ಜೇಮ್ಸ್ ಕ್ಯಾಮೆರಾನ್ (James Cameron) ನಿರ್ದೇಶನದ ‘ಅವತಾರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ತೆರೆಕಂಡು ದಶಕಗಳ ಬಳಿಕ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ (Avatar: The Way of Water) ರಿಲೀಸ್ ಆಯಿತು. ಕಳೆದ ವರ್ಷ ಡಿಸೆಂಬರ್ನಲ್ಲಿ ತೆರೆಗೆ ಬಂದ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ‘ಅವತಾರ್ 2’ ಚಿತ್ರದ ಇಲ್ಲಿವರೆಗಿನ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ ಸಿಕ್ಕಿದೆ. ಇಲ್ಲಿಯವರೆಗೆ ಸಿನಿಮಾ ಎರಡು ಬಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ಈ ಚಿತ್ರದ ಕಲೆಕ್ಷನ್ 16,247 ಕೋಟಿ ರೂಪಾಯಿ!
ಪ್ರತಿವರ್ಷ ಕ್ರಿಸ್ಮಸ್ ಸಂದರ್ಭದಲ್ಲಿ ಹಾಲಿವುಡ್ನಲ್ಲಿ ಒಂದು ದೊಡ್ಡ ಸಿನಿಮಾ ರಿಲೀಸ್ ಆಗುತ್ತದೆ. 2021ರಲ್ಲಿ ‘ಸ್ಪೈಡರ್ಮ್ಯಾನ್: ನೋ ವೇ ಹೋಂ’ ರಿಲೀಸ್ ಆಗಿತ್ತು. ಈ ಚಿತ್ರ ಒಳ್ಳೆಯ ಕಮಾಯಿ ಮಾಡಿತು. 2022ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ತೆರೆಗೆ ಬಂತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿದೆ.
‘ಅವತಾರ್’ ಚಿತ್ರ ಹಿಟ್ ಆಗಿದ್ದರಿಂದ ‘ಅವತಾರ್: ದಿ ವೇ ಆಫ್ ವಾಟ್’ ಚಿತ್ರದ ಬಗ್ಗೆ ನಿರೀಕ್ಷೆ ಇತ್ತು. ಈ ಚಿತ್ರದ ಕಥೆ ಸಮುದ್ರದಲ್ಲಿ ಸಾಗುತ್ತದೆ. ಮೊದಲ ಪಾರ್ಟ್ನ ಕಥೆ ದಟ್ಟಡವಿಯಲ್ಲಿ ನಡೆದಿತ್ತು. ಈಗ ‘ಅವತಾರ್ 3’ ಬರೋಕೆ ರೆಡಿ ಆಗಿದೆ. 2024ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.
‘ಅವತಾರ್’ ಚಿತ್ರದ ಲೈಫ್ಟೈಮ್ ಕಲೆಕ್ಷನ್ 23 ಸಾವಿರ ಕೋಟಿ ರೂಪಾಯಿ ಇದೆ. ಈ ಗಳಿಕೆಯನ್ನು ‘ಅವತಾರ್ 2’ ಚಿತ್ರ ಹಿಂದಿಕ್ಕಲಿದೆ ಎಂದು ಊಹಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Rajamouli: ಹಾಲಿವುಡ್ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್’ ನಿರ್ದೇಶಕನಿಂದ ಆಹ್ವಾನ
‘ಟೈಟಾನಿಕ್’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಜೇಮ್ಸ್ ಕ್ಯಾಮೆರಾನ್ಗೆ ಇದೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ‘ಅವತಾರ್’ ಸೀಕ್ವೆಲ್ಗಳೊಂದಿಗೆ ಬರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ