ್ ಎಚ್​ಡಿ, ಎಚ್​ಡಿ ಹಾಗೂ ಎಸ್​ಡಿ ಮಾದರಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದ್ದು, ಮೂರು ಬಗೆಯಲ್ಲಿ ಸಿನಿಮಾ ನೋಡಲು ದೊಡ್ಡ ಮೊತ್ತವನ್ನು ನೀಡಬೇಕಾಗುತ್ತದೆ ಎಂಬ ಸುದ್ದಿಗಳು ತಿಂಗಳ ಹಿಂದಷ್ಟೆ ಹರಿದಾಡಿದ್ದವು. ಆದರೆ ಇದೀಗ ಅದೆಲ್ಲ ಸುಳ್ಳಾಗಿದ್ದು ಫುಲ್​ ಎಚ್​ಡಿ ಮಾದರಿಯಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಡಿಸ್ನಿ ಪ್ಲಸ್​ನಲ್ಲಿ ಅವತಾರ್ 2 ವೀಕ್ಷಣೆಗೆ ಲಭ್ಯವಾಗುತ್ತಿದೆ.

ಅವತಾರ್ 2 ಸಿನಿಮಾ ಡಿಸೆಂಬರ್ 16 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಅವತಾರ್ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿ 13 ವರ್ಷಗಳ ಬಳಿಕ ಎರಡನೇ ಭಾಗ ಬಿಡುಗಡೆ ಆಗಿದ್ದು ವಿಶೇಷ. ಜೇಮ್ಸ್ ಕ್ಯಾಮರನ್ ನಿರ್ದೇಶನದ ಈ ಸಿನಿಮಾ ನೀರಿನಾಳದ ಅದ್ಭುತ ಪ್ರಪಂಚವನ್ನು ಒಳಗೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಈ ಸಿನಿಮಾ 1.90 ಲಕ್ಷ ಕೋಟಿಗೂ ಹೆಚ್ಚಿನ ಹಣ ಗಳಿಸಿದೆ. ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಈ ಸಿನಿಮಾ ತಲುಪಲಿದೆ.

ಅವತಾರ್ 2 ಸಿನಿಮಾದ ಮುಂದಿನ ಭಾಗದ ಬಹುತೇಕ ಚಿತ್ರೀಕರಣವನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ಮುಗಿಸಿದ್ದಾರೆ. ಅವತಾರ್ 2 ಸಿನಿಮಾದಲ್ಲಿದ್ದ ಹಲವು ಮಕ್ಕಳು ಅವತಾರ್ 3 ಸಿನಿಮಾದಲ್ಲಿಯೂ ಇರುವ ಕಾರಣ ಅವರು ಬೆಳೆದ ದೇಹಾಕಾರದಲ್ಲಿ ಬದಲಾವಣೆ ಆಗುವ ಮುನ್ನವೇ ಸಿನಿಮಾದ ಚಿತ್ರೀಕರಣ ಮುಗಿಸಬೇಕೆಂಬ ಕಾರಣಕ್ಕೆ ಜೇಮ್ಸ್ ಕ್ಯಾಮರನ್ ಅವತಾರ್ 2 ಜೊತೆಗೇ ಅವತಾರ್ 3 ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಅವತಾರ್ 3 ಸಿನಿಮಾದ ಬಿಡುಗಡೆ ಮುಂದಿನ ವರ್ಷಾಂತ್ಯಕ್ಕೆ ಆಗಲಿದೆ. ಆ ಬಳಿಕ ಅವತಾರ್ 4 ಹಾಗೂ ಅವತಾರ್ 5 ಸಿನಿಮಾ ಸಹ ನಿರ್ಮಾಣಗೊಳ್ಳಲಿದೆ. ಈ ಎಲ್ಲ ಸಿನಿಮಾವನ್ನು ಜೇಮ್ಸ್ ಕ್ಯಾಮರನ್ ಅವರೇ ನಿರ್ದೇಶನ ಮಾಡಲಿದ್ದಾರೆ. ಅವತಾರ್ 2 ಸಿನಿಮಾದಲ್ಲಿ ಸ್ಯಾಮ್ ವರ್ತಿಂಗ್​ಟನ್, ಜೋ ಸೆಲ್ಡಾನಾ, ಸಿಗುನೇರಿ, ಟೈಟ್ಯಾನಿಕ್ ನಟಿ ಕೇಟ್ ವಿನ್​ಸ್ಲೆಟ್ ಇನ್ನೂ ಹಲವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು